Home ಬ್ರೇಕಿಂಗ್ ಸುದ್ದಿ ಯುದ್ಧ ಎಫೆಕ್ಟ್‌ ರಾಜ್ಯದಲ್ಲಿ ಮಾರುಕಟ್ಟೆಯಲ್ಲಿ ಮೊಟ್ಟೆ ದರ 3.50 ರೂ.ಗೆ ಕುಸಿತ

ಯುದ್ಧ ಎಫೆಕ್ಟ್‌ ರಾಜ್ಯದಲ್ಲಿ ಮಾರುಕಟ್ಟೆಯಲ್ಲಿ ಮೊಟ್ಟೆ ದರ 3.50 ರೂ.ಗೆ ಕುಸಿತ

ಹಾವೇರಿ : ವಾಣಿಜ್ಯ ಸಿಲಿಂಡರ್ ಅಭಾವದಿಂದ ಹೋಟೆಲ್ ಉದ್ಯಮಕ್ಕೂ ಪೆಟ್ಟು ಬಿದ್ದಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಊಟ ಸಿಗದೆ ಜನ ಪರದಾಡುವಂತಾಗಿದೆ. ಇದೀಗ ಕುಕ್ಕುಟ ಉದ್ಯಮಕ್ಕೂ (ಕೋಳಿ ಸಾಕಾಣಿಕೆ)  ಇರಾನ್​ (Iran).. ಇಸ್ರೇಲ್​-ಅಮೆರಿಕಾ (Israel-America) ಯುದ್ಧದ ಬಿಸಿ ತಟ್ಟಿದೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಹೆಚ್ಚು ಸಮಸ್ಯೆ ಆಗುತ್ತಿದೆ.

ಹಾವೇರಿಯಲ್ಲಿ ಪ್ರತಿದಿನ ಭಾರತದಿಂದ ಸುಮಾರು 80 ಲಕ್ಷ ಮೊಟ್ಟೆಗಳು ವಿದೇಶಗಳಿಗೆ ರಫ್ತು ಆಗುತ್ತಿದ್ದವು. ಆದರೆ ಯುದ್ಧದ ಹಿನ್ನೆಲೆ ಆಮದು-ರಫ್ತು ವ್ಯವಹಾರ ಸ್ಥಗಿತಗೊಂಡಿರುವುದರಿಂದ ಮೊಟ್ಟೆಗಳ ದರದಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಮೊದಲು ಒಂದು ಮೊಟ್ಟೆ 5 ರಿಂದ 6 ರೂಪಾಯಿಗೆ ಮಾರಾಟವಾಗುತ್ತಿದ್ದರೆ, ಈಗ 3.5 ರೂಪಾಯಿಯಿಂದ 4 ರೂಪಾಯಿಗೆ ಮಾತ್ರ ಮಾರಾಟವಾಗುತ್ತಿದೆ ಎಂದು ಪೌಲ್ಟ್ರಿ ಫಾರ್ಮ್ ಮಾಲೀಕರು ತಿಳಿಸಿದ್ದಾರೆ.

