Monday, December 23, 2024

ಸತ್ಯ | ನ್ಯಾಯ |ಧರ್ಮ

ಕ್ರೀಡೆ ಎಂಬುದು ದೈಹಿಕ, ಮಾನಸಿಕ ಸ್ಥೈರ್ಯ ತುಂಬಲಿದೆ ಸುಜಲಾ ಡಾ. ಎಸ್. ಲೋಕೇಶ್ ಹೇಳಿಕೆ

      ನಗರದ ಸಾಲಗಾಮೆ ರಸ್ತೆ ಬಳಿ ಇರುವ ಸರಕಾರಿ ವಿಜ್ಞಾನ ಕಾಲೇಜಿನ ಕ್ರಿಕೆಟ್ ಮೈದಾನದಲ್ಲಿ ಸುಜಲಾ ಪಿಯು ಕಾಲೇಜಿನಿಂದ ಹಮ್ಮಿಕೊಳ್ಳಲಾಗಿದ್ದ ಸುಜಲಾ ಕಫ್ ಒಂದು ದಿನದ ಕ್ರಿಕೆಟ್ ಪಂದ್ಯಾವಳಿಯನ್ನು ಬ್ಯಾಟಿಂಗ್ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸುಜಲ ಕಫ್ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದು, ವರ್ಷವೆಲ್ಲಾ ಓದು ಓದು ಎಂದು ಒತ್ತಡದಲ್ಲಿರುವ ವಿದ್ಯಾರ್ಥಿಗಳು ದೈಹಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ. ಮಾನಸಿಕ ಸ್ಥೈರ್ಯ ತುಂಬ ಬೇಕಾದರೇ ಓದುವಿನ ಜೊತೆ ಇಂತಹ ಕ್ರೀಡೆ ಪ್ರಮುಖವಾಗಿದೆ ಎಂದು ಕಿವಿಮಾತು ಹೇಳಿದರು. ಈ ಆಟೋಟ ಮೂಲಕ ಲವಲವಿಕೆಯಿಂದ ಭಾಗವಹಿಸಿದ್ದಾರೆ. ಈ ಒಂದು ದಿವಸ ಎಲ್ಲಾ ಉಪನ್ಯಾಸಕರು, ವಿದ್ಯಾರ್ಥಿಗಳು ನಗುವಿನಿಂದ ಪಾಲ್ಗೊಂಡಿದ್ದು, ಕ್ರೀಡೆ ಎಂಬುದು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯಕ್ಕೆ ಉತ್ತಮವಾಗಿದೆ ಎಂದರು. ನಮ್ಮ ಕಾಲೇಜಿನಿಂದ ಏಳೆಂಟು ತಂಡಗಳು ಭಾಗವಹಿಸಿದೆ. ಸೋಮವಾರದಂದು ಬೆಳಗಿನಿಂದ ಸಂಜೆವರೆಗೂ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು, ಕೊನೆಯ ಪಂದ್ಯಾವಳಿಯು ಯಾವ ತಂಡ ಗೆಲುವು ಪಡೆದಿರುತ್ತದೆ ಆ ತಂಡದ ವಿರುದ್ಧ ಉಪನ್ಯಾಸಕರ ಮ್ಯಾಚ್ ನಡೆಯಲಿದೆ. ಮ್ಯಾನ್ ಆಫ್ ದ ಮ್ಯಾಚ್, ರನ್ನರ‍್ಸ್, ವಿನ್ನರ‍್ಸ್  ಇವರಿಗೆಲ್ಲಾ ನಮ್ಮ ಕಾಲೇಜು ಡೇ ಸಮಯದಲ್ಲಿ ಬಹುಮಾನ ವಿತರಣೆ ಮಾಡಲಾಗುವುದು ಎಂದು ಹೇಳಿದರು.

      ಈ ಸಂದರ್ಭದಲ್ಲಿ ಸುಜಲಾ ಪಿಯು ಕಾಲೇಜಿನ ಕಾರ್ಯದರ್ಶಿ ಶ್ವೇತಾ ಲೋಕೇಶ್, ಪ್ರಾಂಶುಪಾಲ ನಾಗೇಶ್, ಚಂದ್ರಶೇಖರ್, ಅಶೋಕ್ ಹಾಗೂ ಉಪನ್ಯಾಸಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page