ಹಾಸನ: ರಾಜ್ಯದಲ್ಲಿ ಪದೇಪದೇ ಕಾಡಾನೆ ಮತ್ತು ಮಾನವ ಸಂಘರ್ಷದಿಂದ ಸಂಭವಿಸುತ್ತಿರುವ ಪ್ರಾಣಹಾನಿ ಹಾಗೂ ಬೆಳೆ ಹಾನಿಯನ್ನು ತಪ್ಪಿಸಿ ನಿರ್ದಿಷ್ಟ ಪರಿಹಾರ ಕಾರ್ಯಕ್ರಮಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮುಂದಿಡಲು ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲು ಜ.19ರಂದು ಹಾಸನದ ರೆಡ್ ಕ್ರಾಸ್ ಭವನದಲ್ಲಿ ನಡೆದ ಬೇಲೂರು ಆಲೂರು ಸಕಲೇಶಪುರ ಹಾಗೂ ಅರಕಲಗೂಡು ತಾಲೂಕುಗಳ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು, ಬೆಳೆಗಾರರ ಸಂಘಟನೆಗಳು, ರೈತ ಸಂಘ, ದಲಿತ ಸಂಘಟನೆಗಳು, ಕಾರ್ಮಿಕರ ಸಂಘಟನೆಗಳು ಹಾಗೂ ಜನಪರ ಸಂಘಹಿರಿಯ ರೈತ ಮುಖಂಡ ಅರೇಹಳ್ಳಿ ರಾಜೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೆಮ್ಮಿಗೆ ಮೋಹನ್ ಹಾಗೂ ಆರ್.ಪಿ. ವೆಂಕಟೇಶಮೂರ್ತಿ ಅವರನ್ನು ಪ್ರಧಾನ ಸಂಚಾಲಕರನ್ನಾಗಿ ಹಾಗೂ ಹೆಚ್. ವಿಶ್ವನಾಥ್ ಟಿ.ಪಿ. ಸುರೇಂದ್ರ ಮತ್ತು ಬಿ.ಕೆ. ಚಂದ್ರಕಲಾ ಅವರನ್ನು ಸಂಚಾಲಕರನ್ನಾಗಿ ಆಯ್ಕೆ ಮಾಡಲಾಗಿದೆ.
ಕೋರ್ ಕಮಿಟಿ ಸದಸ್ಯರನ್ನಾಗಿ ಹಳಸೆ ಶಿವಣ್ಣ, ಹುರುಡಿ ಮೋಹನ್ ಕುಮಾರ್, ಕೆ.ಎಸ್. ಮಂಜೇಗೌಡ ತೊ.ಚ. ಅನಂತ ಸುಬ್ಬರಾವ್ ಅರೇಹಳ್ಳಿ ರಾಜೇಗೌಡ, ಕೆ.ಬಿ. ಕೃಷ್ಣಪ್ಪ, ಹೆಚ್. ಎಸ ಕಿಶೋರ್ ಕುಮಾರ್, ಕೊಡಗಿನ ಕೆ.ಕೆ. ವಿಶ್ವನಾಥ್ ಮತ್ತು ಉಮಾಶಂಕರ್ ಕೆ.ಬಿ. ಲೋಕೇಶ್, ಬಿ.ಎಂ. ನಾಗರಾಜ್, ಅದ್ದೂರಿ ಕುಮಾರ್, ಬಾಳುಗೋಪಾಲ್, ಯಡೇಹಳ್ಳಿ ಮಂಜುನಾಥ್, ಎಸ್.ಆರ್. ಲಕ್ಷ್ಮೀನಾರಾಯಣ್, (ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ) ಎಚ್. ಆರ್. ನವೀನ್ ಕುಮಾರ್, ಧರ್ಮೇಶ್, ಎಂ.ಸಿ.ಡೋಂಗ್ರೆ, ಮಲ್ನಾಡ್ ಮೆಹಬೂಬ್, ಎಸ್.