Thursday, May 2, 2024

ಸತ್ಯ | ನ್ಯಾಯ |ಧರ್ಮ

1 ಮತ್ತು 2ನೇ ಹಂತದ ಮತದಾನದ ಅಂತಿಮ ಡೇಟಾ ಬಿಡುಗಡೆ ಮಾಡದ ಚುನಾವಣಾ ಆಯೋಗ

ನವದೆಹಲಿ: 2024 ರ ಲೋಕಸಭಾ ಚುನಾವಣೆಯ ಮೊದಲ ಹಂತವು ಏಪ್ರಿಲ್ 19 ರಂದು ಮತ್ತು ಎರಡನೇ ಹಂತವು ಏಪ್ರಿಲ್ 26 ರಂದು ನಡೆಯಿತು, ಆದರೆ ಭಾರತೀಯ ಚುನಾವಣಾ ಆಯೋಗವು ಎರಡೂ ಹಂತದ ಮತದಾನದ ಅಂತಿಮ ಅಂಕಿಅಂಶಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಪ್ರತಿ ಮತದಾನದ ದಿನ ಸುಮಾರು 7 ಗಂಟೆಗೆ ಆಯೋಗ ಬಿಡುಗಡೆ ಮಾಡಿದ “approximate trend” ಮಾತ್ರ ಲಭ್ಯವಿದೆ.

ಏಪ್ರಿಲ್ 19 ರ ಈ ಅಂದಾಜಿನ ಪ್ರಕಾರ 60% ಮತ್ತು ಏಪ್ರಿಲ್ 26 ಕ್ಕೆ 60.96% ಆಗಿತ್ತು.

ಮೊದಲ ಹಂತದಲ್ಲಿ 66.14% ಮತ್ತು ಎರಡನೇ ಹಂತದಲ್ಲಿ 66.7% ರಷ್ಟು ಅಂತಿಮ ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಉನ್ನತ ಅಧಿಕಾರಿಯೊಬ್ಬರು ಬಿಸಿನೆಸ್‌ಲೈನ್‌ಗೆ  ತಿಳಿಸಿದ್ದಾರೆ. “ನಾವು ಸಂಗ್ರಹಿಸಿದ ತಕ್ಷಣ ನಾವು ಅಂತಿಮ ಅಂಕಿಅಂಶಗಳನ್ನು ನಮ್ಮ ವೆಬ್‌ಸೈಟ್‌ನಲ್ಲಿ ಹಾಕುತ್ತೇವೆ” ಎಂದು ಅವರು ತಿಳಿಸಿದ್ದಾರೆ. ಆದರೆ ಈ ಅಂಕಿಅಂಶಗಳು ಇನ್ನೂ ವೆಬ್‌ಸೈಟ್‌ನಲ್ಲಿಲ್ಲ.

ಬ್ಯುಸಿನೆಸ್‌ಲೈನ್ ವರದಿ ಮಾಡಿದಂತೆ, ಇದು ವೆಬ್‌ಸೈಟ್‌ನಿಂದ ಕಾಣೆಯಾಗಿರುವ ಮತದಾರರ ಮತದಾನದ ಡೇಟಾ ಅಲ್ಲ. ಪ್ರತಿ ಸಂಸದೀಯ ಕ್ಷೇತ್ರದಲ್ಲಿ ನೋಂದಾಯಿತ ಮತದಾರರ ಸಂಖ್ಯೆಯೂ ಕಾಣೆಯಾಗಿದೆ. “ಬಿಸಿನೆಸ್‌ಲೈನ್‌ ಪ್ರತಿ ಕ್ಷೇತ್ರದ ಮತದಾರರ ಸಂಖ್ಯೆಯನ್ನು ಕಂಡುಹಿಡಿಯಲು ಪ್ರಯತ್ನಿಸಿದಾಗ, ಸಿಕ್ಕಿದ್ದು ಉತ್ತರ ಪ್ರದೇಶದಂತಹ ಕೆಲವು ಆಯ್ದ ರಾಜ್ಯಗಳಲ್ಲಿನ ಬೂತ್‌ವಾರು ಚುನಾವಣಾ ಪಟ್ಟಿಗಳು. ಒಡಿಶಾ, ಬಿಹಾರ ಅಥವಾ ದೆಹಲಿಯ ಡೇಟಾ ಲಭ್ಯವಿಲ್ಲ. ಬಿಹಾರ ಅಥವಾ ಒಡಿಶಾದ ಮತದಾರರ ಸಂಖ್ಯೆಯನ್ನು ನೋಡೆದರೆ, ಮಾಹಿತಿಯನ್ನು ಒದಗಿಸಬೇಕಾದ ಕೊನೆಯ ಪುಟದಲ್ಲಿ ದೋಷಗಳಿವೆ.”

