ಬೆಂಗಳೂರು : ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ದ ಸಲ್ಲಿಸಲಾಗಿದ್ದ ಪೋಕ್ಸೋ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡಿದೆ. ಆಧರೆ ಆರೋಪದ ಅರ್ಜಿಯನ್ನು ಹೈಕೋರ್ಟ್ ರದ್ದು ಮಾಡಲು ನಿರಾಕರಿಸಿದೆ. ಇದರಿಂದ ಮಾಜಿ ಸಿಎಂ ಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ತಾವು ಸಹಾಯ ಕೇಳಲು ಬಿ.ಎಸ್.ಯಡಿಯೂರಪ್ಪ ಅವರ ಮನೆಗೆ ಹೋದಾಗ ಅವರು ನನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದರು. ಆಕೆ ಮಾನಸಿಕ ಅಸ್ವಸ್ಥೆಯಾಗಿದ್ದಳು ಎಂದು ಸಂತ್ರಸ್ತೆಯ ತಾಯಿ ದೂರು ನೀಡಿದ್ದರು. ಬಳಿಕ ಕ್ಯಾನ್ಸರ್ ನಿಂದಾಗಿ ಸಂತ್ರಸ್ತೆಯ ತಾಯಿ ಮೃತಪಟ್ಟಿದ್ದರು. ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.
ಬಿಎಸ್‌ವೈ ಅವರ ಪದ ವಾದಿಸಿದ್ದ ವಕೀಲರು, ಈಗ ಅರ್ಜಿದಾರರಿಗೆ 82 ವರ್ಷ ವಯಸಾಗಿದೆ. ಸಂತ್ರಸ್ತೆಯ ತಾಯಿಯ ನಡುವಳಿಕೆಯು ಅನುಮಾನಾಸ್ಪದವಾಗಿದೆ. ಇದುವರೆಗೂ ಈಕೆ ವಿವಿಧ ವಯೋಮಾನದ, ವಿವಿಧ ಹುದ್ದೆಯ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಸಂಬಂಧಿಕರೂ ಸೇರಿದಂತೆ ಸುಮಾರು 56 ಜನರ ಮೇಲೆ ಇದೇ ರೀತಿಯ ದೂರು ಸಲ್ಲಿಸಿದ್ದಾರೆ. ಅನುಚಿತವಾಗಿ ಸ್ಪರ್ಶಿಸಿದ್ದಾರೆಂದು ದೂರುದಾರರು ಹೇಳಿದ್ದಾರೆ. ಆದರೆ ಅದೇ ದೂರುದಾರೆಯ ತಮ್ಮ ದೂರಿನಲ್ಲಿ ಹಲವರ ಮುಂದೆ, ಬಿಎಸ್‌ವೈ ನಿವಾಸದಲ್ಲಿಯೆ ಈ ಕೃತ್ಯ ಎಸೆಗಿದ್ದಾರೆಂದು ಹೇಳಿದ್ದಾರೆ. ಇದು ಸಾಧ್ಯವಿಲ್ಲ. ಹೀಗಾಗಿ ಪ್ರಕರಣವನ್ನು ರದ್ದುಪಡಿಸಬೇಕೆಂದು ಕೋರಿದ್ದರು.