Tuesday, January 7, 2025

ಸತ್ಯ | ನ್ಯಾಯ |ಧರ್ಮ

ನಮ್ಮ ಭಾಷೆ ಉಳಿಸಿಕೊಂಡು ಬೇರೆ ಭಾಷೆ ಕಲಿಯಬಹುದುಸಾಹಿತಿ ಡಾ. ಚಂದ್ರಶೇಖರ್ ಕಂಬಾರ

ಹಾಸನ ಸಾಹಿತ್ಯೋತ್ಸವ-2025

ಹಾಸನ: ಇತರೆ ಭಾಷೆ ಕಲಿತು ನಮ್ಮ ಮಾತೃಭಾಷೆ ಬಿಡಬಾರದು. ನಮ್ಮ ಭಾಷೆ ಉಳಿಸಿಕೊಂಡು ಬೇರೆ ಭಾಷೆ ಕಲಿಯಬಹುದು, ಪ್ರತಿ ಜನ್ಮದಲ್ಲಿಯೂ ಕನ್ನಡದಲ್ಲೆ ಹುಟ್ಟಲು ಇಷ್ಟಪಡುತ್ತೇನೆ ಎಂಬುದಾಗಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ್ ಕಂಬಾರ ತಿಳಿಸಿದರು.


ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಸೋಮವಾರದಂದು ಹಮ್ಮಿಕೊಳ್ಳಲಾಗಿದ್ದ ಹಾಸನ ಸಾಹಿತ್ಯೋತ್ಸವ-2025 ಎರಡು ದಿನದ ಕಾರ್ಯಕ್ರಮದ ಮೊದಲ ದಿನದಂದು ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ನಾವು ನಮ್ಮ ಕನ್ನಡವನ್ನು ಹೇಗೆ ಉಳಿಸಿಕೊಳ್ಳುವುದರ ಬಗ್ಗೆಗಿಂತ ಯಾವುದಾದರೂ ಭಾಷೆ ಸಂಪರ್ಕ ಬಂದರೇ ಆ ಭಾಷೆ ಕಲಿತು ನಮ್ಮ ಭಾಷೆ ಬಿಡುತ್ತೇವೆ. ಆಗೆ ಆಗಬಾರದು. ನಮ್ಮ ಭಾಷೆ ಮೊದಲು ಉಳಿಸಿಕೊಂಡು ಬೇರೆ ಭಾಷೆಯನ್ನು ಕಲಿಯಬಹುದು. ನಮ್ಮ ಸುತ್ತಮುತ್ತಲ ಭಾಷ ಅನೇಕ ಇದ್ದು, ಆಂದ್ರ ಭಾಷೆ ಕಲಿತು ಆಂಧ್ರದವರೆ ಆಗಿ ಬಿಡುತ್ತೇವೆ. ಕೇರಳ ಭಾಷೆ ಕಲಿತು ಅವರೆ ಆಗಿ ಬಿಟ್ಟಿದ್ದೇವೆ. ಈಗೆ ನಮ್ಮೋರು ಅಲ್ಲಿಗೆ ಹೋಗುವುದು ಬೇಡ. ಅವರು ಬೇಕಾದರೇ ಬರಲಿ. ಆಗೆ ಬರುತ್ತಿದ್ದು, ಕನ್ನಡಿಗರು ಆಗುತ್ತಿದ್ದಾರೆ. ನಮ್ಮ ಕನ್ನಡಿಗರ ಬಗ್ಗೆಗೆ ಬಹಳ ಹೆಮ್ಮೆ ಅನಿಸುತ್ತದೆ. ಹುಟ್ಟಿದರೇ ಕನ್ನಡದಲ್ಲಿ ಹುಟ್ಟಬೇಕು. ಪ್ರತಿ ಜನ್ಮದಲ್ಲಿಯೂ ಕನ್ನಡದಲ್ಲೆ ಹುಟ್ಟಲಿ ಎಂದು ಹಾರೈಸುತ್ತೇನೆ. ನಮ್ದು ಪವಿತ್ರವಾದಂತಹ ಭಾಷೆ, ನಾಡು, ಕರ್ನಾಟಕ ಕನ್ನಡನಾಡು. ಇಂತಹ ನಾಡಿನ ಬಗ್ಗೆ ಬಹಳ ಹೆಮ್ಮೆ ಇದೆ. ಕನ್ನಡಿಗರಾಗೆ ಕಥೆ ಹೇಳುವವರು ಬೇರೆ ಯಾವ ದೇಶದಲ್ಲೂ ಯಾರು ಇಲ್ಲ. ಆಗೇ ಬೇರೆ ಭಾಷೆಯಲ್ಲಿ ಸಾಧ್ಯವಿಲ್ಲ. ಭಾರತ ದೇಶದ ಸಾಹಿತ್ಯಕ್ಕೆ ಹಿರಿಮೆ ವಿಶ್ವಕ್ಕೆ ಮಾದರಿಯಾಗಿದ್ದು, ನಮ್ಮ ದೇಶ ಇತರ ದೇಶಗಳೊಂದಿಗೆ ಹೊಂದಿರುವ ಸಂಬAಧ ನೋಡಿದಾಗ ಹೆಮ್ಮೆ ಎನಿಸುತ್ತದೆ. ವಚನ ಸಾಹಿತ್ಯ ಪ್ರಪಂಚದ 56 ದೇಶಗಳ ಪೈಕಿ ಕೆಲವು ವಿಶ್ವ ವಿದ್ಯಾನಿಲಯಗಳಲ್ಲಿ ಯಾವುದೇ ದೇಶಗಳಲ್ಲಿ ಕಾಣಲು ಸಾಧ್ಯವಿಲ್ಲ ಜೊತೆಗೆ ಕೆಲವು ದೇಶಗಳಲ್ಲಿ ಅದು ಪಠ್ಯವಾಗಿ ಬಳಕೆಯಾಗುತ್ತಿದೆ. ಇದು ನಮ್ಮ ಕನ್ನಡ ನಾಡಿನ ಹಿರಿಮೆಯನ್ನು ತೋರಿಸುತ್ತದೆ. ಕನ್ನಡ ಭಾಷೆಯನ್ನು ರಕ್ಷಿಸಿ ಘಟ್ಟಿಗೊಳಿಸುವ ಜೊತೆಗೆ ಇತರ ಭಾಷೆಯನ್ನು ಕಲಿಯುವ ಮೂಲಕ ಸ್ವಭಾಷೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದರಿಂದ ಮಾತ್ರ ಕನ್ನಡ ಉಳಿವು ಸಾಧ್ಯ. ಪ್ರಪಂಚದ ವಿವಿಧ ದೇಶಗಳಲ್ಲಿ ಕನ್ನಡಕ್ಕೆ ಹಾಗೂ ಕನ್ನಡಿಗರಿಗೆ ವಿಶೇಷವಾದ ಸ್ಥಾನಮಾನ ಲಭಿಸಿದೆ ಎಂದರು. ಕನ್ನಡದಲ್ಲಿ ಮಾಡುವ ಸರಳವಾದ ಕಥೆ ರಚನೆ ಬೇರೆ ಭಾಷೆಗಳಲ್ಲಿ ಸಾಧ್ಯವಿಲ್ಲ ವಿವಿಧ ದೇಶಗಳ ಹೆಣ್ಣು ಮಕ್ಕಳನ್ನು ಬಳಸಿಕೊಂಡು ನಡೆಸಿದ ಕಥೆ ರಚನೆ ಬಗ್ಗೆ ಅಮೆರಿಕದಲ್ಲಿ ನಡೆದ ಅಧ್ಯಯನದಿಂದ ಇದು ಬಹಿರಂಗವಾಗಿದೆ ಎಂದು ಹೇಳಿದರು.


ಹಿರಿಯ ಸಾಹಿತಿ ಡಾ. ಹಂ.ಪ ನಾಗರಾಜಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲಾ ಬರೆಯುವುದು, ಬರವಣಿಗೆ ಮಾಡುವುದು ರಸಿಕರಿಗೊಸ್ಕರ. ಕಂಬಾರರ ಕುರಿತು ಕರ್ನಾಟಕದಲ್ಲಿ ಮಾತ್ರ ಅಲ್ಲ. ದೇಶದ ಎಲ್ಲೆಡೆ ಮಾತನಾಡುತ್ತಾರೆ. ಕರ್ನಾಟಕಕ್ಕೆ ಕೀರ್ತಿ ತಂದುಕೊಟ್ಟವರು ಕಂಬಾರರು. ಪೇಪರ್ ಓದುವವರು ಬೇರೆ. ಆದರೇ ಸಾಹಿತ್ಯ ಓದುವವರು