ಮಾಜಿ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಮೇಲೆ ಗುಂಡಿನ ದಾಳಿ

ಅಮೃತಸರ: ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಮತ್ತು ಶಿರೋಮಣಿ ಅಕಾಲಿದಳ (ಎಸ್‌ಎಡಿ) ನಾಯಕ ಸುಖ್‌ಬೀರ್ ಸಿಂಗ್ ಬಾದಲ್ ಅವರನ್ನು ಬುಧವಾರ ಅಮೃತಸರದ ಗೋಲ್ಡನ್ ಟೆಂಪಲ್‌ನ ಪ್ರವೇಶ ದ್ವಾರದಲ್ಲಿ ಖಾಲಿಸ್ತಾನಿ ಕಾರ್ಯಕರ್ತ ನಾರಾಯಣ ಸಿಂಗ್ ಚೌರಾ ಎನ್ನುವಾತ ಗುಂಡು ಹಾರಿಸಿದ್ದಾನೆ.

ದಾಳಿಯಿಂದ ಸುಖ್‌ಬೀರ್ ಸಿಂಗ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಪೊಲೀಸರು ತಕ್ಷಣ ಎಚ್ಚೆತ್ತ ವ್ಯಕ್ತಿಯನ್ನು ಬಂಧಿಸಿದ್ದಾರೆ. ಡಿಸೆಂಬರ್ 2 ರಂದು, ಪಕ್ಷದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಸೇರಿದಂತೆ ಎಸ್ಎಡಿ ನಾಯಕರು ಅಮೃತಸರದ ಗೋಲ್ಡನ್ ಟೆಂಪಲ್ ಆವರಣದಲ್ಲಿ ಅಕಾಲ್ ತಖ್ತ್ ಸಾಹಿಬ್ ವಿಧಿಸಿದ ಧಾರ್ಮಿಕ ಶಿಕ್ಷೆಯ ಪ್ರಕಾರ ‘ಸೇವೆ’ ನಡೆಸುತ್ತಿದ್ದರು.

Related Articles

ಇತ್ತೀಚಿನ ಸುದ್ದಿಗಳು