ಅಹಮದಾಬಾದ್: ಎಲ್ಲರಿಗೂ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ದೇಶಾದ್ಯಂತ ವಿಶ್ವ ದರ್ಜೆಯ ಶಾಲೆಗಳನ್ನು ನಿರ್ಮಿಸುವ ಯೋಜನೆಯನ್ನು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಸೋಮವಾರ ಪ್ರಕಟಿಸಿದ್ದಾರೆ.
ಇದಕ್ಕಾಗಿ ಅದಾನಿ ಕುಟುಂಬದಿಂದ 2 ಸಾವಿರ ಕೋಟಿ ರೂ.ಗಳ ದೇಣಿಗೆಯನ್ನು ಆರಂಭದಲ್ಲಿ ಘೋಷಿಸಲಾಗಿದೆ.
ಸಮಾಜದ ಎಲ್ಲಾ ವರ್ಗಗಳಿಗೂ ವಿಶ್ವ ದರ್ಜೆಯ ಶಿಕ್ಷಣ ಮತ್ತು ಬೋಧನಾ ಸೌಲಭ್ಯಗಳನ್ನು ಲಭ್ಯವಾಗುವಂತೆ ಮಾಡುವುದು ತಮ್ಮ ಗುರಿಯಾಗಿದೆ ಎಂದು ಅದಾನಿ ಹೇಳಿದರು.
ಅದಾನಿ ತಮ್ಮ ಪಾಲುದಾರಿಕೆಯಡಿಯಲ್ಲಿ ಮೊದಲ ಶಾಲೆ 2025-26ರ ಶೈಕ್ಷಣಿಕ ವರ್ಷದಲ್ಲಿ ಲಕ್ನೋದಲ್ಲಿ ತೆರೆಯಲಾಗುವುದು ಎಂದು ಘೋಷಿಸಿದರು.
ಅವರು ನಿರ್ಮಿಸಲಿರುವ ವಿಶ್ವ ದರ್ಜೆಯ ಶಾಲೆಗಳಲ್ಲಿ ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಶೇಕಡಾ 30ರಷ್ಟು ಸೀಟುಗಳನ್ನು ಬಡ ಮಕ್ಕಳಿಗೆ ಉಚಿತವಾಗಿ ಹಂಚಲಾಗುವುದು ಎಂದು ಅವರು ಹೇಳಿದರು. ಮೂರು ವರ್ಷಗಳ ಅವಧಿಯಲ್ಲಿ 20 ಶಾಲೆಗಳನ್ನು ತೆರೆಯಲಾಗುವುದು ಎಂದು ಅವರು ಹೇಳಿದರು.