Sunday, August 10, 2025

ಸತ್ಯ | ನ್ಯಾಯ |ಧರ್ಮ

ಕೋಮುಗಲಭೆಗೆ ಪ್ರಚೋದನೆ: ವಸಂತ ಗಿಳಿಯಾರ್ ಎಂಬ ವ್ಯಕ್ತಿಯ ಮೇಲೆ ಎಫ್ಐಆರ್ ದಾಖಲು

ಧರ್ಮಸ್ಥಳ ಮತ್ತು ಮಸೀದಿ ಮದ್ಯೆ ಘರ್ಷಣೆಗಾಗಿ ಜನರನ್ನು ಎತ್ತಿಕಟ್ಟಿ ಕೋಮುಗಲಭೆಗೆ ಪ್ರಚೋದನೆ ನೀಡಿರುವ, ಸಮುದಾಯಗಳನ್ನು ಎತ್ತಿಕಟ್ಟುತ್ತಾ ಧಾರ್ಮಿಕ ಸಂಸ್ಥೆಗಳನ್ನು ಕ್ರಿಮಿನಲೈಸ್ ಮಾಡುತ್ತಿರುವ ವಸಂತ ಗಿಳಿಯಾರು ಎಂಬ ವ್ಯಕ್ತಿಯ ಮೇಲೆ ಎಫ್ಐಆರ್ ದಾಖಲಾಗಿದೆ. ಅದಿವಾಸಿ  ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕರಾಗಿರುವ ಶೇಖರ್ ಲಾಯಿಲ ಅವರ ದೂರಿನ ಮೇರೆಗೆ ಈ ಎಫ್ಐಆರ್ ದಾಖಲಾಗಿದೆ.

ಧರ್ಮಸ್ಥಳದಲ್ಲಿ ನಡೆದಿರುವ ಹಲವಾರು ಕೊಲೆ, ಅತ್ಯಾಚಾರ, ಭೂಅಕ್ರಮ, ಮೈಕ್ರೋ ಫೈನಾನ್ಸ್ ಕುರಿತು ನಾವು ಸಂಘಟನೆಯಾಗಿ 1980ರಿಂದಲೂ ಕಾನೂನುಬದ್ದವಾಗಿ ಹೋರಾಟ ನಡೆಸುತ್ತಿದ್ದೇವೆ. ಸೌಜನ್ಯ ಹೋರಾಟವನ್ನು ಪ್ರಾರಂಭಿಸಿ ಪ್ರಜಾಸತ್ತಾತ್ಮಕವಾಗಿ ಈವರೆಗೂ ಮುನ್ನಡೆಸುತ್ತಿದ್ದೇವೆ.

ಇಡೀ ದೇಶದ ಪ್ರಜ್ಞಾವಂತರು ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಇದರ ತನಿಖೆ ನಡೆಯಬೇಕು ಎಂದು ಚಳವಳಿ ತೀವ್ರಗೊಂಡಿದೆ. ಈ ಚಳವಳಿಯು ಯಾವುದೇ ಧರ್ಮ, ದೇವಸ್ಥಾನದ ವಿರುದ್ದ ಅಲ್ಲವಾಗಿದ್ದು ಮಾನವೀಯತೆ, ಮಾನವ ಹಕ್ಕುಗಳ ಪರವಾಗಿರುವಂತದ್ದು. ಹಾಗಾಗಿಯೇ ಎಲ್ಲಾ ಪಕ್ಷ, ಜಾತಿ, ಧರ್ಮದ ಮಾನವತಾವಾದಿಗಳು ಈ ಚಳವಳಿಯ ಜೊತೆಗಿದ್ದಾರೆ.

