Home ದೇಶ ಉತ್ತರಾಖಂಡ ಮದರಸಾ ನೆಲಸಮ ಪ್ರಕರಣ: ಹಿಂಸಾಚಾರಕ್ಕೆ ಐವರು ಬಲಿ; ಕಂಡಲ್ಲಿ ಗುಂಡು ಆದೇಶ ಜಾರಿ

ಉತ್ತರಾಖಂಡ ಮದರಸಾ ನೆಲಸಮ ಪ್ರಕರಣ: ಹಿಂಸಾಚಾರಕ್ಕೆ ಐವರು ಬಲಿ; ಕಂಡಲ್ಲಿ ಗುಂಡು ಆದೇಶ ಜಾರಿ

0

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಮುನ್ಸಿಪಲ್ ಅಧಿಕಾರಿಗಳು ಮದರಸಾವನ್ನು ನೆಲಸಮಗೊಳಿಸಿದ ನಂತರ ನಡೆದ ಪೊಲೀಸ್ ಫೈರಿಂಗ್‌ನಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿ ಸುಮಾರು 60 ಜನರು ಗಾಯಗೊಂಡಿದ್ದಾರೆ.

ಫೆಬ್ರವರಿ ರಂದು (ಗುರುವಾರ) ಮಧ್ಯಾಹ್ನ 3:30ರ ಸುಮಾರಿಗೆ ಅಧಿಕಾರಿಗಳು ‘ಮಾಲಿಕ್ ಕೇ ಬಗೀಚೆ’ ಹೆಸರಿನ ಮದರಸಾವನ್ನು ಕೆಡವಲು ಬುಲ್ಡೋಜರ್‌ಗಳೊಂದಿಗೆ ಆಗಮಿಸಿದರು. ತಮ್ಮ ಪವಿತ್ರ ಆರಾಧನಾ ಸ್ಥಳವನ್ನು ಕೆಡವಲು ಇರುವ ಯಾವುದೇ ಆದೇಶವನ್ನು ನಮಗೆ ತೋರಿಸಲಾಗಿಲ್ಲ ಅಥವಾ ಅಧಿಕಾರಿಗಳು ಅವರ ಮಾತನ್ನು ಕೇಳಲು ಸಿದ್ಧರಿಲ್ಲ ಎಂದು ಮೈದಾನದಲ್ಲಿರುವ ಜನರು ಹೇಳಿರುವುದಾಗಿ ದಿ ವೈರ್‌ ವರದಿ ಮಾಡಿದೆ.

ಮದರಸಾವನ್ನು ಕೆಡವಲು ನೀಡಿರುವ ಆದೇಶದ ದಾಖಲೆಗಳನ್ನು ತೋರಿಸಲು ಅಧಿಕಾರಿಗಳು ನಿರಾಕರಿಸಿದರು ಎಂದು ಸ್ಥಳೀಯರು ತಿಳಿಸಿದ್ದಾರೆ.

“ನಮ್ಮ ಮಹಿಳೆಯರನ್ನು ಪುರುಷ ಪೋಲೀಸ್ ಅಧಿಕಾರಿಗಳು ಲಾಠಿಗಳಿಂದ ಹೊಡೆದರು ಮತ್ತು ಈ ಪ್ರದೇಶದಲ್ಲಿ ಕನಿಷ್ಠ ನಾಲ್ಕು ಗಂಡಸರು ಗುಂಡುಗಳಿಂದ ಗಾಯಗೊಂಡಿದ್ದಾರೆ” ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ಹೇಳಿದೆ.

ಮದರಸಾವನ್ನು ಕೆಡವುವ ಮೊದಲು ಅದರ ಒಳಗಿರುವ ಧಾರ್ಮಿಕ ಪುಸ್ತಕಗಳನ್ನು ತೆಗೆದುಕೊಳ್ಳಲು ಇಬ್ಬರಿಗೆ ಮಾತ್ರ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು ಎನ್ನಲಾಗಿದೆ. ಜನರು ಸರ್ಕಾರಿ ಆದೇಶವನ್ನು ತೋರಿಸುವಂತೆ ಒತ್ತಾಯಿಸಿದರೂ ಸರ್ಕಾರಿ ಅಧಿಕಾರಿಗಳು ಅದಕ್ಕೆ ಸ್ಪಂದಿಸದೇ ಹೋಗಿದ್ದು ಗಲಭೆಗೆ ಕಾರಣವಾಗಿದೆ ಎಂದು ದಿ ವೈರ್‌ ವರದಿ ಮಾಡಿದೆ.

ಉತ್ತರಾಖಂಡ್ ಪ್ರಾಧಿಕಾರದಿಂದ ಕೆಡವಲಾದ ಈ ಮದರಸಾ 4,000ಕ್ಕೂ ಹೆಚ್ಚು ಕುಟುಂಬಗಳು ವಾಸಿಸುವ ರೈಲ್ವೆ ಕಾಲೋನಿ ಪ್ರದೇಶದಲ್ಲಿದೆ. ರೈಲ್ವೆ ವಿಸ್ತರಣೆಗೆ ಕೇಂದ್ರವು ಭೂಮಿ ಬಯಸಿದ್ದು, ಈ ಸಂಬಂಧ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ

ಈ ನಡುವೆ, ವರದಿಗಳ ಪ್ರಕಾರ, ಈ ಪ್ರದೇಶದಲ್ಲಿ ಕಂಡಲ್ಲಿ ಗುಂಡು ಆದೇಶ ಜಾರಿಗೊಳಿಸಲಾಗಿದೆ ಮತ್ತು ಭದ್ರತೆಯನ್ನು ಬಲಪಡಿಸಲಾಗಿದೆ.

“ನೈನಿತಾಲ್ DM [ಜಿಲ್ಲಾ ಮ್ಯಾಜಿಸ್ಟ್ರೇಟ್] ಅವರು ಬನ್‌ಭೂಲ್‌ಪುರದಲ್ಲಿ ಕರ್ಫ್ಯೂ ವಿಧಿಸಿದ್ದಾರೆ ಮತ್ತು ಗಲಭೆಕೋರರಿಗೆ ಶೂಟ್-ಆನ್-ಸೈಟ್ ಆದೇಶವನ್ನು ಆದೇಶಿಸಿದ್ದಾರೆ” ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ರಾತ್ರಿಯೂ ಪೊಲೀಸರು ಗುಂಡಿನ ದಾಳಿ ನಡೆಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. “ನಾವು ನಮ್ಮ ಮನೆಯೊಳಗೆ ಇದ್ದಾಗ, ಪೊಲೀಸರು ನಮ್ಮ ಬಾಗಿಲಿಗೆ ಗುಂಡು ಹಾರಿಸಿದರು. ನಾವು ಭಯದಲ್ಲಿ ಬದುಕುತ್ತಿದ್ದೇವೆ, ಇದು ನಿಲ್ಲಬೇಕು, ”ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು ಎಂದು ವೈರ್‌ ವರದಿ ಮಾಡಿದೆ.

You cannot copy content of this page

Exit mobile version