Home ಅಪರಾಧ ಸೇಡಿಗಾಗಿ ಮಹಿಳಾ ಅಧಿಕಾರಿ ವಿಡಿಯೊ ಸೆರೆ – ನೌಕರನ ಬಂಧನ

ಸೇಡಿಗಾಗಿ ಮಹಿಳಾ ಅಧಿಕಾರಿ ವಿಡಿಯೊ ಸೆರೆ – ನೌಕರನ ಬಂಧನ

0

ಬೆಳಗಾವಿ : ಮಹಿಳಾ ಅಧಿಕಾರಿಯ ಮನೆಯಲ್ಲಿ ರಹಸ್ಯವಾಗಿ ಕ್ಯಾಮೆರಾಗಳನ್ನು ಅಳವಡಿಸಿ, ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದು ₹ 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮಹಿಳಾ ಅಧಿಕಾರಿಯ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದ ನೌಕರ ವಿನೋದ ಬಂಧಿತ. ಈ ಪ್ರಕರಣದಲ್ಲಿ ಈಗಾಗಲೇ ಮೂವರು ಯೂ ಟ್ಯೂಬರ್‌ಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ವಿನೋದ ಹಾಗೂ ಮಹಿಳಾ ಅಧಿಕಾರಿ ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ವೃತ್ತಿ ಮಾತ್ಸರ್ಯದಿಂದ ಅವರ ಮೇಲೆ ಸೇಡು ತೀರಿಸಿಕೊಳ್ಳಲು ವಿನೋದ ಹೊಂಚು ಹಾಕಿದ್ದ. ಇದಕ್ಕೆ ಯೂ ಟ್ಯೂಬರ್ಸ್‌ ನೆರವು ಪಡೆದಿದ್ದ. ಮಹಿಳಾ ಅಧಿಕಾರಿ ಹಾಗೂ ಅವರೊಂದಿಗೆ ಆಪ್ತಕ್ಷಣಗಳನ್ನು ಕಳೆದ ಇನ್ನೊಬ್ಬ ಅಧಿಕಾರಿ ಕಡೆಯಿಂದ ತಲಾ ₹50 ಲಕ್ಷ ಪಡೆಯುವ ಹುನ್ನಾರ ನಡೆಸಿದ್ದ’ ಎಂದು ಮೂಲಗಳು ಮಾಹಿತಿ ನೀಡಿವೆ.

You cannot copy content of this page

Exit mobile version