ಬೆಂಗಳೂರು ನಗರದ ಲಗ್ಗೆರೆಯ ಲಕ್ಷ್ಮಿ ದೇವಿ ನಗರದ K.S.C.B ಸಮುದಾಯ ಭವನದಲ್ಲಿ ನಡೆದ BWSSB ಹೊರಗುತ್ತಿ ನೌಕರರ ನೇರವೇತನ ಪಾವತಿ ಬಗ್ಗೆ ಸಭೆ ನಡೆಸಲಾಯಿತು.
ಇದರಲ್ಲಿ ಸಾವಿರಾರು ಹೊರಗುತ್ತಿಗೆ ನೌಕರರನು ಉದ್ದೇಶಿಸಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಮೈಸೂರು ನಾರಾಯಣ್ ಅವರು ಹೊರಗುತ್ತಿಗೆ ಪದ್ಧತಿ ಹೋಗಲಾಡಿಸಬೇಕು. ಮಂಡಳಿಯಿಂದ ನೇರವೇತನ ಕೊಡಲೇಬೇಕು’ ಎಂದು ಹೇಳಿದರು.
ಮಂಡಳಿಯಿಂದ ಏಜೆನ್ಸಿ ಮುಖಾಂತರ 3000 ಜನ ಹೊರಗುತ್ತಿಯ ನೌಕರರಿಗೆ ಸಂಬಳ ಕೊಡುವ ಮಂಡಳಿಗೆ ವರ್ಷಕ್ಕೆ 10.8000000( 10 ಕೋಟಿ 80 ಲಕ್ಷ ) ರೂಗಳು ಮಂಡಳಿಗೆ ನಷ್ಟವಾಗುತ್ತಿದೆ’ ಎಂದ ಅವರು ಹೇಗೆಂದರೆ ಒಬ್ಬ ಕಾರ್ಮಿಕರ ಮಂಡಳಿಯಿಂದ 30000( ಮೂವತು ಸಾವಿರ )ರೂ ಬಿಲ್ ಪಾವತಿಸಿದ್ದಾರೆ ಎಜೆನ್ಸಿ ಅವರಿಗೆ 11% ಕಾಮಿಶನ್ ಕೊಡಲಾಗುತ್ತಿದೆ’ ಎಂದರು.
ಮಂಡಳಿಯ ಹಣ ದುರ್ಬಳಕೆ ಆಗುತ್ತಿದೆ ಸಾರ್ವಜನಿಕರ ಹಣ ಏಜೆನ್ಸಿಗಳ ಪಾಲಾಗುತ್ತಿದೆ. ಈ ಮಂಡಳಿಯಿಂದ ಹೊರಗುತ್ತಿಗೆ ನೌಕರರಿಗೆ ನೇರ ವೇತನ (DPS) ಕೊಡುವುದರಿಂದ ಮಂಡಳಿಗೆ ಸಾಕಷ್ಟು ಹಣ ಉಳಿಕೆಯಾಗಿ ಮಂಡಳಿಯ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಾಗಿದೆ’ ಎಂದರು.
ಇದು ಒಂದು ಏಜೆನ್ಸಿಯ ಕಥೆ ಮಂಡಳಿಯಲ್ಲಿ ಇನ್ನೂ ಹಲವಾರು ಏಜೆನ್ಸಿಗಳು ಇವೆ. ನೇರ ವೇತನವನ್ನು ಕೊಡಿ ಮಂಡಳಿಯನ್ನು ಉಳಿಸಿ ಹೊರಗುತ್ತಿಗೆ ಎಂಬ ಭೂತವನ್ನು ತೊಲಗಿಸಿ’ ಎಂಬುದು ನಮ್ಮ ಒತ್ತಾಯವಾಗಿದೆ.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಮೈಸೂರ್ ನಾರಾಯಣ್, ಎಸಿಸಿಟಿಯು ಪ್ರಧಾನ ಕಾರ್ಯದರ್ಶಿ.ಮೈತ್ರಿ ಕೃಷ್ಣನ್, ಸ್ಯಾನಿಟರಿ ಯೂನಿಯನ್ ಅಧ್ಯಕ್ಷ ಸಿದ್ದಪ್ಪ, ಬೆಂಗಳೂರು ಜಲ ಮತ್ತು ಒಳಚರಂಡಿ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ರಾಮಚಂದ್ರ. ಪ್ರಧಾನ ಕಾರ್ಯದರ್ಶಿ ಜೆ ಕುಮಾರ್, ಸಾಮಾಜಿಕ ಹೋರಾಟಗಾರರದ ಜ್ಯೋತಿಶ್ ಕುಮಾರ್ ಬಿಬಿಎಂಪಿಯ ಪೌರಕಾರ್ಮಿಕ ಅಧ್ಯಕ್ಷರು ನಿರ್ಮಲ ಅವರು ಉಪಸ್ಥಿತಿಯಲ್ಲಿದ್ದರು.