ಆದರೆ ವಸಂತ ಗಿಳಿಯಾರ್ ಎಂಬ ಅಸಾಮಿಯು ಇಂದು ಅಂದರೆ ದಿನಾಂಕ 09.08.2025 ರಂದು ಮದ್ಯಾಹ್ನ ಸುಮಾರು 12 ಗಂಟೆಯಿಂದ 1.30 ರ ಮಧ್ಯೆ ಫೇಸ್ ಬುಕ್ ಪೋಸ್ಟ್ ಹಾಕಿದ್ದಾನೆ. ನೀಲಿ ಗುರುತಿನಲ್ಲಿ ಕಾಣಿಸುವುದು ಧರ್ಮಸ್ಥಳ. ಕೆಂಪು ಗುರುತಿನಲ್ಲಿ ಕಾಣಿಸುತ್ತಿರುವುದು ಮಸೀದಿ. ಧರ್ಮಕ್ಷೇತ್ರವನ್ನು ಮತಾಂಧರು ಸುತ್ತುವರೆಯುತ್ತಿರುವ ಪರಿಯನ್ನು ನೀವು ಸೂಕ್ಷ್ಮವಾಗಿ ಗಮನಿಸಿ. ಆ ನಂತರ ಆಲೋಚಿಸಿ.. SDPI ಹೋರಾಟಕ್ಕೆ ಧುಮುಕಿದೆ ಯಾಕೆ ಅಂತ ಅರ್ಥಮಾಡಿಕೊಳ್ಳಬೇಕು.
#ಜಾಗೋಹಿಂದೂ ಎಂಬಂತೆ ಪ್ರಚೋದನಕಾರಿ ಫೇಸ್ಬುಕ್ ಪೋಸ್ಟ್ ಹಾಕಿದ್ದಾನೆ. ಆತನ ವಿರುದ್ಧ ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಶೇಖರ್ ಲಾಯಿಲ ಒತ್ತಾಯಿಸಿದ್ದಾರೆ.

ಈ ರೀತಿಯ ಪೋಸ್ಟ್ ಹಾಕಿ ಧರ್ಮಸ್ಥಳದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇರುವ ಮಸೀದಿಗಳ ಗೂಗಲ್ ಮ್ಯಾಪ್ ಹಾಕಿ, ಮಸೀದಿಗಳು ಮತ್ತು ಧರ್ಮಸ್ಥಳ ದೇಗುಲವನ್ನು ಎತ್ತಿಕಟ್ಟುವ ಕೃತ್ಯ ಮಾಡಿದ್ದಾರೆ. ಪ್ರತೀ ಗ್ರಾಮಕ್ಕೊಂದು ಮಸೀದಿ, ಗ್ರಾಮಕ್ಕೆ ಹತ್ತಾರು ದೈವಸ್ಥಾನಗಳು, ದೇವಸ್ಥಾನಗಳು ಇರುವುದು ಸಹಜ. ಅದಕ್ಕೂ ಧರ್ಮಸ್ಥಳದ ವಿವಾದಕ್ಕೂ ಸಂಬಂಧವಿಲ್ಲ. ಇಷ್ಟಿದ್ದರೂ ಧರ್ಮ ಧರ್ಮಗಳ ಮಧ್ಯೆ, ಜಾತಿಗಳ ಮಧ್ಯೆ, ಸಮುದಾಯಗಳ ಮಧ್ಯೆ ಎತ್ತಿಕಟ್ಟಿ, ಕೋಮುಗಲಭೆಯನ್ನು ಸೃಷ್ಡಿಸುವ, ಧಾರ್ಮಿಕ ಸಂಸ್ಥೆಗಳ ಮೇಲೆ ದಾಳಿಗೆ ಪ್ರಚೋದಿಸಿ ಸಾರ್ವಜನಿಕ ಆಸ್ತಿಪಾಸ್ತಿ, ಶಾಂತಿಗೆ ಧಕ್ಕೆ ತರುವ ಕೆಲಸ ಮಾಡಿದ ವಸಂತ ಗಿಳಿಯಾರ್ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂಬ ಮನವಿ ಮೇರೆಗೆ ವಸಂತ ಗಿಳಿಯಾರ್ ಎನ್ನುವವನ ಮೇಲೆ ಎಫ್ಐಆರ್ ದಾಖಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page