ಶಿವಮೊಗ್ಗ : ಅಕ್ರಮ ಮರಳುಗಾರಿಕೆ ತಡೆಯಲು ಮುಂದಾಗಿದ್ದ ಮಹಿಳಾ ಗಣಿ ಅಧಿಕಾರಿ ಜ್ಯೋತಿ ಎಂಬುವವರ ವಿರುದ್ಧ ಅವಾಚ್ಯ ಪದಬಳಕೆ, ಜೀವ ಬೆದರಿಕೆ ಆರೋಪದಡಿ ಭದ್ರಾವತಿಯ ಶಾಸಕ ಬಿ.ಕೆ.ಸಂಗಮೇಶ್ ಅವರ ಪುತ್ರ ಬಸವೇಶ್ ಎಂಬುವವನ ವಿರುದ್ಧ FIR ದಾಖಲಾಗಿದೆ.
ಬಸವೇಶ್, ಅಧಿಕಾರಿ ಜ್ಯೂತಿ ಅವರಿಗೆ ಅವಾಚ್ಯವಾಗಿ ಬಾಯಿಗೆ ಬಂದಂತೆ ಬೈದಿರುವುದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.ಕರ್ತವ್ಯ ನಿರತ ಅಧಿಕಾರಿ ಜ್ಯೋತಿ ಅವರು ಅಕ್ರಮ ಮರಳುಗಾರಿಕೆ ತಡೆಯಲು ಮುಂದಾದಾಗ ಫೋನಿನಲ್ಲೇ ಕೆಟ್ಟ ಪದಗಳನ್ನು ಬಳಸಿ ಬೆದರಿಕೆ ಹಾಕಿದ ಆರೋಪದಡಿ ಇದೀಗ ಭದ್ರಾವತಿಯ ಹಳೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಭದ್ರಾ ನದಿ ತಟದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಮೇಲೆ ಜ್ಯೋತಿ ಅವರು ಕಳೆದ ರಾತ್ರಿ ದಾಳಿ ನಡೆಸಿದ್ದಾಗ ಈ ಘಟನೆ ನಡೆದಿತ್ತು. ಈ ಸಂಬಂಧ ಜ್ಯೋತಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೂ ದೂರು ಸಲ್ಲಿಸಿದ್ದಾರೆ.