ಎನ್. ಮಲ್ಲಪ್ಪ ಹಾಗೂ ಜೈ ಭೀಮ್ ಮಂಜು ಹಾಗೂ ಅಬ್ದುಲ್ ಸಮದ್ ಅವರನ್ನು ಆರಿಸಲಾಯಿತು. ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್, ಅರಕಲಗೂಡು ಕ್ಷೇತ್ರದ ಶಾಸಕ ಎ ಮಂಜು, ಬೇಲೂರು ಕ್ಷೇತ್ರದ ಶಾಸಕ ಎಚ್ ಕೆ ಸುರೇಶ್, ಆಲೂರು ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕರಾದ ಎಚ್. ಕೆ. ಕುಮಾರಸ್ವಾಮಿ, ಬಿ. ಶಿವರಾಂ, ಜಿಲ್ಲಾ ಜನತಾದಳ (ಎಸ್) ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ. ಎಸ್. ಲಿಂಗೇಶ್ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ ಲಕ್ಷ್ಮಣ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಇವರನ್ನು ಸಮಿತಿಗೆ ವಿಶೇಷ ಆಹ್ವಾನಿತರನ್ನಾಗಿ ಆಯ್ಕೆ ಮಾಡಲಾಗಿದೆ.
ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ವಿವಿಧ ಜನಪ್ರತಿನಿಧಿಗಳು ಒಳಗೊಂಡಂತೆ ಸಮಿತಿಗೆ ಅಗತ್ಯವಾದ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲು ಸಂಚಾಲಕರ ಮಂಡಲಿಗೆ ಅಧಿಕಾರ ನೀಡಲಾಗಿದೆ.ಸಭೆಯ ಆರಂಭದಲ್ಲಿ ಮಾತನಾಡಿದ ಮಾಜಿ ಶಾಸಕ ಎಚ್. ಎಂ. ವಿಶ್ವನಾಥ್ ಅವರು ಭಾರತದಲ್ಲಿ ಸುಮಾರು 22 ಸಾವಿರ ಆನೆಗಳಿವೆ. ಅತಿ ಹೆಚ್ಚು ಅಂದರೆ ಸುಮಾರು 6,400 ಆನೆಗಳು ಕರ್ನಾಟಕದಲ್ಲಿ ಇವೆ. 3000 ಆನೆಗಳಿರುವ ಕೇರಳ ಮೂರನೇ ಸ್ಥಾನದಲ್ಲಿದೆ. ನಂತರ ಸ್ಥಾನ ಅಸ್ಸಾಂ ರಾಜ್ಯದಾಗಿದೆ. ನಾಡಿಗೆ ಬಂದು ಸಂತತಿ ವೃದ್ಧಿಯಾಗಿರುವ ನಾಡಿನಲ್ಲಿರುವ ಆನೆಗಳನ್ನು ಶ್ರೀಲಂಕಾ ಮಾದರಿಯ ಶಿಬಿರಕ್ಕೆ ತಂದು ಸಾಕೋದು ಒಂದೇ ನಮಗಿರುವ ಏಕೈಕ ಪರಿಹಾರದ ದಾರಿಯಾಗಿದೆ ಎಂದು ಹೇಳಿದವರು ತಾವು ಎರಡು ಬಾರಿ ಶ್ರೀಲಂಕಾ ಹೋಗಿ ಅಲ್ಲಿನ ಆನೆ ಶಿಬಿರಗಳನ್ನು ನೋಡಿ ಬಂದಿರುವುದಾಗಿ ಹೇಳಿದರು.
ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಟಿಪಿ ಸುರೇಂದ್ರ ಅವರು ಒಕ್ಕೂಟದಿಂದ ಮಾನವ ಕಾಡಾನೆ ಸಂಘರ್ಷ ತಪ್ಪಿಸಲು ರಾಜ್ಯ ಹೈಕೋರ್ಟ್ ನಲ್ಲಿ ಹೂಡಿರುವ ಮೊಕದ್ದಮೆ ನ್ಯಾಯಾಲಯದಲ್ಲಿ ನಡೆದಿರುವ ಪ್ರಕ್ರಿಯೆಗಳು ಹಾಗೂ ನೀಡಿರುವ ಮಧ್ಯಂತರ ತೀರ್ಪಿನ ಕುರಿತು ವಿವರಿಸಿದರು. ಕಾಡಾನೆ ಸಮಸ್ಯೆ ಪರಿಹಾರಕ್ಕೆ ಸರ್ಕಾರಗಳಲ್ಲಿ ಹಣದ ವಿಷಯಕ್ಕಿಂತ ಇಚ್ಛಾ ಶಕ್ತಿಯ ಕೊರತೆ ಇದೆ. ಕುದುರೆಮುಖ, ಭದ್ರ, ಹೊಂಗಡಹಳ್ಳಿ ಭಾಗದಲ್ಲಿ ಸುಮಾರು ಒಂದು ಲಕ್ಷ ಎಕರೆ ಪ್ರದೇಶದಲ್ಲಿ ನಾಡಿಗೆ ಬರುವ ಆನೆಗಳನ್ನು ಸ್ಥಳಾಂತರಿಸಿ ಕಾಡಿನ ಹಂಚಿನಲ್ಲಿ ಆನೆಗಳಿಗೆ ಅಗತ್ಯವಾದ ಆಹಾರ ಪದಾರ್ಥಗಳನ್ನು ಬೆಳೆದು ಕೊಡಬಹುದು. ಆನೆಗಳು ಮಾತ್ರವಲ್ಲದೆ, ನವಿಲುಗಳು ಹಾಗೂ ಕೋತಿಗಳ ಸಮಸ್ಯೆ ಕೂಡ ವಿಪರೀತ ಹೆಚ್ಚಿ ರೈತರು ಬಹಳ ಸಮಸ್ಯೆ ಅನುಭವಿಸುತ್ತಿದ್ದಾರೆ. ಭೂಮಿಯ ಮೇಲೆ ಸಮತೋಲನ ಕಾಪಾಡಲು ಜನಸಂಖ್ಯೆ ನಿಯಂತ್ರಣ ವ್ಯವಸ್ಥೆ ಮಾಡಿಕೊಂಡಿರುವಂತೆ ಕಾಡುಪ್ರಾಣಿಗಳ ಸಂಖ್ಯೆಯನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಇತ್ತೀಚೆಗೆ ನಮ್ಮನ್ನು ಅಗಲಿದ ದೇಶ ಕಂಡ ಶ್ರೇಷ್ಠ ಪರಿಸರ ತಜ್ಞ ಗಾಡ್ಗಿಳ್ ಅಂಥವರೇ ಹೇಳಿದ್ದಾರೆ.
