Home ರಾಜಕೀಯ ಶ್ರೀನಗರದ ಜಾಮಿಯಾ ಮಸೀದಿಯಲ್ಲಿ ಈದ್ ಪ್ರಾರ್ಥನೆಗೆ ಅವಕಾಶವಿಲ್ಲ

ಶ್ರೀನಗರದ ಜಾಮಿಯಾ ಮಸೀದಿಯಲ್ಲಿ ಈದ್ ಪ್ರಾರ್ಥನೆಗೆ ಅವಕಾಶವಿಲ್ಲ

0

ಹೊಸದಿಲ್ಲಿ: ಶ್ರೀನಗರದ ಐತಿಹಾಸಿಕ ಜಾಮಿಯಾ ಮಸೀದಿಯಲ್ಲಿ ಈದ್ ನಮಾಝ್ ಗೆ ಅಧಿಕಾರಿಗಳು ಅನುಮತಿ ನೀಡದೆ ಏಪ್ರಿಲ್ 10, ಬುಧವಾರ  ಬೆಳಗ್ಗೆ ಬೀಗ ಜಡಿದಿದ್ದಾರೆ, ಹಾಗೂ ಹುರಿಯತ್ ನಾಯಕ ಮಿರ್ವೈಜ್ ಉಮರ್ ಫಾರೂಕ್ ಅವರನ್ನು ಮತ್ತೆ ಗೃಹಬಂಧನದಲ್ಲಿ ಇರಿಸಲಾಗಿದೆ.

ಶ್ರೀನಗರದ ನೌಹಟ್ಟಾ ಪ್ರದೇಶದಲ್ಲಿರುವ 14 ನೇ ಶತಮಾನದ ಮಸೀದಿಯ ಆಡಳಿತ ಮಂಡಳಿ ಅಂಜುಮನ್ ಔಕಾಫ್ ಜಾಮಿಯಾ ಮಸೀದಿಯ ಹೇಳಿಕೆಯ ಪ್ರಕಾರ, ಬುಧವಾರ ಬೆಳಿಗ್ಗೆ ಪ್ರಾರ್ಥನೆಯ ನಂತರ ಯಾವುದೇ ಲಿಖಿತ ವಿವರಣೆಯಿಲ್ಲದೆ ಪೊಲೀಸ್ ಸಿಬ್ಬಂದಿ ಮಸೀದಿಯ ಗೇಟ್‌ಗಳಿಗೆ ಬೀಗ ಹಾಕಿದ್ದಾರೆ.

ಬೆಳಿಗ್ಗೆ 9:30 ಕ್ಕೆ ನಿಗದಿಯಾಗಿದ್ದ ಸಭೆಯಲ್ಲಿ ಈದ್ ಪ್ರಾರ್ಥನೆಯನ್ನು ಮಸೀದಿಯಲ್ಲಿ ನಡೆಸಲು ಅನುಮತಿ ಸೀಡಲಾಗುವುದಿಲ್ಲ ಎಂದು ಅಧಿಕಾರಿಗಳು ಬುಧವಾರ ಬೆಳಿಗ್ಗೆ ತಿಳಿಸಿದ್ದರು ಎಂದು ಅಂಜುಮನ್ ಹೇಳಿದ್ದಾರೆ. ಇಂದು ಮುಂಜಾನೆ ಮಿರ್ವೈಜ್ ಉಮರ್ ಫಾರೂಕ್ ಅವರನ್ನು ಮತ್ತೆ ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ..

ಮಂಗಳವಾರ ಸಂಜೆ ಲಡಾಖ್‌ನ ಕಾರ್ಗಿಲ್ ಜಿಲ್ಲೆಯಲ್ಲಿ ಅರ್ಧಚಂದ್ರ ಕಾಣಿಸಿಕೊಂಡ ನಂತರ ಜಮ್ಮು ಮತ್ತು ಕಾಶ್ಮೀರದಾದ್ಯಂತ ಬುಧವಾರ ಈದ್ ಆಚರಿಸಲಾಗುತ್ತದೆ. ದೇಶದ ಉಳಿದ ಭಾಗಗಳಲ್ಲಿ, ಮುಸ್ಲಿಂ ತಿಂಗಳ ರಂಜಾನ್ ಉಪವಾಸದ ಕೊನೆಗೊಳಿಸುವ ಸೂಚಿಸುವ ಹಬ್ಬವನ್ನು ಗುರುವಾರ ಆಚರಿಸಲಾಗುತ್ತದೆ.

ಕೇಂದ್ರ ಸರ್ಕಾರವು ಆರ್ಟಿಕಲ್ 370 ಅನ್ನು ತೆಗೆದು ಹಾಕಿದ ನಂತರ, ಹಿಂದಿನ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಾಗಿಸಲಾಗಿತ್ತು., ಸೂಕ್ಷ್ಮ ಪ್ರದೇಶವಾದ ಶ್ರೀನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳು ಭುಗಿಲೇಳಬಹುದು ಎಂಬ ಕಾರಣವನ್ನು ಉಲ್ಲೇಖಿಸಿ ಅಧಿಕಾರಿಗಳು ಅಂಜುಮನ್‌ಗೆ ಜಾಮಿಯಾ ಮಸೀದಿಯಲ್ಲಿ ಈದ್ ಪ್ರಾರ್ಥನೆಗಳನ್ನು ಆಯೋಜಿಸಲು ಅವಕಾಶ ನೀಡಲಿಲ್ಲ. 

ಇದಕ್ಕೂ ಮೊದಲು, ಜಮ್ಮು ಕಾಶ್ಮೀರದ ಅತಿದೊಡ್ಡ ಮಸೀದಿಯಾಗಿರುವ ಜಾಮಿಯಾವನ್ನು ಶಾಬ್-ಎ-ಕದ್ರ್ ಮತ್ತು ಜುಮಾತ್-ಉಲ್-ವಿದಾದ ಸಭೆಯ ಪ್ರಾರ್ಥನೆ ಮಾಡದಂತೆ ಮುಚ್ಚಲಾಗಿತ್ತು ಮತ್ತು ಈ ಸಂದರ್ಭಗಳಲ್ಲಿ ಮಿರ್ವೈಜ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ಶ್ರೀನಗರದ ಅವರ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡದಂತೆ ಅವರನ್ನು ತಡೆಹಿಡಿಯಲಾಯಿತು.

You cannot copy content of this page

Exit mobile version