ತೆಲಂಗಾಣ : ದುರ್ಗಾ ಮಾತೆಯ ಮೂರ್ತಿಯನ್ನು ಕೆಡವಲು ಯತ್ನಿಸಿದ ಆರೋಪದಡಿ ಇಬ್ಬರು ಮುಸ್ಲಿಂ ಮಹಿಳೆಯರನ್ನು ಬಂಧಿಸಿರುವ ಘಟನೆ ಹೈದರಾಬಾದ್‌ನ ಖೈರತಾಬಾದ್‌ನಲ್ಲಿ ನಡೆದಿದೆ.
ಮೊದಲು ಚರ್ಚ್ ಹೊರಗಡೆ ಬುರ್ಕಾ ಹಾಕಿಕೊಂಡು ಕಾಣಿಸಿಕೊಂಡ ಇಬ್ಬರು ಮಹಿಳೆಯರು ಚರ್ಚ್ ಹೊರಗೆ ನಿರ್ಮಿಸಿದ್ದ ವರ್ಜಿನ್ ಮೇರಿ ಮೂರ್ತಿಯನ್ನು ಧ್ವಂಸಗೊಳಿಸಲು ಯತ್ನಿಸಿದ್ದಾರೆ. ತದನಂತರ ಹತ್ತಿರದಲ್ಲೇ ನವರಾತ್ರಿ ಪ್ರಯುಕ್ತ ದುರ್ಗಾ ಪೂಜೆಗೆಂದು ಹಾಕಲಾಗಿದ್ದ ಪೆಂಡಾಲ್ ಒಳಗೆ ನುಗ್ಗಿ ದುರ್ಗಾ ಮೂರ್ತಿಗೆ ಹಾನಿ ಮಾಡಿದ್ದಾರೆ. ಇದನ್ನು ನೋಡಿ ಸ್ಥಳೀಯರು ಆಕ್ರೋಶಗೊಂಡಾಗ ಸ್ಪ್ಯಾನರ್ ಹಿಡಿದಿದ್ದ ಒಬ್ಬ ಮಹಿಳೆ ಜನರ ಮೇಲೆ ದಾಳಿ ನಡೆಸಿದ್ದಾಳೆ ಎಂದು ಪೋಲೀಸರು ತಿಳಿಸಿದ್ದಾರೆ.
ಘಟನೆಯನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್‌ಗಳು ಪ್ರತಿಭಟನೆಯನ್ನು ನಡೆಸಿವೆ. ದುರ್ಗಾ ಮೂರ್ತಿಗೆ ಹಾನಿ ಮಾಡಿದ್ದ ಇಬ್ಬರು ಮಹಿಳೆಯರನ್ನು ಸ್ಥಳೀಯರು ಹೈದರಾಬಾದ್ ಪೋಲಿಸರಿಗೆ ಒಪ್ಪಿಸಿದ್ದು ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಲ್ಲಿನ ಪೋಲೀಸರು ಹೇಳಿದ್ದಾರೆಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.