ಹಾಸನ: ಖಾಸಗೀ ಶಾಲಾ ಮಕ್ಕಳಂತೆ ಸರಕಾರಿ ಶಾಲಾ ಮಕ್ಕಳನ್ನು ತಯಾರು ಮಾಡಬೇಕು ಜೊತೆಗೆ ಎಸ್.ಎಸ್.ಎಲ್.ಸಿ.ಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆಯಬೇಕು ಎಂಬಗುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕರ‍್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಕರೆ ನೀಡಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಖಾಸಗಿ ಅನುದಾನಿತ ಪ್ರೌಢ ಶಾಲಾ ಮತ್ತು ಸಂಯುಕ್ತ ಪದವಿ ಪೂರ್ವ ಕಾಲೇಜು ನೌಕರರ ಸಂಘ ಇವರ ಸಹಯೋಗದಲ್ಲಿ ಶುಕ್ರವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಎಸ್.ಎಸ್.ಎಲ್.ಸಿ. ಪಲಿತಾಂಶ ಸುಧಾರಣಾ ಕಾರ್ಯಗಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಾಲೆ ಬಿಟ್ಟ ಮಕ್ಕಳಿದ್ದರೇ, ಸರಿಯಾಗಿ ಶಾಲೆಗೆ ಬಾರದ ಮಕ್ಕಳು ಕಂಡು ಬಂದರೇ ಅಂತವರ ಮನೆಗೆ ಹೋಗಿ ಅವರ ಪೋಷಕರಿಗೆ ತಿಳುವಳಿಕೆ ನೀಡುವುದು, ಮಕ್ಕಳು ಓದುವುದಕ್ಕೆ ಕಾಲಾವಕಾಶ ಮಾಡಿಕೊಡುವುದು, ಎಲ್ಲಾ ಮಕ್ಕಳಿಗೆ ಮತ್ತು ಪೋಷಕರಿಗೆ ಪತ್ರ ಬರೆದು ಅವರಿಗೆ ಒಂದು ಭರವಸೆ ಬರುವಂತೆ ಮಾಡಬೇಕು. ಮಕ್ಕಳು ಹೆಚ್ಚು ಗಣಿತ ಮತ್ತು ವಿಜ್ಞಾನದಲ್ಲಿ ಫೇಲಾಗುತ್ತಿದ್ದಾರೆ.
ಆ ವಿಷಯವನ್ನು ಶಿಕ್ಷಕರು ಹೆಚ್ಚು ಫೋಕಸ್ ಮಾಡಬೇಕೆಂದು ಕಿವಿಮಾತು ಹೇಳಿದರು. ಯಾರು ಅನುತ್ತೀಣರಾಗದೇ ನೂರಕ್ಕೆ ನೂರರಷ್ಟು ಫಲಿತಾಂಶ ಬರಬೇಕೆಂಬುದು ನಮ್ಮ ಉದ್ದೇಶವಾಗಿದೆ. ಶಿಕ್ಷಕರು ಆಯಾ ಶಾಲೆಯಲ್ಲಿ ಮಕ್ಕಳು ಯಾವ ವಿಷಯದಲ್ಲಿ ವೀಕ್ ಇದ್ದಾರೆ ಎಂಬುದನ್ನು ಗ್ರಹಿಸಬೇಕು. ಅಂತವರಿಗೆ ಸ್ಪೆಷಲ್ ತರಗತಿ ಮಾಡಬೇಕು ಎಂದು ಸಲಹೆ ನೀಡಿದರು. ಪಾಸ್ ಆಗುವುದು ಉದ್ದೇಶವಾಗದೇ ಪರ್ಸೇಂಟೇಜ್ ಬಗ್ಗೆಯು ಗಮನವಹಿಸಬೇಕು ಹಾಗೂ ಆತನ ನಾಲೇಡ್ಜ್ ಇಂಪ್ರು ಆಗಿರಬೇಕು.
