Home Uncategorized ಸಿಂಗಪುರದಲ್ಲಿ ಬೇಗ ಮಕ್ಕಳನ್ನು ಹಡೆಯಲು ಪ್ರೋತ್ಸಾಹ : ತಂದೆಗೆ ಸಿಗುತ್ತೆ ಪ್ರಿತೃತ್ವ ರಜೆ

ಸಿಂಗಪುರದಲ್ಲಿ ಬೇಗ ಮಕ್ಕಳನ್ನು ಹಡೆಯಲು ಪ್ರೋತ್ಸಾಹ : ತಂದೆಗೆ ಸಿಗುತ್ತೆ ಪ್ರಿತೃತ್ವ ರಜೆ

0

ಸಿಂಗಪುರ: ಸಿಂಗಪುರದಲ್ಲಿ ಸರ್ಕಾರ ಮತ್ತು ನಾಗರಿಕರು ಚೀನಾ ಹೊಸವರ್ಷ ‘ಡ್ರ್ಯಾಗನ್‌’ ಹಬ್ಬಕ್ಕೆ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ಈ ವರ್ಷದಲ್ಲಿ ಮಕ್ಕಳು ಹುಟ್ಟಿಸಿದರೆ ಮಂಗಳಕರ ಎನ್ನುವ ನಂಬಿಕೆ ಇದೆ. ಈ ಕಾರಣದಿಂದ ಪ್ರಧಾನ ಮಂತ್ರಿ ಲೀ ಸಿಯೆನ್‌ ಲೂಂಗ್‌ ಅವರು ಈ ವರ್ಷ ಮಕ್ಕಳನ್ನು ಪಡೆಯುವಂತೆ ಸಿಂಗಪುರದ ದಂಪತಿಗಳಿಗೆ ವಿಶೇಷ ಪ್ಯಾಕೇಜ್‌ ಘೊಷಿಸುವ ಮೂಲಕ ಮನವಿ ಮಾಡಿದ್ದಾರೆ.


ಹೊಸ ವರ್ಷದ ವಾರ್ಷಿಕ ಸಂದೇಶ ನೀಡುವ ವೇಳೆ ಮಾತನಾಡಿದ ಅವರು, ‘ಡ್ರ್ಯಾಗನ್‌ ವರ್ಷ ಎನ್ನುವುದು ಶಕ್ತಿ ಮತ್ತು ಅದೃಷ್ಟದ ಸಂಕೇತವಾಗಿದೆ. ಹಾಗಾಗಿ ಯುವ ಜೋಡಿಗಳು ನಿಮ್ಮ ಕುಟುಂಬಕ್ಕೆ ‘ಪುಟ್ಟ ಡ್ರ್ಯಾಗನ್’ ಅನ್ನು ಸೇರಿಸಿಕೊಳ್ಳಲು ಇದು ಉತ್ತಮ ಸಮಯವಾಗಿದೆ. ಅಂಥ ಕುಟುಂಬಕ್ಕೆ ನಮ್ಮ ಸರ್ಕಾರದಿಂದ ಬೆಂಬಲ ಸಿಗುತ್ತದೆ ಎಂದರು.


ನಾವು ‘ಸಿಂಗಪುರ್ ಮೇಡ್ ಫಾರ್ ಫ್ಯಾಮಿಲಿಸ್’ ಅನ್ನುವ ಧ್ಯೇಯ ವಾಕ್ಯವನ್ನು ಪಾಲಿಸುತ್ತೇವೆ. ಮುಂದೆಯೂ ನಿಮ್ಮ ಮದುವೆ ಮತ್ತು ಪೋಷಕತ್ವದ ಆಕಾಂಕ್ಷೆಗಳನ್ನು ಬೆಂಬಲಿಸುತ್ತೇವೆ. ಎಂದು ಲೀ ಹೇಳಿರುವುದಾಗಿ ಚಾನೆಲ್ ನ್ಯೂಸ್ ಏಷ್ಯಾ ಹೇಳಿದೆ. ಮಕ್ಕಳನ್ನು ಯಾವಾಗ ಪಡೆಯಬೇಕು ಎಂಬುದು ಪಾಲಕರ ನಿರ್ಧಾರ. ಆದರೆ ಹೆಚ್ಚಿನವರು ತಂದೆಯಾಗುವ ಅನುಭವವನ್ನು ಬೇಗ ಪಡೆಯಲಿ ಎನ್ನುವದಷ್ಟೇ ನಮ್ಮ ಆಶಯ ಎಂದು ಪ್ರೋತ್ಸಾಹಕ ನೂಡಿಗಳನ್ನಾಡಿದರು.


ಶಿಶುಪಾಲನೆ ಮತ್ತು ಉದ್ಯೋಗ ಜೀವನದ ನಡುವೆ ಹೊಂದಾಣಿಕೆ ಇರಲಿ ಎನ್ನುವ ಕಾರಣಕ್ಕೆ ಇತ್ತೀಚೆಗೆ ಸರ್ಕಾರದಿಂದ ಎರಡು ವಾರಗಳಿಗೆ ಪಿತೃತ್ವ ರಜೆಯನ್ನು ನೀಡಲಾಗುತ್ತಿತ್ತು. ಈಗ ಮತ್ತೆ ಎರಡು ವಾರಗಳಿಂದ ನಾಲ್ಕು ವಾರಗಳಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು. ಸಿಂಗಪುರವು ಫೆಬ್ರುವರಿ 10-11 ರಂದು ಚೈನೀಸ್ ಹೊಸ ವರ್ಷ ಆಚರಿಸಲು ಸಜ್ಜಾಗಿದ್ದು, ಪ್ರಧಾನಿ ಶುಭಾಶಯ ಕೋರಿದರು.

You cannot copy content of this page

Exit mobile version