ನಾವು ಆನೆಗಳ ವಿರೋಧಿಗಳಲ್ಲ. ಆನೆಗಳೊಂದಿಗೆ ಹೊಂದಿಕೊಂಡು ಹೋಗಬೇಕೆಂದು ಸಲಹೆ ನೀಡುವವರಿಗೆ ಇಲ್ಲಿನ ಪರಿಸ್ಥಿತಿ ಅರ್ಥ ಆಗುತ್ತಿಲ್ಲ ಎಂದು ಅವರು ಹೇಳಿದರು. ಆನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಆಗುವ ತನಕ ಸಂಘರ್ಷದಲ್ಲಿ ಸಾವನ್ನಪ್ಪುವ ಅರಣ್ಯ ಇಲಾಖೆ ಸಿಬ್ಬಂದಿಗೆ ನೀಡುವಂತೆ ರೈತರು ಹಾಗೂ ಕಾರ್ಮಿಕರ ಕುಟುಂಬಗಳಿಗೂ ಒಂದು ಕೋಟಿ ರೂ. ಪರಿಹಾರ ನೀಡಬೇಕು. ಬೆಳೆ ಆನೆಗೆ ಗರಿಷ್ಠ ಪ್ರಮಾಣದ ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದರು. ಶಾಸಕ ಸಿಮೆಂಟ್ ಮಂಜು ಅವರು ಮಾತನಾಡಿ, ಆನೆಗಳ ದಾಳಿಯಿಂದ ಮನುಷ್ಯ ಸತ್ತಾಗ ಸ್ಥಳಕ್ಕೆ ಧಾವಿಸುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಂದಷ್ಟು ಪರಿಹಾರದ ಹಣಕೊಟ್ಟು ಹೋಗುತ್ತಿದ್ದೇವೆ, ನಂತರ ಮರೆಯುತ್ತೇವೆ. ಈ ಸಮಸ್ಯೆಗೆ ಒಂದು ಪೂರ್ಣ ವಿರಾಮ ಹಾಕುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುವ ಅಗತ್ಯ ಇದೆ. ಆನೆಧಾಮ ನಿರ್ಮಿಸಲು ಸ್ಥಳ, ಆಹಾರ ಮತ್ತು ನೀರಿನ ಕೊರತೆ ಇಲ್ಲ. ನಮಗೆ ಇಚ್ಛಾ ಶಕ್ತಿಯ ಕೊರತೆ ಇದೆ ಎಂದು ಅಭಿಪ್ರಾಯ ಪಟ್ಟರು.
ನಿವೃತ್ತ ಅರಣ್ಯ ಉಪ ಸಂರಕ್ಷಣಾಧಿಕಾರಿ ಎಚ್ ಆರ್ ಲಕ್ಷ್ಮಿ ನಾರಾಯಣ ಅವರು ಮಾತನಾಡಿ, ಇದೊಂದು ಬಹಳ ಸಂಕೀರ್ಣವಾದ ಸಮಸ್ಯೆಇದೊಂದು ಬಹಳ ಸಂಕೀರ್ಣವಾದ ಸಮಸ್ಯೆ. ಆದರೆ ಪರಿಹಾರ ಸಾಧ್ಯ ಇಲ್ಲವೆಂದಲ್ಲ ಕೇಂದ್ರ ಸರ್ಕಾರ ನಮಿಬಿಯಾದಿಂದ ಭಾರತಕ್ಕೆ ಚಿರತೆಗಳನ್ನು ತಂದು ಸಾಕಲು ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಕೇಂದ್ರ ಸರ್ಕಾರದ 3600 ಕೋಟಿ ರೂ ಕ್ಯಾಂಪಾನಿಧಿ ಇದೆ. ಆನೆಗಳ ಪುನರ್ವಸತಿಗಾಗಿ ಒಂದು ಸ್ಪಷ್ಟ ಯೋಜನೆ ರೂಪಿಸಿ ಅದಕ್ಕಾಗಿ ಕ್ಯಾಂಪಾನಿಧಿ ಬಳಸಿಕೊಳ್ಳಬೇಕು. ಈ ಯೋಜನೆ ರೂಪಿಸಲು ಕೇಂದ್ರ ಸರ್ಕಾರವೇ ಮುಂದೆ ಬರಬೇಕೆಂದು ಅವರು ವಿವರಿಸಿದರು. ಹೆಮ್ಮಿಗೆ ಮೋಹನ್ ಅವರು ಮಾತನಾಡಿ ಆನೆಗಳ ಶಿಬಿರ ಮಾಡಲು ಹೆಚ್ಚು ಸ್ಥಳ ಬೇಕಾಗಿಲ್ಲ.ಶ್ರೀಲಂಕಾದಲ್ಲಿ ಕೇವಲ 25 ಎಕ್ಕರೆ ಪ್ರದೇಶದಲ್ಲಿ 60 ಆನೆಗಳನ್ನು ಸಾಕಲಾಗುತ್ತಿದೆ ಶಿಬಿರವನ್ನು ಒಂದು ಪ್ರವಾಸಿ ಕೇಂದ್ರವನ್ನಾಗಿಯೂ ರೂಪಿಸಬಹುದು. ಆನೆಗಳನ್ನು ಸ್ಥಳಾಂತರಿಸಿ ಪುನರ್ವಸತಿ ಯೋಜನೆ ರೂಪಿಸಬೇಕೆಂದು ಸುಕುಮಾರ್ ಆಯೋಗವೇ ಶಿಫಾರಸು ಮಾಡಿದೆ ಎಂದು ವಿವರಿಸಿ ಕ್ಯಾಂಪಾನಿಧಿಯನ್ನು ಕೇವಲ ಅರಣ್ಯೀಕರಣ ಯೋಜನೆಗೆ ಬಳಸಲಾಗುತ್ತಿದೆ ಎಂದರು.
