ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಜೂನ್ 9ರಂದು ನಟ ದರ್ಶನ ಅವರ ಥಾರ್ ಕಾರು ಕೊಲೆ ಆಗಿದೆ ಎಂದು ಶಂಕಿಸಲಾದ ಶೆಡ್ ಗೆ ಬಂದ ವಿಡಿಯೋ ವೈರಲ್ ಆಗಿದೆ.
ಆರ್ ಆರ್ ನಗರದ ಪಟ್ಟಣಗೆರೆ ಶೆಡ್ ಗೆ ಎಂಟ್ರಿ ಆಗಿರುವ ದರ್ಶನ್ ಅವರ ಕಾರಿನ ದೃಶ್ಯ ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೂನ್ 9 ರ ಬೆಳಗ್ಗಿನ ಜಾವ 3.27 ರ ವೇಳೆಗೆ ಈ ದೃಶ್ಯ ಸೆರೆಯಾಗಿದೆ.

ಹೌದು ದರ್ಶನ್ ಶೆಡ್ಡಿಗೆ ಎಂಟ್ರಿ ಆಗಿರುವ ದೃಶ್ಯ ಆರ್ ಆರ್ ನಗರ ಪಟ್ಟಣಗೆರೆಯ ಒಂದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ತಿಳಿದು ಬಂದಿದೆ. ಮೊದಲು ಸ್ಕಾರ್ಪಿಯೋದಲ್ಲಿ ವಿನಯ್ ಶಡ್ಡಿಗೆ ಎಂಟ್ರಿ ಕೊಟ್ಟಿದ್ದಾನೆ. ಸ್ಕಾರ್ಪಿಯೋ ಬೆನ್ನಲ್ಲೇ ನಟ ದರ್ಶನ್ ಅವರ ಥಾರ್ ಕಾರು ಮಧ್ಯರಾತ್ರಿ 3.30ಕ್ಕೆ ಎಂಟ್ರಿ ಕೊಟ್ಟಿದೆ. ಕಾರಿನಲ್ಲಿ ದರ್ಶನ್ ಇದ್ದರೋ ಇಲ್ಲವೋ ಎಂಬ ಬಗ್ಗೆ ತನಿಖೆಯಿಂದ ಹೊರ ಬರಬೇಕಿದೆ.