ಕರ್ನಾಟಕದಿಂದ ಬೇರೆ ದೇಶಗಳಿಗೆ ರಫ್ತಾಗುತ್ತಿದ್ದ ಮೊಟ್ಟೆಗಳು ಯುದ್ಧದ ಕಾರಣದಿಂದ ಸ್ಥಗಿತಗೊಂಡಿವೆ. ರಫ್ತು ನಿಂತು ಹೋಗಿರುವುದರಿಂದ ಮೊಟ್ಟೆ ಮತ್ತು ಕೋಳಿ ಉದ್ಯಮಕ್ಕೆ ಭಾರಿ ನಷ್ಟ ಉಂಟಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಮೊಟ್ಟೆ ದರ 3.50 ರೂ.ಗೆ ಕುಸಿದಿದ್ದು, ಉದ್ಯಮಿದಾರರು ತೀವ್ರ ಆತಂಕದಲ್ಲಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಪ್ರತಿದಿನ ಸುಮಾರು 40 ಲಕ್ಷ ಮೊಟ್ಟೆಗಳು ಉತ್ಪಾದನೆಯಾಗುತ್ತಿದ್ದು, ರಫ್ತು ನಿಂತಿರುವ ಕಾರಣ ಸಾವಿರಾರು ಮೊಟ್ಟೆಗಳು ಮಾರಾಟವಾಗದೆ ಉಳಿಯುತ್ತಿವೆ. ಕೆಲವು ಫಾರ್ಮ್‌ಗಳಲ್ಲಿ ಮಾರಾಟವಾಗದ ಮೊಟ್ಟೆಗಳನ್ನು ಗುಂಡಿ ತೋಡಿ ಹೂತು ಹಾಕಲಾಗುತ್ತಿದೆ. ಪ್ರತಿ ಫಾರ್ಮ್‌ಗೆ ದಿನಕ್ಕೆ 1 ರಿಂದ 1.5 ಲಕ್ಷ ರೂಪಾಯಿ ನಷ್ಟವಾಗುತ್ತಿದೆ ಎಂದು ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯದವಲ್ಲಿ ಪ್ರತಿದಿನ ಸುಮಾರು 2.2 ಕೋಟಿ ಮೊಟ್ಟೆಗಳು ಉತ್ಪಾದನೆಯಾಗುತ್ತವೆ. ಈ ಮೊಟ್ಟೆಗಳ ಒಂದು ಭಾಗವನ್ನು ತಮಿಳುನಾಡಿನ ನಾಮಕ್ಕಲ್ ಕೇಂದ್ರಕ್ಕೆ ಕಳುಹಿಸಿ ಅಲ್ಲಿಂದ ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಸಾಮಾನ್ಯವಾಗಿ ನಾಮಕ್ಕಲ್ ನಿಂದ ದಿನಕ್ಕೆ ಸುಮಾರು 70 ಲಕ್ಷದಿಂದ 1 ಕೋಟಿ ಮೊಟ್ಟೆಗಳು ಗಲ್ಫ್ ದೇಶಗಳಿಗೆ ಸಾಗುತ್ತವೆ. ರಫ್ತು ವ್ಯತ್ಯಯ, ಹಬ್ಬದ ಕಾಲದ ಬೇಡಿಕೆ ಕುಸಿತ ಹಾಗೂ ಬೇಸಿಗೆ ಪರಿಣಾಮ ಮೊಟ್ಟೆ ಬೆಲೆ ಇಳಿಕೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ರಫ್ತು ಸ್ಥಗಿತ: ಭಾರತದಲ್ಲಿಉತ್ಪಾದನೆಯಾಗುವ ಒಟ್ಟು ಮೊಟ್ಟೆಗಳಲ್ಲಿಸುಮಾರು ಶೇ.80ರಷ್ಟು ಮೊಟ್ಟೆಗಳು ಕೊಲ್ಲಿರಾಷ್ಟ್ರಗಳಿಗೆ ರಫ್ತಾಗುತ್ತಿದ್ದವು. ಆದರೆ, ಪ್ರಸ್ತುತ ಮಧ್ಯಪ್ರಾಚ್ಯದಲ್ಲಿನಡೆಯುತ್ತಿರುವ ಯುದ್ಧದ ಭೀತಿಯಿಂದಾಗಿ ಸಾರಿಗೆ ವ್ಯವಸ್ಥೆ ಏರುಪೇರಾಗಿದ್ದು, ರಫ್ತು ಸಂಪೂರ್ಣವಾಗಿ ಸ್ಥಗಿತವಾಗಿದೆ.

ರಂಜಾನ್‌ ಪ್ರಭಾವ: ರಮ್ಜಾನ್‌ ಉಪವಾಸದ ಅವಧಿಯಲ್ಲಿಮಾರುಕಟ್ಟೆಯ ಬೇಡಿಕೆಯಲ್ಲಾದ ಬದಲಾವಣೆಗಳು ಸಹ ಬೆಲೆ ಇಳಿಕೆಗೆ ಪೂರಕವಾಗಿವೆ.

ಗ್ರಾಹಕರಿಗೆ ಸಂತಸ
ಬೆಲೆ ಏರಿಕೆಯ ಬಿಸಿಯಲ್ಲಿ ಬೆಂದಿದ್ದ ಜನಸಾಮಾನ್ಯರಿಗೆ ಈ ‘ಮೊಟ್ಟೆ ದರ ಕುಸಿತ’ ದೊಡ್ಡ ನಿರಾಳತೆ ನೀಡಿದೆ. ಮೊಟ್ಟೆ ಪ್ರಿಯರು ಈ ಬೆಲೆ ಇಳಿಕೆಯನ್ನು ಸಂಭ್ರಮದಿಂದ ಸ್ವಾಗತಿಸಿದ್ದು, ಮಾರುಕಟ್ಟೆಯಲ್ಲಿಖರೀದಿ ಚುರುಕುಗೊಂಡಿದೆ.

ರಫ್ತು ಮಾರುಕಟ್ಟೆ ಚೇತರಿಸಿಕೊಳ್ಳುವವರೆಗೆ ಈ ಕಡಿಮೆ ದರ ಮುಂದುವರಿಯುವ ಸಾಧ್ಯತೆಯಿದೆ. ಇದು ಕುಕ್ಕುಟೋದ್ಯಮಿಗಳಿಗೆ ತುಸು ಆತಂಕ ತಂದಿದ್ದರೂ, ಪ್ರೋಟೀನ್‌ ಯುಕ್ತ ಆಹಾರವನ್ನು ಕಡಿಮೆ ದರದಲ್ಲಿಪಡೆಯುತ್ತಿರುವ ಗ್ರಾಹಕರಿಗೆ ಮಾತ್ರ ಇದು ನಿಜಕ್ಕೂ ಹಬ್ಬದ ಸುದ್ದಿಯಾಗಿದೆ.

You cannot copy content of this page

Exit mobile version