ಶಾಸಕ ಎಚ್. ಕೆ. ಸುರೇಶ್ ಅವರು ಮಾತನಾಡಿ ಸಾಧನೆಗಳ ಸಮಸ್ಯೆಯಿಂದಾಗಿ ಬೇಲೂರು ತಾಲೂಕಿನ ಪರಿಸ್ಥಿತಿ ಬಹಳ ಗಂಭೀರವಾಗಿದೆ. ವಿಶೇಷವಾಗಿ ಬಿಕ್ಕೋಡು ಹಾಗೂ ಅರಳಿ ಭಾಗದಲ್ಲಿ ಸಂಜೆ ನಂತರ ಮನೆಯಿಂದ ಆಚೆ ಬರಲು ಜನರು ಭಯಪಡುತ್ತಿದ್ದಾರೆ. ಟವಲ್ ಬಾರಿ ವಿಧಾನಸಭೆಯಲ್ಲಿ ಕಾಡಾನೆ ಸಮಸ್ಯೆ ಬಗ್ಗೆ ಪ್ರಸ್ತಾಪ ಮಾಡಿದ್ದಾಗಿಯೂ ಈಗಲಾದರೂ ಈ ಸಮಸ್ಯೆಗೆ ಪರಿಹಾರ ಕೊಂಡುಕೊಳ್ಳಲೇಬೇಕಾಗಿದೆ. ಪಕ್ಷಾತೀತವಾಗಿ ಎಲ್ಲ ಸಂಘಟನೆಗಳನ್ನು ಒಟ್ಟಿಗೆ ತರುವ ಪ್ರಯತ್ನಕ್ಕೆ ತಮ್ಮ ಸಂಪೂರ್ಣ ಬೆಂಬಲ ಇರುವುದಾಗಿಯೂ ಈ ಸಮಸ್ಯೆ ಪರಿಹಾರಕ್ಕಾಗಿ ಪ್ರಧಾನಿ ಅಥವಾ ಮುಖ್ಯಮಂತ್ರಿ ಬಳಿ ಹೋಗುವ ನಿಯೋಗದಲ್ಲಿ ಪಾಲ್ಗೊಳ್ಳಲು ಬೇರೆನೆ ಕೆಲಸಗಳಿದ್ದರೂ ಬಿಟ್ಟು ಬರುವುದಾಗಿ ತಿಳಿಸಿದರು. ಸಭೆಯ ಆರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ನಾಡಿದ ಆರ್ ಪಿ ವೆಂಕಟೇಶಮೂರ್ತಿ ಅವರು ಕಾಡನೆಗಳಿಂದ ಸಮಸ್ಯೆ ಅನುಭವಿಸುತ್ತಿರುವವರು ಸ್ಥಳೀಯರಾ ಆದರೆ ಪರಿಹಾರ ರೂಪಿಸುವವರು ದೂರದ ಬೆಂಗಳೂರು ಹಾಗೂ ದೆಹಲಿಯಲ್ಲಿದ್ದಾರೆ. ಹಾಗಾಗಿಯೇ ದೀರ್ಘ ಕಾಲದಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯ ಆಗಿಲ್ಲ. ಆನೆಗಳ ಪುನರ್ವಸತಿಗಾಗಿಯೇ ಒಂದು ಪ್ರತ್ಯೇಕ ಮಂಡಳಿಯನ್ನು ರಚಿಸುವ ಅಗತ್ಯ ಇದೆ. ಈ ಮಂಡಳಿಯಲ್ಲಿ ಪೀಡಿತ ಪ್ರದೇಶಗಳ ಲೋಕಸಭಾ ಸದಸ್ಯರು ಶಾಸಕರು ಬೆಳೆಗಾರರು ಹಾಗೂ ಇತರ ಜನಪರ ಸಂಘಟನೆಗಳ ಪ್ರತಿನಿಧಿಗಳು ಇರಬೇಕು. ಸ್ಥಳೀಯರೇ ಸೇರಿ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇರಬೇಕು ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ಥಾನದ ಅಧಿಕಾರಿ ಕಾರ್ಯದರ್ಶಿ ಇರಬೇಕು.
