ಬೆಂಗಳೂರು: ಬಳ್ಳಾರಿ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಅವರ ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ದಾಳಿ ನಡೆಸಿದೆ. ಬಳ್ಳಾರಿಯಲ್ಲಿ ಕನಿಷ್ಠ ನಾಲ್ಕು ಕಡೆ ದಾಳಿ ನಡೆಯುತ್ತಿದೆ.
ಇಡಿ ಅಧಿಕಾರಿಗಳು ಇಂದು ಬೆಳಗ್ಗೆ ನಾಲ್ಕು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಭರತ್ ರೆಡ್ಡಿ ಮನೆ, ಅವರ ತಂದೆ ಕಚೇರಿ, ಶಾಸಕರ ಚಿಕ್ಕಪ್ಪನ ಮನೆ ಮತ್ತು ಕಚೇರಿಯಲ್ಲಿ ಇಡಿ ಶೋಧ ನಡೆಸುತ್ತಿದೆ.
ಇಡಿ ಅಧಿಕಾರಿಗಳ ನಾಲ್ಕು ತಂಡಗಳು ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ. ಭರತ್ ರೆಡ್ಡಿ ಮತ್ತು ಅವರ ಸಂಬಂಧಿಕರ ಮೇಲೆ ಯಾವ ಪ್ರಕರಣದಲ್ಲಿ ದಾಳಿ ನಡೆಸಲಾಗುತ್ತಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ನಾರಾ ಭರತ್ ರೆಡ್ಡಿ ಕಾಂಗ್ರೆಸ್ ನಿಂದ ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಭರತ್ ರೆಡ್ಡಿ ಅವರು ಬಿಜೆಪಿಯ ಸೋಮಶೇಖರ ರೆಡ್ಡಿ ಮತ್ತು ಕೆಆರ್‌ಪಿಪಿಯ ಲಕ್ಷ್ಮಿ ಅರುಣಾ ಅವರನ್ನು ಸೋಲಿಸಿದ್ದರು.