Tuesday, May 7, 2024

ಸತ್ಯ | ನ್ಯಾಯ |ಧರ್ಮ

ಬುಡಕಟ್ಟು ಸಂಶೋಧನಾ ಅಧಿಕಾರಿಯಾಗಿ ಡಾ. ಕೃಷ್ಣಮೂರ್ತಿ ಕೆ ವಿ ನೇಮಕ

ಇರುಳಿಗ ಸಮುದಾಯ ಮೊದಲ ಪಿ.ಎಚ್‌ಡಿ ಪದವೀಧರ ಎನ್ನುವ ಅಗ್ಗಳಿಕೆಯನ್ನು ಹೊಂದಿರುವ ಡಾ. ಕೃಷ್ಣಮೂರ್ತಿ ಕೆ.ವಿ. ಅವರನ್ನು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಇದರ ಸಂಶೋಧನಾ ಅಧಿಕಾರಿಯಾಗಿ ನೇಮಿಸಿ ಸರ್ಕಾರ ಆದೇಶವನ್ನು ಹೊರಡಿಸಿದೆ.

ಕರ್ನಾಟಕದ ಅತಿ ಹಿಂದುಳಿದ ಸಮುದಾಯಗಳಲ್ಲಿ ಒಂದಾದ ಇರುಳಿಗ ಸಮುದಾಯದಿಂದ ಬಂದವರಾದ ಕೃಷ್ಣಮೂರ್ತಿಯವರು ಈಗಾಗಲೇ ಇರುಳಿಗರು – ಚಾರಿತ್ರಿಕ ಮತ್ತು ಸಾಂಸ್ಕೃತಿಕ ಅಧ್ಯಯನ ಎನ್ನುವ ವಿಷಯದಲ್ಲಿ ಸಮಾಜ ಶಾಸ್ತ್ರ ವಿಭಾಗದಲ್ಲಿ ಪಿಎಚ್‌.ಡಿ ಪದವಿ ಪಡೆದಿರುತ್ತಾರೆ.

ಈ ಹಿಂದೆಯೇ ಸಂಶೋಧನಾ ಸಂಸ್ಥೆಯ ಹುದ್ದೆ ತೆರವಾಗಿ ಕೃಷ್ಣಮೂರ್ತಿಯವರನ್ನು ನೇಮಕ ಮಾಡುವಂತೆ ಶಿಫಾರಸ್ಸು ಮಾಡಲಾಗಿತ್ತಾದರೂ ಹಿಂದಿನ ಸರ್ಕಾರ ಈ ಕುರಿತು ತಲೆ ಕೆಡಿಸಿಕೊಂಡಿರಲಿಲ್ಲ.

ಈಗ ಸರ್ಕಾರವು ನೀಡಿರುವ ಆದೇಶದಲ್ಲಿ ಗುತ್ತಿಗೆ ಆಧಾರದಡಿ ಕೃಷ್ಣಮೂರ್ತಿಯವರನ್ನು ಸಂಶೋಧನಾ ಅಧಿಕಾರಿಯಾಗಿ ನೇಮಿಸಿ ಆದೇಶ ನೀಡಿದ್ದು, ನಿಂತು ಹೋಗಿದ್ದ ಸಂಶೋಧನಾ ಸಂಸ್ಥೆಯ ಕಾರ್ಯಗಳು ಮುಂದುವರೆಯಲಿವೆ.

ಕೃಷ್ಣಮೂರ್ತಿಯವರ ಪರಿಚಯ

ನೂರಾರು ವರ್ಷಗಳ ಕಾಲ ನಾಗರಿಕ ಸಮಾಜದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಇರುಳಿಗ ಬುಡಕಟ್ಟು ಸಮುದಾಯದ ಕೆ.ವಿ. ಕೃಷ್ಣಮೂರ್ತಿ ಅವರು ಕರ್ನಾಟಕ ರಾಜ್ಯದಲ್ಲಿಯೇ ಪಿಎಚ್.ಡಿ ಪದವಿ ಪಡೆದ ಮೊದಲಿಗರಾಗಿದ್ದಾರೆ. ಕನಕಪುರ ತಾಲ್ಲೂಕಿನ ಕೊತಗಾನಹಳ್ಳಿ ಗ್ರಾಮದ ಡಾ.ಕೆ.ವಿ. ಕೃಷ್ಣಮೂರ್ತಿ ಅವರು ‘ಇರುಳಿಗರು: ಚಾರಿತ್ರಿಕ ಮತ್ತು ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಮಂಡಿಸಿದ ಮಹಾ ಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದಿದ್ದಾರೆ. ಸಾಮಾಜಿಕ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಇರುಳಿಗ ಸಮುದಾಯದ ಕುರಿತಾದ ವಿಸ್ತ್ರತ ಪರಿಚಯಾತ್ಮಕ ಲೇಖನವನ್ನು ಡಾ. ಕೃಷ್ಣಮೂರ್ತಿಯವರು ಪೀಪಲ್‌ ಮೀಡಿಯಾಕ್ಕಾಗಿ ಈ ಹಿಂದೆ ಬರೆದಿದ್ದು, ಅದನ್ನು ಈ ಲಿಂಕ್‌ ಬಳಸಿ ಓದಬಹುದು:

https://peepalmedia.com/iruligas-when-will-the-pain-of-the-people-end/

Related Articles

ಇತ್ತೀಚಿನ ಸುದ್ದಿಗಳು