Home ಬೆಂಗಳೂರು ಮೆಟ್ರೋ ಪ್ರಯಾಣ ದರ ಏರಿಕೆ ಸರ್ಕಾರದ ವಿರುದ್ದ ಗುಡುಗಿದ – ಎಚ್‌ಡಿಕೆ

ಮೆಟ್ರೋ ಪ್ರಯಾಣ ದರ ಏರಿಕೆ ಸರ್ಕಾರದ ವಿರುದ್ದ ಗುಡುಗಿದ – ಎಚ್‌ಡಿಕೆ

ಬೆಂಗಳೂರು : ನಮ್ಮ ಮೆಟ್ರೋ ಟಿಕೆಟ್ ರೇಟ್ ಹೆಚ್ಚಳ ವಿಚಾರ ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಕೇಂದ್ರ ಸಚಿವ ಕುಮಾರಸ್ವಾಮಿ (Kumaraswamy) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೆಟ್ರೋ ಯೋಜನೆಗಳಿಗೆ ರಾಜ್ಯ ಸರ್ಕಾರವೇ ಹೆಚ್ಚು ಹಣ ಹಾಕುತ್ತೆ ಎನ್ನುವುದಾದರೇ ಕೇಂದ್ರ ಸರ್ಕಾರದ ಮೇಲೆ ಯಾಕೆ ಆರೋಪ ಮಾಡುತ್ತೀರಿ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಸರ್ಕಾರ ನಾವು ಸತ್ಯ ಹೇಳುತ್ತೇವೆ ಅಂತಾ ಸುಳ್ಳು ಹೇಳಿಕೆ ನೀಡುತ್ತಿದೆ ಮೆಟ್ರೊ ಯೋಜನೆಯಲ್ಲಿ ಕೇಂದ್ರದ ಪಾಲು 2% ಅಂತಿದೆ. ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರ ಹೆಚ್ಚು ಹಣ ಹಾಕುತ್ತೆ ಅಂದ್ರೆ ಕೇಂದ್ರದ ಮೇಲೆ ಯಾಕೆ ಆರೋಪ ಮಾಡುತ್ತೀರಿ? ಮೆಟ್ರೋ ಪ್ರಯಾಣ ದರ ನಿಗದಿ ಮಾಡೋದು ಯಾರು? ಅವರಿಗೆ ಕೇಂದ್ರದ ಮೇಲೆ ಹಾಕುವ ಚಾಳಿ ಎಂದು ಗುಡುಗಿದರು. ಸಿಎಂ ಕುರ್ಚಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿಕೆ, ಸಿಎಂ ಕುರ್ಚಿ ಕಿತ್ತಾಟ ಕಾಂಗ್ರೆಸ್ ಗೆ ಸೇರಿರೋದು ಅದಕ್ಕೆ ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ. ನನಗೆ ನೂರೆಂಟು ಕೆಲಸಗಳಿವೆ ಎಂದರು.

You cannot copy content of this page

Exit mobile version