Friday, June 14, 2024

ಸತ್ಯ | ನ್ಯಾಯ |ಧರ್ಮ

ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಚಪ್ಪಲಿ ಹಾರ: ಸ್ವಚ್ಚತಾ ಸಿಬ್ಬಂದಿಯಿಂದ ಕೃತ್ಯ

ದೇವನಹಳ್ಳಿ: ದಸರಾ ಹಬ್ಬಕ್ಕೆ ಬಟ್ಟೆ ಮತ್ತು ಬೋನಸ್‌ ನೀಡಿಲ್ಲ ಎಂದು ಪಂಚಾಯಿತಿಯ ಸಿಬ್ಬಂದಿಯೊಬ್ಬ ಪಂಚಾಯಿತಿ ಕಟ್ಟಡಕ್ಕೆ ಚಪ್ಪಲಿ ಹಾರ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಪಂಚಾಯಿತಿ ಕಟ್ಟಡಕ್ಕೆ ಚಪ್ಪಲಿ ಹಾರ ಹಾಕಿರುವ ವಿಷಯ ತಿಳಿದಕೂಡಲೇ ಸ್ಥಳಕ್ಕೆ ದಾವಿಸಿದ ತಾಲ್ಲೂಕು ಪಂಚಾಯಿತಿ ಅಧಿಕಾರಿ ಸುನೀಲ್‌ ಕೂಡಲೇ ಚಪ್ಪಲಿ ಹಾರವನ್ನು ತೆಗಿಸಿದ್ದಾರೆ.

ಈ ಕೃತ್ಯ ಎಸಗಿರುವುದು ಆವತಿ ಗ್ರಾಮ ಪಂಚಾಯಿತಿ ಸ್ವಚ್ಚತಾ ಕೆಲಸಗಾರ ಕೃಷ್ಣಪ್ಪ ಎಂದು ತಿಳಿದು ಬಂದಿದ್ದು, ಚಪ್ಪಲಿ ಹಾರ ಹಾಕುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಹಿನ್ನಲೆ ಕೃಷ್ಣಪ್ಪನನ್ನು ಕರೆಸಿ ವಿಚಾರನೆ ನಡೆಸಿದಾಗ ಪ್ರತಿ ವರ್ಷದಂತೆ ಈ ಬಾರಿ ಬೋನಸ್‌ ಹಾಗೂ ಬಟ್ಟೆ ನೀಡಲಿಲ್ಲ, ಇದರಿಂದ ನಾನು ಬೇಸರಗೊಂಡು ಕುಡಿದ ಅಮಲಿನಲ್ಲಿ ಈ ರೀತಿ ಮಾಡಿರುವುದಾಗಿ ಹೇಳಿದ್ದಾರೆ.

ಈ ಕುರಿತು ಆವತಿ ಗ್ರಾಮ ಪಂಚಾಯಿತಿ ಪಿಡಿಒ ಶಿವರಾಜ್‌ ವಿಜಯಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಇದು ಗಂಭೀರವಲ್ಲದ ಕೃತ್ಯವೆಂದು ಪ್ರಕರಣ ದಾಖಲಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು