ಕಾಲುವೆಯಲ್ಲಿ ಮೀನು ಹಿಡಿಯಲು ಹೋದ ಐವರು ಮಕ್ಕಳು ನಾಪತ್ತೆ ಆಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕುಮರಿ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ. ಕಾಲುವೆಯಲ್ಲಿ ಮೀನು ಹಿಡಿಯಲು ಹೋದಾಗಲೇ ಒಂದು ದುರಂತ ಸಂಭವಿಸಿದೆ. ಐವರು ಮಕ್ಕಳು ಭಾನುವಾರ ಸಂಜೆಯಿಂದ ನಾಪತ್ತೆಯಾಗಿದ್ದು ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಧನಂಜಯ್ (14), ಲೋಹಿತ್ (12), ಲಕ್ಷ್ಮೀಶ (9), ಚರಣ್‌ರಾಜ್ (9), ಭುವನ್ (8) ನಾಪತ್ತೆಯಾದವರು.
ಭಾನುವಾರ ಸಂಜೆ 5 ಗಂಟೆವರೆಗೂ ಮಕ್ಕಳನ್ನು ಗಮನಿಸಿರುವ ಗ್ರಾಮಸ್ಥರು ನಂತರ ಗಮನಿಸಿಲ್ಲ. ಮಕ್ಕಳು ಮೀನು ಹಿಡಿಯಲು ಹೋಗುತ್ತಿದ್ದರು ಎಂಬ ಮಾಹಿತಿ ಸಹ ಇದೆ. ರಾತ್ರಿಯಾದರೂ ಮಕ್ಕಳು ವಾಪಾಸ್ ಬಾರದ ಕಾರಣ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಪತ್ತೆ ಕಾರ್ಯ ಆರಂಭಿಸಿದ್ದಾರೆ.
ಭದ್ರಾ ನದಿ ಪಾತ್ರದ ಜಾಗ ಅಲ್ಲದೇ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದ ಸಿಸಿ ಕ್ಯಾಮೆರಾಗಳನ್ನು ಪೊಲೀಸರು ತಪಾಸಣೆಗೆ ಒಳಪಡಿಸಿದ್ದಾರೆ.