ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿ ಎಂದು ಆರೋಪಿಸಿ ರಾಜಿನಾಮೆ ನೀಡಿದ ಮಾಜಿ ಶಾಸಕ

ನವದೆಹಲಿ: ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿ ಸರ್ಕಾರವಾಗಿದೆ. ಈ ಸರ್ಕಾರ ನಮ್ಮ ದೇಶವನ್ನು ಸಂವಿಧಾನ ಪ್ರಕಾರವಾಗಿ ನಡೆಸುತ್ತಿಲ್ಲ ಎಂದು ಆರೋಪಿಸಿ ಗುಜರಾತ್‌ನ ದೇದಿಯಪದ ಕ್ಷೇತ್ರದ ಮಾಜಿ ಶಾಸಕ, ಬುಡಕಟ್ಟು ನಾಯಕ ಮಹೇಶ್ ವಾಸವ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಪ್ರಭಾವಿ ಬುಡಕಟ್ಟು ನಾಯಕ ಛೋಟು ವಾಸವ ಅವರ ಪುತ್ರರಾಗಿರುವ ಮಹೇಶ್ ವಾಸವ ಅಂಬೇಡ್ಕರ್ ಜಯಂತಿ ದಿನವೇ ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್ ಅವರಿಗೆ ರಾಜೀನಾಮೆ ಸಲ್ಲಿಸಿರುವುದು ವಿಶೇಷವಾಗಿದೆ.

ಮಹೇಶ್ ವಾಸವ ಮಾರ್ಚ್ 2024 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಡಾ. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ದೇಶವು ಸಂವಿಧಾನದ ಪ್ರಕಾರ ನಡೆಯುತ್ತಿಲ್ಲ ಎಂದು ನಾನು ಹೇಳಲೇಬೇಕು. ಆದಿವಾಸಿಗಳು, ದಲಿತರು, ಒಬಿಸಿಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು ಮತ್ತು ಇತರ ಬಡ ವರ್ಗಗಳು ಒಂದಾಗಿ ಆರೆಸ್ಸೆಸ್ ಮತ್ತು ಬಿಜೆಪಿಯ ಸಿದ್ಧಾಂತದ ವಿರುದ್ಧ ಹೋರಾಡುತ್ತೇವೆ ಎಂದು ಅವರು ಘೋಷಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು