Home ದೇಶ 200 ದಿನ ಪೂರೈಸಿದ ರೈತ ಚಳವಳಿ| ಹೋರಾಟದ ಸ್ಥಳಕ್ಕೆ ಬಂದು ಬೆಂಬಲ ಘೋಷಿಸಿದ ವಿನಿಶಾ ಫೋಗಟ್.‌...

200 ದಿನ ಪೂರೈಸಿದ ರೈತ ಚಳವಳಿ| ಹೋರಾಟದ ಸ್ಥಳಕ್ಕೆ ಬಂದು ಬೆಂಬಲ ಘೋಷಿಸಿದ ವಿನಿಶಾ ಫೋಗಟ್.‌ ರೈತರಿಂದ ಕಂಗನಾ ವಿರುದ್ಧ ಕ್ರಮಕ್ಕೆ ಆಗ್ರಹ

0

ಹಲವು ಬೇಡಿಕೆಗಳನ್ನು ಮುಂದಿಟ್ಟು ದೇಶದ ರೈತರು ನಡೆಸುತ್ತಿರುವ ಪ್ರತಿಭಟನೆ ಇಂದಿಗೆ 200 ದಿನ ತಲುಪಿದೆ. ಈ ಹಿನ್ನೆಲೆ ರೈತರು ಪ್ರತಿಭಟನಾ ಸ್ಥಳದಲ್ಲಿ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು.

ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವ ನಿಟ್ಟಿನಲ್ಲಿ ರೈತರು ಖಾನೌರಿ, ಶಂಭು ಮತ್ತು ರತನ್‌ಪುರ ಗಡಿಗಳಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಅಲ್ಲಿಗೆ ತಲುಪಿದ್ದಾರೆ. ಈ ಪ್ರತಿಭಟನೆಯಲ್ಲಿ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಕೂಡ ಭಾಗವಹಿಸಿದ್ದಾರೆ.

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ರೈತ ಸಂಘಗಳ ಮುಖಂಡರು ತಿಳಿಸಿದ್ದಾರೆ. ತಮ್ಮ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಸುವುದಾಗಿ ರೈತ ಮುಖಂಡರು ಹೇಳಿದರು.

ಮತ್ತೊಮ್ಮೆ ತಮ್ಮ ಬೇಡಿಕೆಗಳನ್ನು ಸರಕಾರಕ್ಕೆ ಸಲ್ಲಿಸುವುದಾಗಿಯೂ ತಿಳಿಸಿದರು.

ಪ್ರತಿಭಟನೆ 200 ದಿನ ಪೂರೈಸಿರುವುದು ಒಂದು ಮೈಲಿಗಲ್ಲು ಎಂದು ರೈತ ಮುಖಂಡರು ಬಣ್ಣಿಸಿದರು. ಅದೇ ರೀತಿ, ಇತ್ತೀಚೆಗೆ ರೈತರ ಚಳವಳಿಯನ್ನು ಬಾಂಗ್ಲಾದೇಶದ ಪರಿಸ್ಥಿತಿಯೊಂದಿಗೆ ಹೋಲಿಸಿದ ಬಾಲಿವುಡ್ ನಟಿ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರನೌತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು. ಅದೇ ರೀತಿ ಮುಂಬರುವ ಹರಿಯಾಣ ಚುನಾವಣೆಗೆ ತಮ್ಮ ಕಾರ್ಯತಂತ್ರವನ್ನು ಬಹಿರಂಗಪಡಿಸುವುದಾಗಿ ರೈತಸಂಘಗಳ ಮುಖಂಡರು ಇದೇ ಸಂದರ್ಭದಲ್ಲಿ ಘೋಷಿಸಿದರು. ರಾಜ್ಯ ರಾಜಕಾರಣದಲ್ಲಿ ಸಕ್ರಿಯ ಪಾತ್ರ ವಹಿಸುವ ಉದ್ದೇಶದಿಂದ ರೈತರು ಮುಂದಿನ ದಿನಗಳಲ್ಲಿ ತಮ್ಮ ಮುಂದಿನ ನಡೆಗಳನ್ನು ನಿರ್ಧರಿಸಲಿದ್ದಾರೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದ ವಿನಿಶಾ ಫೋಗಟ್‌ ನಿಮ್ಮ ಪುತ್ರಿ ಸದಾ ನಿಮ್ಮೊಂದಿಗೆ ಇದ್ದಾಳೆ ಎಂದು ಘೋಷಿಸಿದರು. ಈ ಸಂದರ್ಭದಲ್ಲಿ ನೀವು ಕಾಂಗ್ರೆಸ್‌ ಟಿಕೆಟ್‌ ಮೂಲಕ ಚುನಾವಣೆ ಸ್ಪರ್ಧಿಸುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿ ವಿನಿಶಾ “ಈ ಸಂದರ್ಭದಲ್ಲಿ ರಾಜಕೀಯ ಮಾತನಾಡವುದು ಸರಿಯಲ್ಲ. ಅದರಿಂದ ಹೋರಾಟಕ್ಕೆ ಹಾನಿಯಾಗುತ್ತದೆ” ಎಂದು ಹೇಳಿದರು.

You cannot copy content of this page

Exit mobile version