Home ವಿದೇಶ ವಿದ್ಯಾರ್ಥಿನಿ, ಮಹಿಳಾ ಸಹದ್ಯೋಗಿ ಮೇಲೆ ಎಲಾನ್‌ ಲೈಂಗಿಕ ಕಿರುಕುಳ: ವಾಲ್‌ ಸ್ಟ್ರೀಟ್‌ ಜರ್ನಲ್‌ ಆರೋಪ

ವಿದ್ಯಾರ್ಥಿನಿ, ಮಹಿಳಾ ಸಹದ್ಯೋಗಿ ಮೇಲೆ ಎಲಾನ್‌ ಲೈಂಗಿಕ ಕಿರುಕುಳ: ವಾಲ್‌ ಸ್ಟ್ರೀಟ್‌ ಜರ್ನಲ್‌ ಆರೋಪ

0

ವಾಷಿಂಗ್ಟನ್: ಖ್ಯಾತ ಉದ್ಯಮಿ, ಟೆಸ್ಲಾ ಮತ್ತು ಸ್ಪೇಸ್‍ಎಕ್ಸ್ ಸಿಇಓ ಎಲಾನ್ ಮಸ್ಕ್ ಅವರು ತನ್ನ ಮಹಿಳಾ ಸಹದ್ಯೋಗಿ ಮತ್ತು ಇಂಟರ್ನ್‌ಷಿಪ್‌ಗೆ ಬಂದಿದ್ದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಾಲ್‍ಸ್ಟ್ರೀಟ್ ಜರ್ನಲ್ ಪ್ರಕಟಿಸಿರುವ ವಿಶೇಷ ವರದಿಯಲ್ಲಿ ಆರೋಪಿಸಿದೆ.

ಮಹಿಳಾ ಉದ್ಯೋಗಿಯ ಪದೆ ಪದೆ ಲೈಂಗಿಕ ಸಂರ್ಪಕಕ್ಕಾಗಿ ಆಗ್ರಹಿಸುತ್ತಿದ್ದ ಮಸ್ಕ್‌ ಹಲವು ಬಾರಿ, ಆಕೆಗೆ ತನ್ನಿಂದ ಮಗು ಹೊಂದಬೇಕು ಮಸ್ಕ್ ಒತ್ತಾಯಿಸಿದ್ದರು ಎನ್ನಲಾಗಿದೆ. ಆದರೆ ಇದಕ್ಕೆ ಮಹಿಳೆ ನಿರಾಕರಿಸಿದ್ದಾರೆ. ಈ ಕಾರಣದಿಂದ ಆಕೆಗೆ ವೇತನ ಬಡ್ತಿ ನಿರಾಕರಿಸಿರುವ ಮಸ್ಕ್, ಆಕೆಯ ಕ್ಷಮತೆ ಬಗ್ಗೆಯೂ ದೂರಿದ್ದರು ಎಂದು ವರದಿಯಲ್ಲಿ ಆರೋಪಿಸಲಾಗಿದೆ.

ಪ್ರತಿಕ್ರಿಯೆಗೆ ನಿರಾಕರಿಸಿದ ಮಸ್ಕ್:‌ ಉಭಯ ಸಂಸ್ಥೆಗಳಲ್ಲಿ ಮಹಿಳಾ ಉದ್ಯೋಗಿಗಳು ಸರಾಗವಾಗಿ ಉದ್ಯೋಗ ನಿರ್ವಹಿಸಲಾಗದ ಸಂಸ್ಕೃತಿ ಬೆಳೆದಿದೆ ಎಂದು ವಾಲ್‍ಸ್ಟ್ರೀಟ್ ಜರ್ನಲ್ ಅಪಾದಿಸಿದೆ. ಜರ್ನನ್ ತನ್ನ ವರದಿಯಲ್ಲಿ ಹಲವು ಎಸ್‍ಎಂಎಸ್ ಸಂದೇಶಗಳು, ಇ-ಮೇಲ್‍ಗಳು ಮತ್ತು ಇತರ ದಾಖಲೆಗಳನ್ನು ಉಲ್ಲೇಖಿಸಿದೆ. ಸಂತ್ರಸ್ತ ಮಹಿಳೆಯರ ಕುಟುಂಬದ ಸದಸ್ಯರು, ಮಾಜಿ ಉದ್ಯೋಗಿಗಳು ಮತ್ತು ಸ್ನೇಹಿತರೂ ಸೇರಿದಂತೆ 48ಕ್ಕೂ ಹೆಚ್ಚು ಮಂದಿಯನ್ನು ಸಂದರ್ಶನ ನಡೆಸಿ ಈ ವರದಿ ಸಿದ್ಧಪಡಿಲಾಗಿದೆ. ಮಸ್ಕ್ ಜತೆಗೆ ನಿಕಟವಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆ ಮಸ್ಕ್ ಜತೆಗಿನ ಲೈಂಗಿಕ ಚಟುವಟಿಕೆಗಳ ಬಗ್ಗೆ ವಿವರ ನೀಡಿದ್ದಾರೆ. ಈ ಬಗ್ಗೆ ಜರ್ನಲ್, ಮಸ್ಕ್ ಅವರ ಪ್ರತಿಕ್ರಿಯೆ ಕೇಳಿದ್ದರೂ, ಅದಕ್ಕೆ ಸ್ಪಂದಿಸಿಲ್ಲ ಎಂದು ವರದಿ ಹೇಳಿದೆ.

ಇಂಟರ್ನ್‍ಶಿಪ್ ಮಾಡುತ್ತಿದ್ದ ವಿದ್ಯಾರ್ಥಿನಿ ಆಕೆ ಸ್ಪೇಸ್‍ಎಕ್ಸ್ ಸುಧಾರಿಸುವ ಹೊಸ ಕಲ್ಪನೆಗಳನ್ನು ಮಂಡಿಸುವ ಸಲುವಾಗಿ ಮಸ್ಕ್ ಅವರನ್ನು ಭೇಟಿ ಮಾಡಿದ್ದಳು. ಇದು ಪ್ರಣಯ ಸಂಬಂಧ, ಚುಂಬನ ಹಾಗೂ ಕ್ರಮೇಣ ಲೈಂಗಿಕ ಚಟುವಟಿಕೆಗಳಿಗೆ ವಿಸ್ತರಿಸಿತು ಎಂದು ಆಕೆ ಸ್ನೇಹಿತೆಯರ ಬಳಿ ಹೇಳಿಕೊಂಡಿರುವುದಾಗಿ ವರದಿಯಾಗಿದೆ. ವಿದ್ಯಾರ್ಥಿನಿಯರ ಇಂಟರ್ನ್‍ಶಿಪ್ ಮುಗಿಯುವ ಹಿಂದಿನ ದಿನ ಸಿಸಿಲಿಗೆ ವಿಮಾನದಲ್ಲಿ ಈಕೆಯನ್ನು ಕರೆದೊಯ್ದಿದ್ದರು ಎಂದು ದಾಖಲೆಗಳನ್ನು ಉಲ್ಲೇಖಿಸಿ ವಾಲ್‍ಸ್ಟ್ರೀಟ್ ಜರ್ನಲ್ ಹೇಳಿದೆ. ಈ ಸಂಬಂಧವನ್ನು ಮುಂದುವರಿಸಲು ಮಸ್ಕ್ ಪ್ರಯತ್ನಿಸಿದರೂ, ವಿದ್ಯಾರ್ಥಿನಿ ದೂರ ಉಳಿದಿದ್ದಾಳೆ ಎಂದು ತಿಳಿದು ಬಂದಿದೆ.

You cannot copy content of this page

Exit mobile version