Saturday, April 27, 2024

ಸತ್ಯ | ನ್ಯಾಯ |ಧರ್ಮ

ಡಾ.ಬಿ.ಎಂ.ತಿಪ್ಪೆಸ್ವಾಮಿ ಸಮಾಧಿ ದ್ವಂಸ: ನ್ಯಾಯಕ್ಕೆ ಆಗ್ರಹಿಸಿ ನಾಳೆ ದಾವಣಗೆರೆಯಲ್ಲಿ ಪ್ರತಿಭಟನೆ

ದಾವಣಗೆರೆ: ಪ್ರಖ್ಯಾತ ನೇತ್ರ ತಜ್ಞ, ಮಾಜಿ ಶಾಸಕ, ಜನಾನುರಾಗಿ ದಿ.ಡಾ.ಬಿ.ಎಂ. ತಿಪ್ಪೆಸ್ವಾಮಿಯವರ ಸಮಾಧಿ ಧ್ವಂಸ ಮಾಡಿರುವುದುನ್ನು ಖಂಡಿಸಿ ನ. 24ರ ಗುರುವಾರ ದಾವಣಗೆರೆಯಲ್ಲಿ ಪ್ರತಿಭಟನೆ ಜರುಗಲಿದೆ.

ಗುರುವಾರ ಬೆಳಗ್ಗೆ 11.30 ಕ್ಕೆ ಆರಂಭಗೊಳ್ಳಲಿರುವ ಪ್ರತಿಭಟನಾ ಮೆರವಣಿಗೆಯು ದಾವಣಗೆರೆಯ ವಿದ್ಯುತ್ ನಗರದ ಶಿವಕುಮಾರ್ ಬಡಾವಣೆಯಿಂದ ನಗರದ ಸಹಾಯಕ ಆಯುಕ್ತರ ಕಚೇರಿಯವರೆಗೆ (AC OFFICE) ನಡೆಯಲಿದೆ.

ದಾವಣಗೆರೆಯ ವಿದ್ಯುತ್ ನಗರದ ಶಿವಕುಮಾರ್ ಬಡಾವಣೆಯಲ್ಲಿ ಇರುವ ದಾವಣಗೆರೆ ಮಾಜಿ ಶಾಸಕರಾದ ದಿ. ಬಿ.ಎಂ. ತಿಪ್ಪೇಸ್ವಾಮಿ ಅವರಿಗೆ ಸೇರಿದ್ದ ಜಾಗ ಮತ್ತು ಅವರ ಸಮಾಧಿಯನ್ನು ದುಷ್ಕರ್ಮಿಗಳು ಒಡೆದು ಹಾಕಿದ್ದು, ಅದನ್ನು ತಡೆಯಲು ಹೋದ ತಿಪ್ಪೇಸ್ವಾಮಿಯವರ ಮಗಳು, ಲೇಖಕಿ ಬಿ.ಟಿ.ಜಾಹ್ನವಿ ಮತ್ತು ಕುಟುಂಬಸ್ಥರ ಮೇಲೂ ಸಹ ದುಷ್ಕರ್ಮಿಗಳು ಹಲ್ಲೆ ಮಾಡಲು ಯತ್ನಿಸಿದ್ದರು. ನಂತರ ಅವರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ ಎಂದು ಬಿ.ಎಂ. ತಿಪ್ಪೇಸ್ವಾಮಿಯವರ ಪುತ್ರಿ ಖ್ಯಾತ ಲೇಖಕಿ ಬಿ.ಟಿ ಜಾಹ್ನವಿ ತಿಳಿಸಿದ್ದಾರೆ.

ಇದನ್ನೂ ಓದಿ: ದಾವಣಗೆರೆ ಮಾಜಿ ಶಾಸಕರ ಸಮಾಧಿ ಒಡೆದ ದುಷ್ಕರ್ಮಿಗಳು ; ಜಮೀನಿನ ಅಕ್ರಮ ಪರಭಾರೆ ನಡೆದ ಬಗ್ಗೆ ಶಂಕೆ

ಬಿ.ಟಿ. ಜಾಹ್ನವಿಯವರು ನೀಡಿರುವ ಮಾಹಿತಿ ಪ್ರಕಾರ ಜಾಗದ ಎಲ್ಲಾ ಹಕ್ಕು ಬಿ.ಎಂ.ತಿಪ್ಪೇಸ್ವಾಮಿಯವರ ಕುಟುಂಬಕ್ಕೆ ಇದ್ದರೂ, ಕುಟುಂಬದ ನಾಲ್ವರು ಸದಸ್ಯರ ಸಮಾಧಿ ದ್ವಂಸಮಾಡಿರುವ ವ್ಯಕ್ತಿಗಳು, ಅಧಿಕಾರಿ ವರ್ಗದವರು ಭಷ್ಟಾಚಾರದ ಮೂಲಕ ಜಮೀನಿನ ನಕಲಿ ದಾಖಲೆ ಸೃಷ್ಟಿಸಿರುವ ಅನುಮಾನ ವ್ಯಕ್ತವಾಗುತ್ತಿದ್ದು, ಈ ಕುರಿತು ತಿನಿಖೆಯಾಗಬೇಕು ಎಂದು ಜಾಹ್ನವಿ ಮತ್ತು ಕುಟುಂಬದವರು ಆಗ್ರಹಿಸಿದ್ದರು. ತಮ್ಮ ಕುಟುಂಬಕ್ಕೆ ಆಗಿರುವ ಅನ್ಯಾಯದ ಕುರಿತು ಲೇಖಕಿ ಬಿ ಟಿ ಜಾಹ್ನವಿ ಕಣ್ಣೀರಿಟ್ಟು ನ್ಯಾಯಕ್ಕಾಗಿ ವಿನಂತಿಸಿಕೊಂಡ ವಿಡಿಯೋ ವೈರಲ್‌ ಆಗಿತ್ತು.

ಈ ಹಿನ್ನಲೆಯಲ್ಲಿ ಡಾ.ಬಿ.ಎಂ.ತಿಪ್ಪೆಸ್ವಾಮಿಯವರ ಕುಟುಂಬಕ್ಕಾಗಿರುವ ಅನ್ಯಾಯವನ್ನು ವಿರೋಧಿಸಿ, ಕುಟುಂಬದ ಜೊತೆ ನಾಡಿನ ಹಲವು ಪ್ರಗತಿಪರ ಮನಸ್ಸುಗಳು ಗುರುವಾರ ಪ್ರತಿಭಟನೆಯಲ್ಲಿ ಜೊತೆಗೂಡಲಿವೆ.

Related Articles

ಇತ್ತೀಚಿನ ಸುದ್ದಿಗಳು