ಮದ್ಯ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಗುರುವಾರ ರಾತ್ರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬಂಧನದ ಬಗ್ಗೆ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಅಣ್ಣಾ ಹಜಾರೆ ಗ್ರೂಪ್ ಆಗಿನ ದೆಹಲಿ ಸಿಎಂ ಶೀಲಾ ದೀಕ್ಷಿತ್ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.
ಆಗ ಶೀಲಾ ದೀಕ್ಷಿತ್ ವಿರುದ್ಧ ಆರೋಪದ ಮೇಲೆ ಆರೋಪ ಹೊರಿಸುತ್ತಿದ್ದರು. ಒಂದಕ್ಕೂ ಸಾಕ್ಷ್ಯ ಒದಗಿಸುತ್ತಿರಲಿಲ್ಲ. ಈಗ ಕೇಜ್ರಿವಾಲ್ ಅದೇ ಪರಿಸ್ಥಿತಿಯಲ್ಲಿದ್ದಾರೆ. ಅವರು ಮಾಡಿದ್ದು ಈಗ ಅವರಿಗೇ ಸಂಭವಿಸಿದೆ. “ಎಲ್ಲರೂ ಅವರವರ ಲೆಕ್ಕ ನೀಡಲೇಬೇಕಾಗುತ್ತದೆ” ಎಂದು ಅವರು ತಮ್ಮ ಟ್ವಿಟರ್ ಪೋಸ್ಟಿನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಕರ್ಮ ಎನ್ನುವುದು ಯಾರನ್ನೂ ಬಿಡುವುದಿಲ್ಲ. ಎಲ್ಲರೂ ಒಂದಲ್ಲ ಒಂದು ದಿನ ತಾವು ಮಾಡಿದ್ದಕ್ಕೆ ಪ್ರತಿಫಲ ಉಣ್ಣಲೇ ಬೇಕು. ಅಲ್ಲಿಯ ತನಕ ಕರ್ಮದ ಹೊರೆ ಹೆಗಲ ಮೇಲೆಯೇ ಇರುತ್ತದೆ ಎಂದು ಅವರು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.
https://x.com/Sharmistha_GK/status/1770889164239552882?s=20