Home ದೇಶ ಜೀವದ ಭಯವಿಲ್ಲ, ತನಿಖಾಧಿಕಾರಿಗಳ ಮುಂದೆ ಸತ್ಯ ಬಾಯ್ಬಿಟ್ಟ – ಹಮ್ಮಾಮಿ

ಜೀವದ ಭಯವಿಲ್ಲ, ತನಿಖಾಧಿಕಾರಿಗಳ ಮುಂದೆ ಸತ್ಯ ಬಾಯ್ಬಿಟ್ಟ – ಹಮ್ಮಾಮಿ

ರಿಯಾದ್: 170ಕ್ಕೂ (Riyadh) ಅಧಿಕ ಪ್ರಯಾಣಿಕರಿದ್ದ ಫ್ಲೈದುಬೈ (Flydubai) ವಿಮಾನವನ್ನು ಪತನಗೊಳಿಸಲು ಯತ್ನಿಸಿ, ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಹಲ್ಲೆ ನಡೆಸಿದ್ದ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ (Cockpit Terror) ವಿಚಾರಣೆ (Flight Incident) ವೇಳೆ ಸ್ಫೋಟಕ ಸತ್ಯ ಬಾಯ್ಬಿಟ್ಟಿದ್ದಾನೆ. ವಿಮಾನವನ್ನು ಧ್ವಂಸಗೊಳಿಸುವುದೇ ನನ್ನ ಏಕೈಕ ಉದ್ದೇಶವಾಗಿತ್ತು ಮತ್ತು ನನಗೆ ಸಾವಿನ ಬಗ್ಗೆ ಯಾವುದೇ ಭಯವಿರಲಿಲ್ಲ ಎಂದು ಆತ ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿರುವುದಾಗಿ ಸುದ್ದಿ ಮೂಲಗಳು ವರದಿ ಮಾಡಿದೆ.

ಸುರಕ್ಷತಾ ವ್ಯವಸ್ಥೆಗೆ ಬಿಗ್‌ ಪ್ರಶ್ನೆ
ಉಗ್ರಗಾಮಿ ನಂಟು, ವಿಮಾನ ಹಾರಾಟದಿಂದಲೇ ಅಮಾನತುಗೊಂಡಿದ್ದ ಇತಿಹಾಸ… ಆದರೂ ಕಾಕ್‌ಪಿಟ್ ಪ್ರವೇಶಿಸಿ ಅಂತಾರಾಷ್ಟ್ರೀಯ ವಿಮಾನವನ್ನು ಹಾರಿಸಲು ಆತನಿಗೆ ಅವಕಾಶ ಸಿಕ್ಕಿದ್ದು ಹೇಗೆ? ವಾಯುಯಾನ ವಲಯವನ್ನು ಬೆಚ್ಚಿಬಿಡಿಸಿರುವ ಈ ಭೀಕರ ಪ್ರಶ್ನೆಗೆ ಈಗ ಉತ್ತರ ಹುಡುಕಲಾಗುತ್ತಿದೆ.ಮಾಹಿತಿಗಳ ಪ್ರಕಾರ, ಹಮ್ಮಾಮಿ ಈ ಹಿಂದೆ ‘ಒಮಾನ್ ಏರ್’ ಸಂಸ್ಥೆಯಲ್ಲಿ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ನಿಷೇಧಿತ ಉಗ್ರಗಾಮಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡುತ್ತಿರುವುದು ಬೆಳಕಿಗೆ ಬಂದಿತ್ತು. ಇದರಿಂದ ಎಚ್ಚೆತ್ತ ಸಂಸ್ಥೆಯು ಆತನನ್ನು ವಿಮಾನ ಹಾರಾಟದಿಂದ ತಡೆಹಿಡಿದು, ಕಚೇರಿ ಕೆಲಸಕ್ಕೆ ಸೀಮಿತಗೊಳಿಸಿತ್ತು. ಅಷ್ಟೇ ಅಲ್ಲದೆ, ಆತನನ್ನು ಉಗ್ರಗಾಮಿ ಚಿಂತನೆಗಳಿಂದ ಹೊರತರುವ ವಿಶೇಷ ಕಾರ್ಯಕ್ರಮಕ್ಕೂ ಒಳಪಡಿಸಲಾಗಿತ್ತು.

ನಂತರ ಒಮಾನ್ ಏರ್ ತೊರೆದ ಹಮ್ಮಾಮಿ, ಯುನೈಟೆಡ್ ಅಬ್ ಅಮಿರಾತ್‌ಗೆ ತೆರಳಿ ಉದ್ಯೋಗ ಗಿಟ್ಟಿಸಿಕೊಂಡಿದ್ದ. ಫ್ಲೈದುಬೈ ವಿಮಾನಯಾನ ಸಂಸ್ಥೆಯು 2026ರ ಫೆಬ್ರವರಿಯಲ್ಲಿ ಆತನನ್ನು ನೇಮಕ ಮಾಡಿಕೊಂಡಿತ್ತು. ಆದರೆ, ನೇಮಕಾತಿ ವೇಳೆ ಒಮಾನ್ ಏರ್‌ನಲ್ಲಿದ್ದ ಆತನ ಹಿನ್ನೆಲೆ ಹಾಗೂ ವಿವಾದಗಳ ಕುರಿತು ಫ್ಲೈದುಬೈ ಯಾವುದೇ ಮಾಹಿತಿ ಪಡೆದಿರಲಿಲ್ಲ ಎಂಬ ಆಘಾತಕಾರಿ ಅಂಶ ತನಿಖೆಯಿಂದ ಹೊರಬಂದಿದೆ.

ಸಿರಿಯಾ ನಂಟು ಮತ್ತು ಹಿನ್ನೆಲೆ ತನಿಖೆ
ತನಿಖಾಧಿಕಾರಿಗಳು ಆರೋಪಿಯ ಹಿನ್ನೆಲೆಯನ್ನು ತೀವ್ರವಾಗಿ ಜಾಲಾಡುತ್ತಿದ್ದು, ಆತನ ಸಿರಿಯಾ ಸಂಪರ್ಕದ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ. ಓಮನಿ ತಂದೆ ಹಾಗೂ ಸಿರಿಯನ್ ತಾಯಿಗೆ ಜನಿಸಿರುವ ಹಮ್ಮಾಮಿ, ಸಿರಿಯಾ ಅಂತರ್ಯುದ್ಧದ ಅವಧಿಯಲ್ಲಿ ಅಲ್ಲಿಯೇ ನೆಲೆಸಿದ್ದ ಎಂಬುದು ತಿಳಿದುಬಂದಿದೆ. 2024ರಲ್ಲಿ ಒಮಾನ್ ಏರ್‌ನಲ್ಲಿ ಸಹ-ಪೈಲಟ್ ತರಬೇತಿದಾರನಾಗಿ ಕೆಲಸ ಮಾಡುವಾಗಲೇ ಆತನ ಬಳಿ ಉಗ್ರಗಾಮಿ ಸಾಮಗ್ರಿಗಳು ಪತ್ತೆಯಾಗಿದ್ದವು. ಸದ್ಯ ಈ ಎಲ್ಲಾ ಆಯಾಮಗಳ ಕುರಿತು ತನಿಖೆ ಮುಂದುವರಿದಿದೆ.

You cannot copy content of this page

Exit mobile version