ಬೆಂಗಳೂರು : ಇತ್ತೀಚೆಗೆ ಸರ್ಕಾರಿ ಸಾರಿಗೆ ಬಸ್‌ಗಳ ಮೇಲೆ ತಂಬಾಕು ಜಾಹೀರಾತು (Tobacco Advertising) ಸಂಬಂಧ ರಾಜ್ಯಾದ್ಯಂತ ಭಾರೀ ಆಕ್ರೋಶ ಉಂಟಾಗಿತ್ತು. ಬಸ್‌ಗಳ (Bus) ಮೇಲಿನ ಜಾಹೀರಾತು ಪೋಸ್ಟರ್‌ಗಳನ್ನ (Poster) ಕಿತ್ತು ಹಾಕಿ ಜನರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದರು. ಇದೀಗ ಜನಾಕ್ರೋಶಕ್ಕೆ ಕೆಎಸ್‌ಆರ್‌ಟಿಸಿ (KSRTC) ಮಣಿದಿದ್ದು, 15 ದಿನಗಳೊಳಗೆ ಬಸ್‌ಗಳ ಮೇಲಿನ ತಂಬಾಕು ಜಾಹೀರಾತುಗಳನ್ನು ತೆಗೆದು ಹಾಕುವಂತೆ ಸೂಚನೆ ನೀಡಿದೆ.
ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತಿನ ಪೋಸ್ಟರ್ ಅಂಟಿಸುವುದರ ವಿರುದ್ಧ ಭಾರೀ ಆಕ್ರೋಶ ಉಂಟಾದ ಹಿನ್ನೆಲೆ ಸಾರ್ವಜನಿಕರು, ಸಂಘಟನೆಗಳು ಬಸ್‌ಗಳಿಗೆ ಅಂಟಿಸಲಾಗಿದ್ದ ಜಾಹೀರಾತು ಪೋಸ್ಟರ್‌ಗಳನ್ನು ಕಿತ್ತೆಸೆದಿದ್ದರು. ಈ ರೀತಿಯ ಜಾಹೀರಾತುಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದರು.
ಇದೀಗ ಜನಾಕ್ರೋಶಕ್ಕೆ ಮಣಿದಿರುವ ಸರ್ಕಾರ, ಕೂಡಲೇ ತಂಬಾಕು ಉತ್ಪನ್ನಗಳನ್ನ ಪ್ರಮೋಟ್ ಮಾಡುವ ಜಾಹಿರಾತುಗಳ ತೆರವಿಗೆ ಕೆಎಸ್‌ಆರ್‌ಟಿಸಿ ಎಂಡಿಗೆ ಸೂಚನೆ ನೀಡಿದೆ. ರಾಜ್ಯದ 2 ಸಾವಿರ ಬಸ್‌ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತು ಪೋಸ್ಟರ್ ಅನ್ನು ಅಳವಡಿಕೆ ಮಾಡಲಾಗಿದ್ದು, 15 ದಿನಗಳ ಒಳಗೆ ಎಲ್ಲಾ ಬಸ್‌ಗಳ ಮೇಲಿನ ಜಾಹೀರಾತು ತೆರವಿಗೆ ಸೂಚನೆ ನೀಡಲಾಗಿದೆ.
ಇನ್ನೂ ಜಾಹೀರಾತು ನೀಡಿದ ಕಂಪನಿಗಳ ಜೊತೆಯೂ ಮಾತನಾಡಿದ್ದು, ಜಾಹೀರಾತುಗಳ ತೆರವು ಮಾಡುವುದಕ್ಕೆ ಕಂಪನಿಗಳು ಒಪ್ಪಿಕೊಂಡಿವೆ. ಆಯಾ ಡಿಪೋಗಳಲ್ಲಿ ಡಿಪೋ ಮ್ಯಾನೆಜರ್‌ಗಳ ಜೊತೆ ಮಾತನಾಡಿದ್ದು, ತಕ್ಷಣಕ್ಕೆ ತೆರವು ಮಾಡುವಂತೆ ಸೂಚಿಸಲಾಗಿದೆ.
