ಹಾಸನ: ನಾನು ಯಾವುದೇ ಪಕ್ಷ ಸೇರಲ್ಲ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಇಂದು ಹಾಸನಾಂಬೆ ದರ್ಶನ ಪಡೆದು ಬಳಿಕ ಮಾತನಾಡಿದ ಅವರು, ಶಿವಸೇನೆ ಸೇರ್ಪಡೆಗೆ ಆಹ್ವಾನ ಕುರಿತು ಕೇಳಿದ ಪ್ರಶ್ನೆಗೆ ನಾನು ಯಾವುದೇ ಪಕ್ಷದ ಜೊತೆ ಸೇರಲ್ಲ ಎಂದು ಸ್ಪಷ್ಟಪಡಿಸಿದರು.ನಾನು 2ಆಯ್ಕೆ ಮುಂದಿಟ್ಟಿದ್ದೇನೆ. ಮೊದಲನೆಯದು ಹಿಂದೂ ಮತ ವಿಭಜನೆ ಆಗಬಾರದು. ನಾನು ಪಕ್ಷ ಕಟ್ಟೋಕೆ ಮುನ್ನ ಮತ ವಿಭಜನೆ ಮಾಡುವ ಕೆಟ್ಟ ಕೆಲಸ ಮಾಡಲ್ಲ.ಆದಾಗ್ಯ ಬಿಜೆಪಿಯವರಿಗೆ ಇನ್ನೂ ಯಡಿಯೂರಪ್ಪ ಕುಟುಂಬವೇ ಬೇಕಾಗಿದ್ರೆ ಏನೂ ಮಾಡಲು ಆಗಲ್ಲ. ಯಡಿಯೂರಪ್ಪ ಕುಟುಂಬ ಬಿಟ್ಟು ಬಿಜೆಪಿ ಕಟ್ಟಿದ್ರೆ ಮತ್ತೆ ಹೋಗ್ತೀನಿ ಎಂದರು.
ನಾನು ಯಾವ ರಾಜಕೀಯ ಪಕ್ಷದ ಜೊತೆ ಹೋಗೋದಿಲ್ಲ, ನನ್ನೊಟ್ಟಿಗೆ ಯಾರೂ ಮಾತನಾಡಿಲ್ಲ. ಹಿಂದುತ್ಚದ ಪರವಾಗಿ ರಾಜ್ಯಾದ್ಯಂತ ಓಡಾಡುತ್ತಿದ್ದೇನೆ, ಇತ್ತೀಚೆಗೆ ಮಂಡ್ಯಕ್ಕೆ ಹೋಗಿದ್ದೆ.20ಸಾವಿರ ಜನ ಸೇರಿದ್ರು, ಜನರು ಹೂ ಹಾಕಿ ನೀವೇ ಮುಂದೆ ಸಿಎಂ ಆದರೆ ಮಾತ್ರ ಹಿಂದುಗಳಿಗೆ ರಕ್ಷಣೆ ಎಂದರು. ಆದರೆ ಯಡಿಯೂರಪ್ಪ ರೀತಿ ನಾನು ಹೇಳಿಕೊಳ್ಳೋದಿಲ್ಲ. ಜನ ಕೊಡುವ ತೀರ್ಪಿಗೆ ತಯಾರಿದ್ದೇನೆ ಎಂದರು.ರಾಜ್ಯದಲ್ಲಿ ನಮ್ಮ ಸರ್ಕಾರ ಬಂದರೆ ಹಿಂದೂಗಳ ಮೇಲೆ ದಬ್ಬಾಳಿಕೆ ತಡೆಯುತ್ತೇವೆ, ಅನಧಿಕೃತ ಮಸೀದಿಗಳನ್ನ ತಡೆಯುತ್ತೇವೆ, ಕರ್ನಾಟಕದಲ್ಲಿ ಸಾಕಷ್ಟು ಅಕ್ರಮ ಮಸೀದಿ ಇವೆ.ಅವರು ವಾಟರ್ ಬಿಲ್, ಕರೆಂಟ್ ಬಿಲ್ ಕಟ್ಟಲ್ಲ, ನಮ್ಮ ದೇವರ ದುಡ್ಡನ್ನ ಅವರ ವಕ್ಫ್ ಕಟ್ಟಲುಕೊಡ್ತಾರೆ. ಹಿಂದೂ ದೇವರ ಹಣ ನಮ್ಮ ದೇವಾಲಯಕ್ಕೆ ಖರ್ಚಾಗಬೇಕು ಎಂದು ಯತ್ನಾಳ್ ಹೇಳಿದರು.