Friday, April 26, 2024

ಸತ್ಯ | ನ್ಯಾಯ |ಧರ್ಮ

ಇಂದು ಕ್ರಿಕೆಟ್ ಇತಿಹಾಸದಲ್ಲೇ ಮೊಟ್ಟ ಮೊದಲ ಹ್ಯಾಟ್ರಿಕ್ ದಾಖಲೆಯಾದ ದಿನ: ಆ ಬೌಲರ್ ಯಾರು ಗೊತ್ತಾ..?

ಕ್ರಿಕೆಟ್ ಆಟದಲ್ಲಿ ಹ್ಯಾಟ್ರಿಕ್ಕಿನ ಕ್ರೇಜ್ ಬೇರೆಯೇ ಮಟ್ಟದ್ದು. ಅದಕ್ಕಿರುವ ಗೌರವ ಮತ್ತು ಮಹತ್ವ ಬಹಳ ದೊಡ್ಡದು. ಬ್ಯಾಟ್ಸ್‌ಮನ್‌ಗಳು ಸತತ ಬೌಂಡರಿ ಬಾರಿಸುವುದನ್ನು ನಾವು ಸಾಮಾನ್ಯವಾಗಿ ನೋಡುತ್ತಿರುತ್ತೇವೆ. ಆದರೆ, ಬೌಲರ್‌ಗಳು ಹ್ಯಾಟ್ರಿಕ್ ವಿಕೆಟ್ ಪಡೆದದ್ದು ತೀರಾ ಅಪರೂಪ.

ಇದುವರೆಗೆ ಕ್ರಿಕೆಟ್ ಇತಿಹಾಸದಲ್ಲಿ ಕೆಲವೇ ಕೆಲವು ಬೌಲರ್‌ಗಳು ಮಾತ್ರ ಈ ಸಾಧನೆ ಮಾಡಿದ್ದಾರೆ. ಈ ಕುರಿತು ಎಂದಾದರೂ ಯೋಚಿಸಿದ್ದೀರಾ..? ಕ್ರಿಕೆಟ್ ಆಟದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಬೌಲರ್ ಯಾರಿರಬಹುದು? ಅವರು ಯಾವ ದೇಶ ದೇಶದವರಿರಬಹುದು? ಎನ್ನುವ ಕುತೂಹಲ ನಿಮ್ಮನ್ನೂ ಕಾಡಿದೆಯೇ? ಬನ್ನಿ ಈಗ ಅವರ ಕುರಿತಾಗಿ ತಿಳಿಯೋಣ.

ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಹ್ಯಾಟ್ರಿಕ್ ವಿಕೆಟ್ ಪಡೆದ ದಾಖಲೆ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಫ್ರೆಡ್ರಿಕ್ ಸ್ಪೋಫೋರ್ತ್ ಹೆಸರಿನಲ್ಲಿದೆ. ಇಂಗ್ಲೆಂಡ್ ತಂಡದ ವಿರುದ್ಧ ಅವರು ಈ ಸಾಧನೆ ಮಾಡಿದರು. ಅದೂ ಇಂದೇ (ಅಂದರೆ ಜನವರಿ 2) ಎಂಬುದು ವಿಶೇಷ.

⏩ಪೀಪಲ್ ಮೀಡಿಯಾ⏩ ವಾಟ್ಸಪ್ ಗುಂಪಿಗೆ ಸೇರಲು ಕೆಳಗಿನ ಲಿಂಕ್ ಒಪನ್ ಮಾಡಿ👇

https://chat.whatsapp.com/BoGCVVQyXYVE5m7RhIQRWv

ಜನವರಿ 2, 1879ರಂದು, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯವು ಮೆಲ್ಬೋರ್ನ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್‌ಗೆ ಫ್ರೆಡ್ರಿಕ್ ಹಾಡುಹಗಲೇ ಮೈದಾನದಲ್ಲಿ ನೀರಿಳಿಸಿದರು. ಅಂದಿನ ಪಂದ್ಯದಲ್ಲಿ ಅವರು ವೆಮನ್ ರಾಯಲ್, ಫ್ರಾನ್ಸಿಸ್ ಮೆಕಿನ್ನನ್ ಮತ್ತು ಟಾಮ್ ಎಮ್ಮೆಟ್ ಅವರನ್ನು ಅನುಕ್ರಮವಾಗಿ ಔಟ್ ಮಾಡಿದರು ಮತ್ತು ಅದರೊಂದಿಗೆ ಮೊದಲ ಹ್ಯಾಟ್ರಿಕ್ ಗಳಿಸಿದ ಆಟಗಾರರಾಗಿ ಇತಿಹಾಸವನ್ನು ಸೃಷ್ಟಿಸಿದರು. ಈ ಇನ್ನಿಂಗ್ಸ್‌ನಲ್ಲಿ 25 ಓವರ್‌ಗಳನ್ನು ಬೌಲ್ ಮಾಡಿದ ಫ್ರೆಡೆರಿಕ್ 48 ರನ್ ನೀಡಿ ಆರು ವಿಕೆಟ್ ಪಡೆದರು. ಎರಡನೇ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್‌ಗಳನ್ನು ಕಬಳಿಸಿದರು. ಒಟ್ಟಾರೆ ಈ ಪಂದ್ಯದಲ್ಲಿ 13 ವಿಕೆಟ್ ಪಡೆದು ಆಸ್ಟ್ರೇಲಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

10 ವರ್ಷಗಳ ವೃತ್ತಿಜೀವನ, 18 ಪಂದ್ಯಗಳು..

ಫ್ರೆಡೆರಿಕ್ 1877ರಿಂದ 1887ರವರೆಗೆ ಕ್ರಿಕೆಟ್ ಆಡಿದರು. ಅವರು ತಮ್ಮ 10 ವರ್ಷಗಳ ವೃತ್ತಿಜೀವನದಲ್ಲಿ 18 ಟೆಸ್ಟ್ ಪಂದ್ಯಗಳನ್ನು ಆಡಿ 94 ವಿಕೆಟ್ ಪಡೆದರು. ಅವರು ಏಳು ಐದು ವಿಕೆಟ್ ಸಾಧನೆಗಳನ್ನು ದಾಖಲಿಸಿದ್ದಾರೆ. ಫ್ರೆಡೆರಿಕ್ 1926ರಲ್ಲಿ ನಿಧನರಾದರು. 1996ರಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು 2009ರಲ್ಲಿ ಅವರಿಗೆ ICC ಹಾಲ್ ಆಫ್ ಫೇಮ್ ಮಾನ್ಯತೆಯನ್ನು ನೀಡಿತು.

ಫ್ರೆಡೆರಿಕ್ ಟೆಸ್ಟ್‌ನಲ್ಲಿ ಮೊದಲ ಬಾರಿಗೆ ಹ್ಯಾಟ್ರಿಕ್ ವಿಕೆಟ್ ಪಡೆದರೆ ಪಾಕಿಸ್ತಾನದ ಜಲಾಲ್ ಉದ್ ದಿನ್ ಏಕದಿನ ಪಂದ್ಯದಲ್ಲಿ ಈ ಸಾಧನೆಯನ್ನು ಮೊದಲ ಸಲ ಮಾಡಿದರು. ಅವರು 1982ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಈ ಗೌರವವನ್ನು ಪಡೆದರು. ಟಿ20ಯ ವಿಷಯಕ್ಕೆ ಬಂದರೆ, 2007ರಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಬ್ರೆಟ್ ಲೀ ಈ ಗೌರವ ಪಡೆದರು.

Related Articles

ಇತ್ತೀಚಿನ ಸುದ್ದಿಗಳು