ನಾಮಕವಸ್ತೆಯಾಗಿ ಪಾಸಾದರೇ ಯಾವ ಉಪಯೋಗವಿಲ್ಲ. ಪ್ರಸ್ತೂತದ ಸ್ಪರ್ದಾತ್ಮಕ ಯುಗದಲ್ಲಿ ಮಕ್ಕಳನ್ನು ಸಿದ್ಧಪಡಿಸಬೇಕಾಗಿದೆ. ಜನರಲ್ ನಾಲೇಡ್ಜ್ ಇರಬಹುದು, ಪಾಠದ ಜೊತೆಗೆ ಪುಸ್ತಕ ಓದುವುದನ್ನು ಹೇಳಿಕೊಡಬೇಕು. ಕೆಲ ಮಕ್ಕಳು ಶಾರ್ಪ್ ಆಗಿ ಇರುತ್ತಾರೆ, ಇನ್ನು ಕೆಲ ಮಕ್ಕಳು ಓದುವುದರಲ್ಲಿ ಸಲ್ಪ ಹಿಂದೆ ಇರುತ್ತಾರೆ. ಈ ವೇಳೆ ಅಂತವರಿಗೆ ರೀಡಿಂಗ್ ಮೆತೆಡ್ ತಿಳಿಸಬೇಕಾಗುತ್ತದೆ. ಓದಿದನ್ನು ರೀಕಾಲ್ ಮಾಡಿದರೇ ಹೆಚ್ಚು ತಲೆಯಲ್ಲಿ ಉಳಿಯುತ್ತದೆ. ಕೆಲ ದಿನಗಳ ಹಿಂದೆ ಶ್ರೀ ಆದಿಚುಂಚನಗಿರಿ ಮಠದಲ್ಲಿ ಮಕ್ಕಳಿಗಾಗಿ ಕಾರ್ಯಾಗಾರ ಮಾಡಲಾಗಿತ್ತು. ಶೀಘ್ರದಲ್ಲಿಯೇ ಇನೊಂದು ಕಾರ್ಯಾಗಾರ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳೇ ಸರಕಾರಿ ಶಾಲೆಗೆ ಬರುತ್ತಾರೆ. ಖಾಸಗೀ ಮಕ್ಕಳ ಜೊತೆ ಸ್ಪರ್ದೆ ಮಾಡುವಂತೆ ಸರಕಾರಿ ಶಾಲಾ ಮಕ್ಕಳನ್ನು ತಯಾರು ಮಾಡಬೇಕು ಎಂಬುದು ನಮ್ಮ ಉದ್ಧಶವಾಗಿದೆ. ನಮ್ಮ ಉದ್ದೇಶ ಸಫಲವಾಗಿ ನೂರಕ್ಕೆ ನೂರರಷ್ಟು ಫಲಿತಾಂಶ ಬರಬೇಕು ಎಂದು ಕರೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಹೆಚ್.ಎಸ್. ಚಂದ್ರಶೇಖರ್ ಮಾತನಾಡಿ, ಪ್ರಸ್ತೂತದಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶದ ಕಡೆ ಹೆಚ್ಚಿನ ಗಮನ ನೀಡಬೇಕಾಗಿದೆ. ಸ್ಥಳೀಯ ಆಡಳಿತ ಸಂಸ್ಥೆ ಮತ್ತೊಂದು ಸರಕಾರ ಎರಡರಿಂದಲೂ ಒತ್ತಡವಿದೆ. ಶಾಲಾ ಶಿಕ್ಷಕರಿಗೆ ಸೇವಾ ಸುರಕ್ಷತೆ ಕೊಡುವ ಬಗ್ಗೆ ಸರಕಾರವು ಕ್ರಮ ತೆಗೆದುಕೊಳ್ಳುತಿದೆ. ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶದ ಸಂಕ್ರಮಣ ಕಾಲವಾಗಿದೆ. ಕಡ್ಡಾಯ ಶಿಕ್ಷಣದಲ್ಲಿ ಮತ್ತು ಹಾಜರಾತಿಯಲ್ಲಿ ಎಲ್ಲಾರ ಜವಬ್ದಾರಿ ಹೆಚ್ಚು ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಣಾಧಿಕಾರಿ ಜೆ.ಬಿ. ತಮ್ಮಣ್ಣಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್. ಮಂಜೂಳಾ, ಅರಸೀಕೆರೆ ಕ್ಷೇತ್ರ ಶಿಕ್ಣಾಧಿಕಾರಿ ಹೆಚ್.ಬಿ. ಮೋಹನ್ ಕುಮಾರ್, ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ರಾಮು ಅ. ಗುಗ್ವಾಡ, ರಾಜ್ಯ ಸಹ ಕಾರ್ಯದರ್ಶಿ ದೇವರಾಜೇಗೌಡ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಕೃಷ್ಣೇಗೌಡ, ಮುಖ್ಯೋಪಾಧ್ಯಯರ ಸಂಘದ ಜಿಲ್ಲಾಧ್ಯಕ್ಷ ಬಿ.ಎಲ್. ಚಂದ್ರಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹೆಚ್.ಸಿ. ಬಸವರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಣ್ಣಪ್ಪ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಲ್. ಚಕ್ರಪಾಣಿ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಬಿ. ಸತೀಶ್, ಲಿಪಿಕ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಎನ್. ಜಯರಾಂ ಹಾಗೂ ಜಿಲ್ಲಾ ಅನುಧಾನಿತ ಶಾಲಾ ನೌಕರರ ಕಾರ್ಯಕಾರಿ ಸಮಿತಿ ಅಧ್ಯಕ್ಷ ಕೆ.ಬಿ. ಆನಂದ್, ಗೌರವಾಧ್ಯಕ್ಷ ಎಂ.ಎA. ನಟೇಶ್, ಪ್ರಧಾನ ಕಾರ್ಯದರ್ಶಿ ಎಸ್.ಬಿ. ಕಲ್ಯಾಣ್ ಕುಮಾರ್, ಖಜಾಂಚಿ ಎನ್.ಹೆಚ್. ನವೀನ್ ಕುಮಾರ್, ಉಪಾಧ್ಯಕ್ಷ ಶಿಪ್ರಕಾಶ್, ಕೆ.ಎಲ್. ಜಗದೀಶ್, ಕೆ. ದೇವರಾಜು, ಕೆ.ಎಲ್. ಹರೀಶ್, ಜಿ.ಆರ್. ಪ್ರಶಾಂತ್, ಸುಂದರೇಶ್ ಡಿ. ಉಳುವಾರೆ ಇತರರು ಉಪಸ್ಥಿತರಿದ್ದರು.