ಸಿದ್ದರಾಮಯ್ಯ ಪತ್ನಿಗೆ ನೀಡಿರುವ ನಿವೇಶನ ವಾಪಸ್ ಪಡೆಯಿರಿ: ಮುಡಾ ಅಧ್ಯಕ್ಷರಿಗೆ ಟಿ.ಜೆ.ಅಬ್ರಹಾಂ ಮನವಿ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ನೀಡಿರುವ 14 ನಿವೇಶನಗಳನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಮುಡಾ ಆಯುಕ್ತ ರಘುನಂದನ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.

ಮೈಸೂರು ಜಿಲ್ಲೆಯ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464 ರಲ್ಲಿ 2001ರಲ್ಲಿಯೇ ಮುಡಾ ನಿವೇಶನಗಳನ್ನು ರಚಿಸಿ, ನಂತರದಲ್ಲಿ ಫಲಾನುಭವಿಗಳಿಗೆ ಹಂಚಿದೆ. 2004ರಲ್ಲಿ ಸಿದ್ದರಾಮಯ್ಯ ಭಾಮೈದ ಇದನ್ನು ಖರೀದಿ ಮಾಡಿದ್ದಾರೆ. ಈ ಖರೀದಿಯೇ ಅಕ್ರಮ ಆಗಿರುವುದರಿಂದ ಅವರಿಗೆ ನಿವೇಶನ ನೀಡಲು ಬರುವುದಿಲ್ಲ. ಹೀಗಾಗಿ ಹಂಚಿಕೆ ಆಗಿರುವ ನಿವೇಶನಗಳನ್ನು ವಾಪಸ್ ಪಡೆಯಬೇಕು’ ಎಂದು ಅವರು ಕಾರಣ ನೀಡಿದ್ದಾರೆ.

ಮನವಿ ಪತ್ರ ಸಲ್ಲಿಸಿದ ನಂತರ ಪತ್ರಕರ್ತರ ಜೊತೆ ಮಾತನಾಡಿದ ಅಬ್ರಹಾಂ ‘ ಯಡಿಯೂರಪ್ಪ ಮೇಲೆ ಆರೋಪ ಮಾಡಿದ್ದಾಗ ಇದೇ ಸಿದ್ದರಾಮಯ್ಯ ನನ್ನ ಬೆನ್ನು ತಟ್ಟಿದ್ದರು. ಈಗ ಬ್ಲಾಕ್ ಮೇಲರ್ ಎಂದು ಆರೋಪಿಸುತ್ತಿದ್ದಾರೆ. ಒಬ್ಬರಿಗೆ ಒಂದು ಇನ್ನೊಬ್ಬರಿಗೆ ಇನ್ನೊಂದು ನ್ಯಾಯ ಹೇಗೆ ಎಂದು ಪ್ರಶ್ನಿಸಿದರು

Related Articles

ಇತ್ತೀಚಿನ ಸುದ್ದಿಗಳು