ನವದೆಹಲಿ : ಬೆಲೆಏರಿಕೆಯಿಂದ (Price hike ) ಕಂಗೆಟ್ಟಿರೋ ಜನರಿಗೆ ಮತ್ತೊಂದು ಬರೆಬಿದ್ದಿದೆ.ಮಾರ್ಚ್ ತಿಂಗಳ ಮೊದಲ ದಿನವೇ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಶಾಕ್ ಎದುರಾಗಿದ್ದು, ಹೋಳಿ ಹಬ್ಬದ ಅಡುಗೆಯ ತಯಾರಿಯಲ್ಲಿರುವವರಿಗೆ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಏರಿಕೆ ತುಸು ಕಹಿಯಾದ ಸುದ್ದಿಯಾಗಿದೆ.
ದೇಶದ ಸರ್ಕಾರಿ ತೈಲ ಕಂಪನಿಗಳಾದ IOC, HPCL ಮತ್ತು BPCL ಇಂದು ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ದರವನ್ನು 28 ರೂಪಾಯಿ ಹೆಚ್ಚಿಸಿವೆ.ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ವಾಣಿಜ್ಯ ಸಿಲಿಂಡರ್ ಬೆಲೆ ಸತತ ಮೂರನೇ ತಿಂಗಳು ಏರಿಕೆಯಾದಂತಾಗಿದೆ. ಜನವರಿ 1ಕ್ಕೆ 111 ರೂ ರೂಪಾಯಿ ಏರಿಕೆಯಾಗಿತ್ತು. ಫೆಬ್ರವರಿ 1: 49 ರೂಪಾಯಿ ಏರಿಕೆಯಾಗಿತ್ತು ಹಾಗೂ ಮಾರ್ಚ್ 1: 28 ರೂಪಾಯಿ ಏರಿಕೆಯಾಗಿತ್ತು .ಕೇವಲ ಮೂರೇ ತಿಂಗಳಲ್ಲಿ ಒಟ್ಟು 188 ರೂಪಾಯಿ ಹೆಚ್ಚಳವಾಗಿದೆ.
ಬೆಲೆ ಏರಿಕೆಯಿಂದಾಗಿ ದೆಹಲಿಯಲ್ಲಿ 1768.50,ಮುಂಬೈ 1720.50, ಕೋಲ್ಕತ್ತಾ 1875.50,ಚೆನ್ನೈ 1929.00 ಆಗಿದೆ. ಗೃಹ ಬಳಕೆಯ ಸಿಲಿಂಡರ್ ದರ ಸ್ಥಿರವಾಗಿದೆ.
ಹಬ್ಬದ ಹೊತ್ತಿನಲ್ಲೇ ಆಗಿರುವ ಈ ಬೆಲೆ ಏರಿಕೆಯು ಹೋಟೆಲ್ ಉದ್ಯಮಿಗಳು ಮತ್ತು ವ್ಯಾಪಾರಿಗಳ ಮೇಲೆ ಹೆಚ್ಚಿನ ಹೊರೆ ಉಂಟುಮಾಡಲಿದೆ.