ಇದುವರೆಗಿನ ಅಂದಾಜು ಮತದಾನದ ಪ್ರಮಾಣವು 2019 ರ ಲೋಕಸಭೆ ಚುನಾವಣೆಯಲ್ಲಿ ಕಂಡುಬಂದಕ್ಕಿಂತ ಕಡಿಮೆಯಾಗಿದೆ.

“ಈ ಕುಸಿತವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ ಅವರಂತಹ ಮೋದಿ ಸರ್ಕಾರದ ಟೀಕಾಕಾರರು ಈ ಕುಸಿತವನ್ನು ಕೇಂದ್ರದ ಕಡೆಗೆ ಜನರು ತೋರಿರುವ ಅಸಮಧಾನವಾಗಿ ನೋಡುತ್ತಾರೆ.ಎನ್‌ಡಿಎಯೇತರ ಪಕ್ಷಗಳಿಗಿಂತ ಬಿಜೆಪಿ ನೇತೃತ್ವದ ಎನ್‌ಡಿಎ ಹೊಂದಿರುವ ಸ್ಥಾನಗಳಲ್ಲಿ ಮತದಾನ ಪ್ರಮಾಣದಲ್ಲಿ ಕುಸಿತವು ಹೆಚ್ಚಾಗಿದೆ ಎಂದು ಪ್ರತಿಪಾದಿಸುತ್ತಾರೆ. ಆದರೆ ಬಿಜೆಪಿಯ ಬೆಂಬಲಿಗರು ಇದಕ್ಕೆ ವಾತಾವರಣದಲ್ಲಿ ಆಗಿರುವ ತೀವ್ರತರವಾದ ಬಿಸಿಲು ಕಾರಣ ಎಂದು ನಂಬುತ್ತಾರೆ,” ಎಂದು ಅಜೋಯ್ ಆಶೀರ್ವಾದ್ ಮಹಾಪ್ರಶಾಸ್ತಾ ಬರೆದಿದ್ದಾರೆ .

“…ಲೋಕಸಭಾ ಚುನಾವಣೆಯನ್ನು ವ್ಯಾಪಾರ-ವಹಿವಾಟು, ವಾಡಿಕೆಯ ವ್ಯವಹಾರದಂತೆ ನಡೆಸಲಾಗುತ್ತಿದೆ. ಸ್ವತಃ ಪ್ರಧಾನಿ ನೇತೃತ್ವದ ಬಿಜೆಪಿ ನಾಯಕರು ಅಲ್ಪಸಂಖ್ಯಾತರ ವಿರುದ್ಧ ದ್ವೇಷಪೂರಿತ ಟೀಕೆಗಳನ್ನು ಮಾಡುವುದರಲ್ಲಿ ನಿರ್ಭಯದಿಂದ ತೊಡಗಿಸಿಕೊಂಡಿದ್ದಾರೆ, ಚುನಾವಣಾ ಆಯೋಗದಿಂದಲೂ ಯಾವುದೇ ಹಸ್ತಕ್ಷೇಪವಾಗಿಲ್ಲ. ಕೆಲವು ಪ್ರಾದೇಶಿಕ ನಾಯಕರನ್ನು ಹೊರತುಪಡಿಸಿ ಪ್ರತಿಪಕ್ಷಗಳು ತಮ್ಮ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಮತ್ತು ಸಂಪನ್ಮೂಲಗಳನ್ನು ಸಂಗ್ರಹಿಸಲು ಹೆಣಗಾಡುತ್ತಿವೆ, ಮೋದಿ ಆಡಳಿತವು ಮಾಡಿದ ಅತಿರೇಕಗಳಿಗೆ ಸವಾಲೆಸೆಯುವವರು ಇಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು