Friday, April 25, 2025

ಸತ್ಯ | ನ್ಯಾಯ |ಧರ್ಮ

ಡಾ. ರಾಜಕುಮಾರ್-ಪುನಿತ್ ನಡೆದು ಬಂದ ದಾರಿಜೀವನದಲ್ಲಿ ಅಳವಡಿಸಿಕೊಳ್ಳಿ : ಜಿಲ್ಲಾಧಿಕಾರಿ ಸಿ. ಸತ್ಯಭಾಮ ಕರೆ

ಹಾಸನ : ಡಾ. ರಾಜಕುಮಾರ್ ಅವರ ಸರಳತೆ. ಅವರು ನಡೆದುಕೊಂಡು ಬಂದ ದಾರಿ ಹಾಗೂ ಪುನಿತ್ ರಾಜಕುಮಾರ್ ನಡೆದ ದಾರಿ ಎಲ್ಲಾವೂ ಕೂಡ ನಾವು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕಾಗಿದೆ ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ಕರೆ ನೀಡಿದರು. ನಗರದ ಎಂ.ಜಿ. ರಸ್ತೆ ಬಳಿ ಇರುವ ಗಾಂಧಿ ಭವನದಲ್ಲಿ ವ್ಯೂಮೆನ್ಸ್ ರೈಟ್ಸ್ ಹಾಗೂ ವಾಯು ವಿಹಾರ ಮಾಡುವವರಿಂದ ಗುರುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಡಾ. ರಾಜಕುಮಾರ್ ಅವರ 97ನೇ ವರ್ಷದ ಜನ್ಮ ದಿನಾಚರಣೆಯನ್ನು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಡಾ. ರಾಜಕುಮಾರ್ ಅವರು ಒಂದು ತುತ್ತು ಬಿಡದೆ ಊಟ ಮಾಡುವ ಮೂಲಕ ಅನ್ನದ ಮೇಲೆ ಪ್ರೀತಿ ನಮ್ಮ ಕನ್ನಡಿಗರು ಎಲ್ಲಾರು ಕಲಿಯ ಬೇಕಾದ ಆದರ್ಶ. ರಾಜಕುಮಾರ್ ಅವರ ಸರಳತೆ. ಅವರು ನಡೆದುಕೊಂಡು ಬಂದ ದಾರಿ, ಪುನಿತ್ ರಾಜಕುಮಾರ್ ನಡೆದುಕೊಂಡು ಬಂದ ದಾರಿ ಎಲ್ಲಾವೂ ಕೂಡ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು. ಡಾ. ರಾಜಕುಮಾರ್ ಜನ್ಮ ದಿನಾಚರಣೆ ಆದರೂ ಕೂಡ ಪುನಿತ್ ರಾಜಕುಮಾರ್ ಯುವ ಜನರಿಗೆ ಆದರ್ಶ. ಪುನಿತ್ ಅವರು ಮಾತನಾಡುವಾಗ ಯಾವಾಗಲೂ ನಗು ಮುಖದಲ್ಲಿ ಇರುತ್ತಿದ್ದರು. ಅವರು ಮಾಡಿರುವ ಸೇವಾ ಕಾರ್ಯಗಳು ಸಮಾಜದಲ್ಲಿ ಇಷ್ಟಪಟ್ಟರು. ಸಮಾಜದ ಒಳಿತಿಗಾಗಿ ಅವರು ಕೆಲಸ ಮಾಡಿ ಜನಪ್ರಿಯಗೊಂಡರು. ಡಾ. ರಾಜಕುಮಾರ್ ಚಲನಚಿತ್ರದಲ್ಲಿ ಒಂದು ಸಂದೇಶವಿತ್ತು ಎಂದು ಕಿವಿಮಾತು ಹೇಳಿದರು. ಜೀವನದಲ್ಲಿ ಅಳವಡಿಸಿಕೊಳ್ಳುವ ಸನ್ನಿವೇಶಗಳು ಪ್ರತಿ ಸಿನಿಮಾದಲ್ಲೂ ಸಿಗುತಿತ್ತು. ಎಷ್ಟೆ ನಟರು ಬಂದು ಹೋದರೂ ರಾಜಕುಮಾರ್ ಜೀವನ ಶೈಲಿ, ಸರಳತೆ ಅವರ ಹಾಡುಗಳು ಆಗೆ ಅವರು ಹಾಕಿ ಕೊಟ್ಟ ಕನ್ನಡದ ಹಾದಿ ಇರಬಹುದು ಇದೆಲ್ಲಾ ನಮಗೆ ಮಾಧರಿ. ಇಂದು ಸಂಭ್ರಮ ಪಡುವುದಲ್ಲ. ಜಮ್ಮುಕಾಶ್ಮೀರದಲ್ಲಿ ನಡೆದಂತಹ ಘಟನೆ ನಮಗೆ ಬಹಳಷ್ಟು ಪಾಠವನ್ನು ಕಲಿಸಿದೆ. ಈ ಬಗ್ಗೆ ಎಲ್ಲಾರೂ ಎಚ್ಚೆತುಕೊಳ್ಳಬೇಕು ಎಂದು ಇದೆ ವೇಳೆ ಡಾ ರಾಜಕುಮಾರ್ ಜನ್ಮ ದಿನಾಚರಣೆಗೆ ಶುಭಾಶಯ ಕೋರಿದರು. ಇದೆ ವೇಳೆ ಯುವಜನ ಕ್ರೀಡಾ ಇಲಾಖೆ ಸಹಯಕ ನಿರ್ದೇಶಕ ಸಿ.ಕೆ. ಹರೀಶ್, ವ್ಯೂಮೆನ್ಸ್ ರೈಟ್ಸ್ ಜಿಲ್ಲಾಧ್ಯಕ್ಷ ಬಸವರಾಜು, ರಾಮಗಿರಿ, ಧರ್ಮರಾಜ್ ಕಡಗ, ಲೋಕೇಶ್ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page