ಈ ಮಂಡಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುದಾನ ನೀಡಬೇಕು ಹಾಗೂ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಪಡೆಯುವ ಅಧಿಕಾರವೂ ಇರಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಮಾಜಿ ಶಾಸಕ ಎಚ್ ಕೆ ಕುಮಾರಸ್ವಾಮಿ, ತೊ.ಚ. ಅನಂತ ಸುಬ್ಬರಾವ್, ಬಿ.ಕೆ ಚಂದ್ರಕಲಾ,
ಹಳಸ ಶಿವಣ್ಣ, ಮುರುಡಿ ಮೋಹನ್ ಕುಮಾರ್ ,ಅದ್ದೂರಿ ಕುಮಾರ್ , ಎಚ್ ಆರ್ ನವೀನ್ ಕುಮಾರ್ ಎಂ ಸಿ ಡೊಂಗ್ರೆ ಬಿಎನ್ ನಾಗರಾಜ್ ಐಗೂರು ಅರ್ಜುನ್ ಮಾತನಾಡಿ ಸಲಹೆಗಳನ್ನು ನೀಡಿದರು.
ಅಧ್ಯಕ್ಷತೆ ವಹಿಸಿದ್ದ ರಾಜೇಗೌಡ ಅವರು ಸಮಿತಿಯ ರೂಪರೇಶೆಗಳ ಬಗ್ಗೆ ಸಲಹೆ ನೀಡಿದರು.
ಹೊಸ ಸಮಿತಿಯ ಸಭೆಯನ್ನು ಜನವರಿ 28ರಂದು ಬೆಳಗ್ಗೆ 11 ಗಂಟೆಗೆ ರೆಡ್ ಕ್ರಾಸ್ ಭವನದಲ್ಲಿ ನಡೆಸಲು ನಿರ್ಧರಿಸಲಾಯಿತು.
ಜ.24 ರಂದು ಹಾಸನದಲ್ಲಿ ನಡೆಯಲಿರುವ ಜಾತ್ಯತೀತ ಜನತಾದಳದ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಹಾಗೂ ಕೇಂದ್ರದ ಕೈಗಾರಿಕಾ ಸಚಿವ ಎಚ್ ಡಿ ಕುಮಾರಸ್ವಾಮಿ ಅವರನ್ನು ಸಮಿತಿಯ ಸಂಚಾಲಕರು ಮತ್ತು ಸದಸ್ಯರು ಭೇಟಿ ನೀಡಿ, ಕಾಡಾನೆ ಸಮಸ್ಯೆಗಳ ಪರಿಹಾರಕ್ಕಾಗಿ ಮನವಿಪತ್ರ ಸಲ್ಲಿಸಲು ನಿರ್ಧರಿಸಲಾಯಿತು.
