ಹಿಂಡೆನ್‌ಬರ್ಗ್ ವರದಿಯ ಆರೋಪಗಳ ಹೊರತಾಗಿಯೂ ಕಳೆದ ಐದು ವರ್ಷಗಳ ಈಚೆಗೆ ಭಾರತೀಯ ಉದ್ಯಮಿ ಗೌತಮ್ ಅದಾನಿ ಭಾರತದ ಅಗ್ರ 10ರಲ್ಲಿ ಅತ್ಯಧಿಕ ಸಂಪತ್ತಿನ ಒಡೆಯ ಎಂಬ ಸ್ಥಾನವನ್ನು ಅಲಂಕರಿಸಿದ್ದಾರೆ. 2024 ರ ಹುರುನ್ ಇಂಡಿಯಾ ಬಿಡುಗಡೆಗೊಳಿಸಿದ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿಯನ್ನೂ ಹಿಂದಿಕ್ಕಿ ಗೌತಮ್ ಅದಾನಿ ಮುಂದಿದ್ದಾರೆ.
ಹರುನ್ ಇಂಡಿಯಾ 2024 ರ ಭಾರತದ ಶ್ರೀಮಂತರ ಪಟ್ಟಿಯಲ್ಲಿ ₹ 11.6 ಲಕ್ಷ ಕೋಟಿ ಸಂಪತ್ತನ್ನು ಹೊಂದುವ ಮೂಲಕ ಅಗ್ರ ಸ್ಥಾನವನ್ನು ಗೌತಮ್ ಅದಾನಿ ಸಮೂಹ ಪಡೆದುಕೊಂಡಿದೆ. 2020 ರಲ್ಲಿ, ಗೌತಮ್ ಅದಾನಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರು. ಕಳೆದ ಒಂದು ವರ್ಷದಲ್ಲಿ ಶ್ರೀ ಅದಾನಿ ಅವರ ಸಂಪತ್ತು ಶೇಕಡಾ 95 ರಷ್ಟು ಏರಿಕೆಯಾಗಿದೆ.
“ಹಿಂಡೆನ್‌ಬರ್ಗ್ ವರದಿ ಸೃಷ್ಟಿಸಿದ ಗಂಭೀರ ಆರೋಪಗಳ ನಂತರ ಫೀನಿಕ್ಸ್‌ನಂತೆ ಏರುತ್ತಿರುವ ಗೌತಮ್ ಅದಾನಿ (62) ಮತ್ತು ಸಮೂಹ ಈ ವರ್ಷದ ಶ್ರೀಮಂತರ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸಂಪತ್ತಿನಲ್ಲಿ 95% ಹೆಚ್ಚಳವಾಗಿದೆ. ಅವರ ಒಟ್ಟು ಮೊತ್ತವನ್ನು INR 1,161,800 Cr ಗೆ ಏರಿಕೆ ಆಗಿದೆ.
ನಂತರದ ಸ್ಥಾನದಲ್ಲಿ ₹10.14 ಲಕ್ಷ ಕೋಟಿ ಸಂಪತ್ತನ್ನು ಹೊಂದಿರುವ ಶ್ರೀ ಅಂಬಾನಿ ಅವರು ಈ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತಪಡಿಸಿದ ಸಂಪತ್ತಿನ ಲೆಕ್ಕಾಚಾರಗಳು ಜುಲೈ 31, 2024 ರಂದು ತೆಗೆದ ಸ್ನ್ಯಾಪ್‌ಶಾಟ್ ಅನ್ನು ಆಧರಿಸಿವೆ ಎಂದು ಹರುನ್ ಇಂಡಿಯಾ ಸ್ಪಷ್ಟಪಡಿಸಿದೆ. ಆ ಮೂಲಕ ದೇಶದಲ್ಲಿ ಬಿಲಿಯನೇರ್‌ಗಳ ಸಂಖ್ಯೆ ದಾಖಲೆಯ 334 ತಲುಪಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಕಳೆದ ವರ್ಷ ಭಾರತವು ಪ್ರತಿ ಐದು ದಿನಗಳಿಗೊಮ್ಮೆ ಒಬ್ಬ ಬಿಲಿಯನೇರ್ ಅನ್ನು ಸೃಷ್ಟಿಸಿದೆಕ ಎಂದು ವರದಿಯು ಹೆಚ್ಚು ಎತ್ತಿ ಹೇಳಿದೆ. 2023 ರಲ್ಲಿ, ದೇಶವು 259 ಬಿಲಿಯನೇರ್‌ಗಳನ್ನು ಹೊಂದಿತ್ತು. ಆದರೆ ಈ ವರ್ಷ ದೇಶದಲ್ಲಿ ಬಿಲಿಯನೇರ್‌ಗಳ ಸಂಖ್ಯೆ ದಾಖಲೆಯ ಏರಿಕೆಯ ಮೂಲಕ 334 ತಲುಪಿದೆ.
ಪಟ್ಟಿಯಲ್ಲಿ ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ನಂತರದ ಸ್ಥಾನದಲ್ಲಿ HCL ಟೆಕ್ನಾಲಜೀಸ್‌ನ ಶಿವ ನಾಡರ್ ಮತ್ತು ಕುಟುಂಬ ಒಟ್ಟು ₹ 3.14 ಲಕ್ಷ ಕೋಟಿ ಸಂಪತ್ತು ಹೊಂದುವ ಮೂಲಕ ಮೂರನೇ ಸ್ಥಾನದಲ್ಲಿದೆ. ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿ ಸೈರಸ್ ಎಸ್ ಪೂನಾವಾಲಾ ಒಡೆತನದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (2.89 ಲಕ್ಷ ಕೋಟಿ ರೂ.) ಮತ್ತು ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್‌ನ ದಿಲೀಪ್ ಶಾಂಘ್ವಿ (ರೂ. 2.49 ಕೋಟಿ) ಅಗ್ರ ಶ್ರೀಮಂತರ ಪಟ್ಟಿ ಅಲಂಕರಿಸಿದ್ದಾರೆ.