ಹಾಸನ : ಪುಟ್ಭಾತ್ ಮೇಲೆ ಹಣ್ಣು ವ್ಯಾಪಾರ ಹಾಗೂ ಇತರೆ ಅಂಗಡಿ ಹಾಕಿರುವುದನ್ನ ತೆರವಿಗೆ ಬಂದ ನಗರಸಭೆ ಆಯುಕ್ತರು ಮತ್ತು ಸಿಬ್ಬಂದಿ ಮೇಲೆ ಕೆಲ ಮುಸ್ಲಿಂ ವ್ಯಾಪಾರಸ್ತರು ಅವಾಜ್ ಹಾಕಿದಾಗ ರಕ್ಷಣೆಗೆಂದು ಪೊಲೀಸರ ನೆರವಿನೊಂದಿಗೆ ತೆರವು ಮಾಡಿದ ಘಟನೆ ಇಂದು ಬೆಳ್ಳಂಬೆಳಿಗ್ಗೆ ನಗರದ ಮಹಾವೀರ ವೃತ್ತದ ಬಳಿ ನಡೆದಿದೆ.
ಬೀದಿ ಬದಿ ಸುರಕ್ಷಿತವಾಗಿ ವ್ಯಾಪಾರ ಮಾಡಲಿ ಎಂದು ಮಳೆ, ಗಾಳಿ, ಬಿಸಿಲು ಬಾರದಂತೆ ಶೆಡ್ ಹಾಕಿಕೊಡಲಾಗಿದ್ದರೂ ಕೆಲ ಹಣ್ಣಿನ ಹಾಗೂ ಇತರೆ ವ್ಯಾಪಾರಸ್ತರು ಶೆಡ್ ನಿಂದ ಹೊರಗೆ ಪಾದಚಾರಿಗಳು
ನಡೆಯುವ ಸ್ಥಳದಲ್ಲಿ ವ್ಯಾಪಾರ ಮಾಡುತ್ತಿದ್ದರು. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ ಹಿನ್ನಲೆಯಲ್ಲಿ ಸೂಚನೆ ಮೆರೆಗೆ ನಗರಸಭೆ ಆಯುಕ್ತರು, ಅಧಿಕಾರಿ ವೃಂಧ ಹಾಗೂ ಸಿಬ್ಬಂದಿಗಳು ಬುಧವಾರದಂದು ಬೆಳಿಗ್ಗೆ ತೆರವು ಕಾರ್ಯಚರಣೆ ಮಾಡಲು ಮುಂದಾದರು. ಈ ವೇಳೆ ಕೆಲ ಹಣ್ಣಿನ ವ್ಯಾಪಾರಸ್ತರು ವಿರೋಧವ್ಯಕ್ತಪಡಿಸಿದಲ್ಲದೇ ಅವಾಜ್ ಕೂಡ ಹಾಕಿದರು. ನಗರಸಭೆ ಆಯುಕ್ತರ ಮಾತಿಗೆ ಬೆಲೆ ಕೊಡಲಿಲ್ಲ. ಈ ವೇಳೆ ಮಾತಿಗೆ ಮಾತು ಕೂಡ ಬೆಳೆಯಿತು. ನಂತರದಲ್ಲಿ ಪೊಲೀಸ್ ಇಲಾಖೆಗೆ ಕರೆ ಮಾಡಿ ಪೊಲೀಸ್ ಭದ್ರತೆಯಲ್ಲಿ ತೆರವು ಕಾರ್ಯಚರಣೆಯನ್ನು ಸುಗಮವಾಗಿ ನಡೆಸಿದರು ಈ ಹಿಂದೆಯೂ ಕೂಡ ನಗರಸಭೆಯಿಂದ ಬೀದಿ ಬದಿ ವ್ಯಾಪಾರಸ್ತರಿಗೆ ಸೂಚನೆ ನೀಡಿ ಪುಟ್ಭಾತ್ ನಿಂದ ಶೆಡ್ ಒಳಗೆ ವ್ಯಾಪಾರ ಮಾಡುವಂತೆ ಹೇಳಿ ತೆರವು ಮಾಡಲಾಗಿತ್ತು. ಒಂದು ವರ್ಷದ ನಂತರ ಮತ್ತೆ ಪುಟ್ಭಾತ್ ಗೆ ತಮ್ಮ ವ್ಯಾಪಾರ ಮುಂದುವರೆಸಿದ್ದಾರೆ.