Home ವಿದೇಶ ಗಾಜಾ ದಾಳಿ: ನಾಲ್ಕು ದಿನಗಳ ಯುದ್ಧ ವಿರಾಮಕ್ಕೆ ಒಪ್ಪಿದ ಇಸ್ರೇಲ್‌

ಗಾಜಾ ದಾಳಿ: ನಾಲ್ಕು ದಿನಗಳ ಯುದ್ಧ ವಿರಾಮಕ್ಕೆ ಒಪ್ಪಿದ ಇಸ್ರೇಲ್‌

0

ಸತತ ಆರು ವಾರಗಳಿಂದ ಮುಂದುವರೆದಿರುವ ಗಾಜಾ ಮೇಲಿನ ಇಸ್ರೇಲ್‌ ದಾಳಿಯು, ನಾಲ್ಕು ದಿನಗಳ ಕಾಲ ನಿಲ್ಲಲಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಇಸ್ರೇಲ್‌ ನಾಲ್ಕು ದಿನಗಳ ಕಾಲ ಯುದ್ಧ ವಿರಾಮ ಘೋಷಿಸಿ ಗಾಜಾ ಮೇಲಿ ದಾಳಿಯನ್ನು ನಿಲ್ಲಿಸಲಿದ್ದು, ಪ್ರತಿಯಾಗಿ ಹಮಾಸ್‌ ತನ್ನ ಬಳಿಯಿರುವ ಒತ್ತೆಯಾಳುಗಳಲ್ಲಿ 50 ಜನ ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆ ಮಾಡಲು ಒಪ್ಪಿದೆ.

ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ನೆತನ್ಯಾಹು ಇದು ಯುದ್ಧದ ಕೊನೆಯಲ್ಲ ನಾಲ್ಕು ದಿನಗಳ ವಿರಾಮ ಮಾತ್ರ. ನಂತರ ಎಂದಿನಂತೆ ಯುದ್ಧ ಮುಂದುವರೆಯಲಿದೆಯೆಂದು ಸದನಕ್ಕೆ ತಿಳಿಸಿದ್ದಾರೆ. ಹಮಾಸ್ ನಿರ್ಮೂಲನೆಯಾಗುವವರೆಗೆ ಮತ್ತು ಒತ್ತೆಯಾಳುಗಳೆಲ್ಲರನ್ನು ಬಿಡುಗಡೆ ಮಾಡುವವರೆಗೆ ಯುದ್ಧ ಮುಂದುವರಿಯುತ್ತದೆ ಎಂದು ನೆತನ್ಯಾಹು ಹೇಳಿದರು.

ಈ ಕದನ ವಿರಾಮದೊಂದಿಗೆ ಗಾಜಾ ಪ್ರದೇಶದಲ್ಲಿ ಮಾನವೀಯ ನೆರವು ಕಾರ್ಯಕ್ರಮಗಳಿ ಅವಕಾಶ ದೊರೆಯಲಿದೆ. ಗಾಜಾದಲ್ಲಿ ಆಸ್ಪತ್ರೆಗಳು ಮತ್ತು ರೆಡ್‌ ಕ್ರಾಸ್‌ ಕೂಡಾ ಕೆಲಸ ಮಾಡದ ಪರಿಸ್ಥಿತಿಯಿದೆ. ಇಂಧನ ನಿಲುಗಡೆಯಿಂದಾಗಿ ಅಲ್ಲಿ ICU ಘಟಕಗಳು ಸಹ ಕೆಲಸ ಮಾಡುವುದನ್ನು ನಿಲ್ಲಿಸಿವೆ.

ಹಮಾಸ್‌ ಬಿಡುಗಡೆ ಮಾಡುವ ಪ್ರತಿ 10 ಒತ್ತೆಯಾಳುಗಳಿಗೆ ಪ್ರತಿಯಾಗಿ ತಾನು ಒಂದು ದಿನದ ಕದನ ವಿರಾಮ ನೀಡುವುದಾಗಿ ಇಸ್ರೇಲ್‌ ತಿಳಿಸಿದೆ. ಗಾಜಾ ಪ್ರದೇಶದ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಇದುವರೆಗೆ ಅಲ್ಲಿ ಸುಮಾರು 30 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ.

You cannot copy content of this page

Exit mobile version