Home ಅಪರಾಧ ಫ್ರೆಂಚ್ ಪ್ರವಾಸಿ ಮೇಲೆ ಅತ್ಯಾಚಾರ; ಅಮೇರಿಕಾ ಎಚ್ಚರಿಕೆಯ ಬೆನ್ನಲ್ಲೇ ಅಪಮಾನಕರ ಘಟನೆ

ಫ್ರೆಂಚ್ ಪ್ರವಾಸಿ ಮೇಲೆ ಅತ್ಯಾಚಾರ; ಅಮೇರಿಕಾ ಎಚ್ಚರಿಕೆಯ ಬೆನ್ನಲ್ಲೇ ಅಪಮಾನಕರ ಘಟನೆ

0

ಉದಯಪುರ: ನಗರ ತೋರಿಸುವ ನೆಪದಲ್ಲಿ ಉದ್ಯೋಗಿಯೊಬ್ಬ ಫ್ರೆಂಚ್ ಪ್ರವಾಸಿ ಮೇಲೆ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.

ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಉದಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ತನಿಖೆ ನಡೆಸುತ್ತಿದ್ದಾರೆ. ಫ್ರಾನ್ಸ್‌ನ ಯುವತಿ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯು ನಿರ್ಮಿಸುತ್ತಿರುವ ಜಾಹೀರಾತು ಚಿತ್ರೀಕರಣಕ್ಕಾಗಿ ಭಾರತಕ್ಕೆ ಬಂದಿದ್ದರು.

ಕಳೆದ ನವೆಂಬರ್‌ನಿಂದ ಒಂದು ವರ್ಷದ ವೀಸಾ ಪಡೆದು ಇಲ್ಲಿದ್ದಾರೆ. ಈ ಸಂದರ್ಭದಲ್ಲಿ, ಭಾನುವಾರ ರಾತ್ರಿ ಊಟದ ನಂತರ, ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯ ಉದ್ಯೋಗಿ ಸಿದ್ಧಾರ್ಥ್, ಯುವತಿಯನ್ನು ಉದಯಪುರ ನಗರವನ್ನು ತೋರಿಸುವುದಾಗಿ ಹೇಳಿ ತನ್ನ ಹೋಟೆಲ್ ಕೋಣೆಗೆ ಕರೆದೊಯ್ದ.

ಅಲ್ಲಿ ಅವರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇತ್ತೀಚೆಗಷ್ಟೇ ಅಮೇರಿಕವು ಭಾರತದಲ್ಲಿ ಅತ್ಯಾಚಾರದಂತಹ ಘಟನೆಗಳು ಹಚ್ಚಾಗುತ್ತಿದ್ದು, ಒಬ್ಬರೇ ಭಾರತಕ್ಕೆ ಪ್ರಯಾಣಿಸದಿರಿ ಎಂದು ತನ್ನ ದೇಶದ ನಾಗರಿಕರಿಗೆ ಎಚ್ಚರಿಕೆ ನೀಡಿತ್ತು.

You cannot copy content of this page

Exit mobile version