ಸಹದೃಯವಂತರು. ಕವಿ ಹೃದಯಕ್ಕೆ ಸಮನಾದ ಹೃದಯವಂತರು ಅನೇಕರು ಇದ್ದಾರೆ. ಕವಿಗೆ ಬಂದAತಹ ಎಲ್ಲಾ ದಾಖಲೆಯನ್ನು ದಾಖಲಿಸುವುದಕ್ಕೆ ಆಗುವುದಿಲ್ಲ. ಕವಿಯ ಮನಸ್ಸು ಮಲಗಿದ ವೇಳೆ ಕಲ್ಪನೆ, ವಿಚಾರಗಳು ಮೂಡುತ್ತದೆ. ಇದನ್ನು ಬರವಣಿಗೆಗೆ ತಂದು ರೂಪ ನೀಡುತ್ತಾನೆ ಎಂದರು. ಬಾದಾಮಿ ಚಾಲುಕ್ಯರ ಕಾಲದಲ್ಲಿ ಮೊದಲ ಸಾಹಿತ್ಯ ಏರ್ಪಡಿಸಿದ್ದರು. ಮೊಟ್ಟ ಮೊದಲು ರವಿ ಕೀರ್ತಿ ರಚನೆ ಮಾಡಿದ , ರಾಷ್ಟಕೂಟ ಕಾಲದಲ್ಲಿ ಸಾಹಿತ್ಯ ಸಂಭ್ರಮ ಮಾಡಲಾಯಿತು. ಹೀಗೆ ನಿರಂತರವಾಗಿ ಸಾಹಿತ್ಯ ಸಂಭ್ರಮ ಹರಿದು ಬಂದಿದೆ. ಕನ್ನಡ ಸಾಹಿತ್ಯಕ್ಕೆ ತನ್ನದೆಯಾದ ಶಕ್ತಿಯಿದೆ. ಕನ್ನಡ ಕವಿಗಳ ಸೃಜನದ ವೈಭವದ ವೇದಿಕೆ ಎಂದರೇ ಇದೆ ಸಾಹಿತ್ಯೋತ್ಸವ ಎಂದು ಬಣ್ಣಿಸಿದರು. ಕರ್ನಾಟಕದಲ್ಲಿ ಬಾದಾಮಿ ಚಾಲುಕ್ಯರ ಕಾಲದಲ್ಲಿ ಕ್ರಿ.ಶ. 620 ನೇ ಕಾಲದಲ್ಲಿ ಸಾಹಿತ್ಯ ಸಂಬ್ರಮ ಆರಂಭವಾಗಿತ್ತು. 1200 ವರ್ಷಗಳ ಹಿಂದೆ ಪಂಪನ ಅಧ್ಯಕ್ಷತೆ ಯಲ್ಲಿ ನಡೆದ ಸಾಹಿತ್ಯ ಸಂಭ್ರಮದಲ್ಲಿ ಮೊದಲ ಬಾರಿಗೆ ನಾಡೋಜ ಪ್ರಶಸ್ತಿ ವಿತರಣೆ ಅಂದಿನಿAದ ಆರಂಭವಾದ ಕನ್ನಡ ಸಾಹಿತ್ಯ ಸಂಬ್ರಮ ಇಂದು ದೇಶಾದ್ಯಂತ ಪಸರಿಸಿದೆ ಎಂದರು. ಹಲವರ ಪರಿಶ್ರಮದಿಂದ ಕನ್ನಡ ಒಳ್ಳೆಯ ಸ್ಥಾನಮಾನ ಗಳಿಸಿದೆ, ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬಾಲ್ಯದಿಂದಲೇ ಮಕ್ಕಳಿಗೆ ಕನ್ನಡದ ಪ್ರಾಮುಖ್ಯತೆ ಬಗ್ಗೆ ಮನವರಿಕೆ ಮಾಡಿಕೊಡಬೇಕು, ಪ್ರಪಂಚದಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ಕನ್ನಡ ಭಾಷಾ ಪರಂಪರೆ ಇನ್ನಷ್ಟು ವಿಜೃಂಬಿಸಬೇಕು ಈ ನಿಟ್ಟಿನಲ್ಲಿ ಎಲ್ಲಾ ಕನ್ನಡ ಮನಸ್ಸುಗಳು ಇನ್ನಷ್ಟು ಹೆಚ್ಚು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಹೇಳಿದರು.
ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಮಾತನಾಡಿ, ತಮ್ಮ ತಂದೆಯವರ ಕಾಲದಿಂದ ಸಾಹಿತ್ಯದ ಬಗ್ಗೆ ವಿಶೇಷ ಪ್ರೀತಿ, ಆಸಕ್ತಿಯನ್ನು ತಮ್ಮ ಕುಟುಂಬ ಹೊಂದಿದೆ. ಜ್ಞಾನಪೀಠ ಪುರಸ್ಕöÈತರಾದ ಚಂದ್ರಶೇಖರ್ ಕಂಬಾರ ಅವರ ಬಗ್ಗೆ ಬಾಲ್ಯದಿಂದಲೇ ತಮ್ಮ ತಂದೆಯವರು ಸಾಕಷ್ಟು ವಿಚಾರಗಳನ್ನು ತಿಳಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದರು. ಹಾಸನ ಜಿಲ್ಲೆಯಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ನಮ್ಮ ಹೆಮ್ಮೆ, ಇಂತಹ ಕಾರ್ಯಕ್ರಮಗಳಿಗೆ ಜಾತ್ಯತೀತವಾಗಿ ಪಕ್ಷಾತೀತವಾಗಿ ಜಿಲ್ಲೆಯ ಮೂಲೆ ಮೂಲೆಗಳಿಂದ ಜನರು ಆಗಮಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕು. ಆಗಿದ್ದಾಗ ಮಾತ್ರ ಕನ್ನಡ ಭಾಷೆ ಹಾಗೂ ಸಾಹಿತ್ಯದ ರಕ್ಷಣೆ ಸಾಧ್ಯ. ಕನ್ನಡ ಹಾಗೂ ಕನ್ನಡ ಪರ ಯಾವುದೇ ಕಾರ್ಯಕ್ರಮಗಳ ಯಶಸ್ವಿಗೆ ತನ್ನ ಸಹಕಾರ ಸದಾ ಇರುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಮಾತನಾಡಿ, ಕನ್ನಡದ ಕೀರ್ತಿ ಪತಾಕೆಯನ್ನು ದೇಶ ವಿದೇಶಗಳಿಗೆ ಪಸರಿಸಿದ ಕೀರ್ತಿ ಚಂದ್ರಶೇಖರ್ ಕಂಬಾರ ಅವರಿಗೆ ಸಲ್ಲುತ್ತದೆ. ಅವರು ಹಾಸನಕ್ಕೆ ಬಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಿದೆ. ಹಾಸನಾಂಬ ಕಲಾಕ್ಷೇತ್ರ ಸಾಹಿತ್ಯಾಸಕ್ತರಿಂದ ತುಂಬಿ ತುಳುಕುತ್ತಿರುವುದು ಸಾಹಿತ್ಯ ಕ್ಷೇತ್ರಕ್ಕೆ ಇಂದಿಗೂ ಎಸ್ಟು ಪ್ರಾಮುಖ್ಯತೆ ಇದೆ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ನಾವು ಶಾಲಾ ಕಾಲೇಜು ಹಂತದಲ್ಲಿರುವಾಗ ಅವರ ಸಾಹಿತ್ಯವನ್ನು ಕಲಿತು ಇಂದು ಅವರ ಜೊತೆಗೆ ವೇದಿಕೆ ಹಂಚಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು. ಜಿಲ್ಲಾಡಳಿತದ ವತಿಯಿಂದ ಮೊದಲ ಬಾರಿಗೆ ಈ ತಂತ್ರಾAಶ ಅಳವಡಿಸಿಕೊಂಡು ಕನ್ನಡದ ಯಾವುದೇ ದಾಖಲೆಗಳು ಕಳವಾಗದಂತೆ ಹಾಗೂ ಅವುಗಳನ್ನು ರಕ್ಷಣೆ ಮಾಡಲು ಮುಂದಾಗಿದ್ದೇವೆ. ಮಾತೃಭಾಷೆಯ ಬಗ್ಗೆ ಅಭಿಮಾನ ಹಾಗೂ ಪ್ರೀತಿ ಪ್ರತಿಯೊಬ್ಬರಲ್ಲೂ ಇರಬೇಕು, ಈ ನಿಟ್ಟಿನಲ್ಲಿ ಯಾವುದೇ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಎಲ್ಲರೂ ತಪ್ಪದೆ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಲೆನಾಡು ತಾಂತ್ರಿಕ ಕಾಲೇಜು ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅವರು ಚಿನ್ನದ ಪೆನ್ನನ್ನು ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ್ ಕಂಬಾರ ಅವರಿಗೆ ಉಡುಗರೆಯಾಗಿ ಅರ್ಪಿಸಿದರು.
ಇದೆ ವೇಳೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ, ಎಂಸಿಇ ಕಾಲೇಜು ಅಧ್ಯಕ್ಷ ಅಶೋಕ್ ಹಾರನಹಳ್ಳಿ, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ , ಸಾಹಿತಿ ಚಂದ್ರಶೇಖರ್ ಕಂಬಾರ, ಸಾಹಿತಿ ನಾಡೋಜ ಹಂಪ ನಾಗರಾಜಯ್ಯ, ರಾಜ್ಯ ಪರಿಷತ್ತು ಕೋಶಾಧ್ಯಕ್ಷ ಪಟೇಲ್ ಪಾಂಡು, ಸಂಚಾಲಕ ಬಿ.ಆರ್. ಲಕ್ಷ÷್ಮಣ್ ರಾವ್, ಹಿರಿಯ ಪತ್ರಕರ್ತ ಗಿರೀಶ್ ರಾವ್ ಹತ್ತಾರ್ ಜೋಗಿ, ಕಸಾಪ ಮಾಜಿ ಅದ್ಯಕ್ಷ ಹೆಚ್.ಬಿ. ಮದನ್ ಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘುಗೌಡ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page