Home ದೇಶ ಇ-20 ಪೆಟ್ರೋಲ್ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಶೇ 45ರಷ್ಟು ವಾಹನ ಮಾಲೀಕರಿಂದ ಸಿದ್ಧತೆ: ಲೋಕಲ್ ಸರ್ಕಲ್ಸ್...

ಇ-20 ಪೆಟ್ರೋಲ್ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಶೇ 45ರಷ್ಟು ವಾಹನ ಮಾಲೀಕರಿಂದ ಸಿದ್ಧತೆ: ಲೋಕಲ್ ಸರ್ಕಲ್ಸ್ ಸಮೀಕ್ಷೆ

0

ದೆಹಲಿ: ಇಥನಾಲ್ ಮಿಶ್ರಿತ E-20 ಪೆಟ್ರೋಲ್ ಬಳಕೆಯಿಂದಾಗಿ ವಾಹನಗಳ ಇಂಜಿನ್‌ಗಳಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಳ್ಳುತ್ತಿದ್ದು, ಪರಿಹಾರ ಕೋರಿ ನ್ಯಾಯಾಲಯದ ಮೊರೆ ಹೋಗಲು ಬಹುತೇಕ ವಾಹನ ಸವಾರರು ನಿರ್ಧರಿಸಿದ್ದಾರೆ. ಲೋಕಲ್ ಸರ್ಕಲ್ಸ್ ನಡೆಸಿದ ತಾಜಾ ಸಮೀಕ್ಷೆಯಿಂದ ಈ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿವೆ.

E-20 ಪೆಟ್ರೋಲ್‌ನಿಂದಾಗಿ ತಮ್ಮ ವಾಹನಗಳು ಹಾಳಾಗುತ್ತಿವೆ, ಇಂಜಿನ್‌ನಲ್ಲಿ ಸಮಸ್ಯೆಗಳು ಎದುರಾಗುತ್ತಿವೆ ಮತ್ತು ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂದು ವಾಹನ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಸುಮಾರು ಅರ್ಧದಷ್ಟು ಜನರು ನಷ್ಟ ಪರಿಹಾರಕ್ಕಾಗಿ ಗ್ರಾಹಕರ ವೇದಿಕೆಯನ್ನು ಆಶ್ರಯಿಸಲು ಸಿದ್ಧರಾಗುತ್ತಿದ್ದಾರೆ ಎಂದು ವರದಿ ಹೇಳಿದೆ.

ಪರಿಹಾರಕ್ಕಾಗಿ ಕಾನೂನು ಹೋರಾಟ

ಲೋಕಲ್ ಸರ್ಕಲ್ಸ್ ಸಂಸ್ಥೆಯು ದೇಶದ 216 ಜಿಲ್ಲೆಗಳ ಸುಮಾರು 22,೦೦೦ ವಾಹನ ಸವಾರರನ್ನು ಒಳಪಡಿಸಿ ಈ ಬೃಹತ್ ಸಮೀಕ್ಷೆಯನ್ನು ನಡೆಸಿದೆ. ವರದಿಯ ಪ್ರಕಾರ, E-20 ಪೆಟ್ರೋಲ್‌ನಿಂದಾಗಿ ತಮ್ಮ ವಾಹನಗಳಿಗೆ ಹಾನಿಯಾಗುತ್ತಿದ್ದು, ಶೇಕಡಾ 31ರಷ್ಟು ಗ್ರಾಹಕರು ಪರಿಹಾರಕ್ಕಾಗಿ ಗ್ರಾಹಕ ನ್ಯಾಯಾಲಯದ (ಕನ್ಸ್ಯೂಮರ್ ಫೋರಂ) ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

ಇನ್ನು ಶೇಕಡಾ 14ರಷ್ಟು ಜನರು ಎಲ್ಲಾ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಒಟ್ಟಾರೆಯಾಗಿ ಶೇಕಡಾ 45ರಷ್ಟು ವಾಹನ ಮಾಲೀಕರು ಈ ವಿಷಯವಾಗಿ ಕಾನೂನಾತ್ಮಕವಾಗಿ ನ್ಯಾಯಾಲಯಗಳ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

You cannot copy content of this page

Exit mobile version