Home ಬ್ರೇಕಿಂಗ್ ಸುದ್ದಿ ಕಾಂಗ್ರೆಸ್ ಪದಗ್ರಹಣದಲ್ಲಿ ಉಲ್ಟಾ ಧ್ವಜ, ಬಾವುಟದ ಜೋಡಣೆಯಲ್ಲಿ ಯಡವಟ್ಟು

ಕಾಂಗ್ರೆಸ್ ಪದಗ್ರಹಣದಲ್ಲಿ ಉಲ್ಟಾ ಧ್ವಜ, ಬಾವುಟದ ಜೋಡಣೆಯಲ್ಲಿ ಯಡವಟ್ಟು

ಕಾಂಗ್ರೆಸ್ (Congress) ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದ ವೇಳೆ ಸೇವಾದಳದ ಕಾರ್ಯಕರ್ತರಿಂದ ಬಾವುಟದ (Flag) ಜೋಡಣೆಯಲ್ಲಿ ತಪ್ಪಾಗಿರುವ ಘಟನೆ ನಡೆದಿದೆ. ನೂತನ ಜಿಲ್ಲಾಧ್ಯಕ್ಷ ಬೀರಿಹುಂಡಿ ಬಸವಣ್ಣ ಅವರಿಗೆ ಅಧಿಕಾರ ಹಸ್ತಾಂತರಿಸುವ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ನಿರ್ಗಮಿತ ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್ ಅವರು ಬೀರಿಹುಂಡಿ ಬಸವಣ್ಣ ಅವರಿಗೆ ಕಾಂಗ್ರೆಸ್ ಧ್ವಜ ನೀಡುವ ಮೂಲಕ ಜವಾಬ್ದಾರಿ ಹಸ್ತಾಂತರಿಸುತ್ತಿದ್ದ ವೇಳೆ, ಬಾವುಟದ ಬಣ್ಣಗಳ ಕ್ರಮ ತಪ್ಪಾಗಿರುವುದು ಗಮನಕ್ಕೆ ಬಂದಿದೆ. ಸಾಮಾನ್ಯವಾಗಿ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳು ಮೇಲಿನಿಂದ ಕೆಳಗೆ ಇರಬೇಕಾಗಿದ್ದರೂ, ಇಲ್ಲಿ ಹಸಿರು, ಬಿಳಿ ಮತ್ತು ಕೇಸರಿ ಕ್ರಮದಲ್ಲಿ ಧ್ವಜವನ್ನು ಅಳವಡಿಸಲಾಗಿತ್ತು.

ಈ ಯಡವಟ್ಟು ತಿಳಿದ ಬಳಿಕ ಕಾರ್ಯಕರ್ತರು ತಕ್ಷಣವೇ ಧ್ವಜವನ್ನು ಸರಿಯಾದ ರೀತಿಯಲ್ಲಿ ಅಳವಡಿಸಿದರು. ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ತಿದ್ದುಪಡಿ ಪೂರ್ಣಗೊಳಿಸಿ, ಬಳಿಕ ನೂತನ ಜಿಲ್ಲಾಧ್ಯಕ್ಷರಿಗೆ ಮತ್ತೊಮ್ಮೆ ಅಧಿಕಾರ ಹಸ್ತಾಂತರಿಸಲಾಯಿತು.

You cannot copy content of this page

Exit mobile version