Sunday, June 23, 2024

ಸತ್ಯ | ನ್ಯಾಯ |ಧರ್ಮ

“ಘರ್ ಘರ್ ಪೆ ತಿರಂಗ” ಈ ಕರೆಯ ಹಿಂದೆ ಇರುವುದು ದೇಶಪ್ರೇಮವಲ್ಲ, ಅಂಬಾನಿಯ ವ್ಯಾಪಾರ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಸುಮಾರು 52 ವರ್ಷಗಳ ಕಾಲ ತಮ್ಮ RSS ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿಲ್ಲ. ಈಗಲೂ ಅವರಿಗೆ ಸಮಾನತೆ ಸ್ವಾತಂತ್ರ್ಯ ಮತ್ತು ಬ್ರಾತೃತ್ವದ ಪ್ರತೀಕವಾಗಿರುವ ತ್ರಿವರ್ಣ ಧ್ವಜಕ್ಕಿಂತ ಭಾಗವದ್ ಧ್ವಜದ ಮೇಲೆಯೇ ಪ್ರೀತಿ ಜಾಸ್ತಿ. ತಮ್ಮ ಸಂಘದ ಕಛೇರಿಯಲ್ಲೇ ತ್ರಿವರ್ಣ ಧ್ವಜವನ್ನು ಹಾರಿಸದೇ ಇರುವವರು ಪ್ರತೀ ಮನೆ ಮನೆಯ ಮೇಲು ತ್ರಿವರ್ಣ ಧ್ವಜ ಹಾರಿಸಬೇಕೆಂದು ಕರೆ ಕೊಡುತ್ತಾರೆ ಎಂದರೆ ಖಂಡಿತ ಅದರ ಹಿಂದೆ ತಮ್ಮ ಗುಜರಾತಿ ಉದ್ಯಮಿಗಳನ್ನು ಪೋಷಿಸುವ ಸ್ವ ಹಿತಾಸಕ್ತಿ ಇದೆಯೇ ಹೊರತು ದೇಶಪ್ರೇಮವಲ್ಲ ಎನ್ನುವ ಸತ್ಯವನ್ನು ನಾವುಗಳು ಈಗಲಾದರೂ ಅರ್ಥ ಮಾಡಿಕೊಳ್ಳಬೇಕು..

75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶದ ಪ್ರತೀ ಮನೆಯ ಮೇಲೂ ರಾಷ್ಟ್ರಧ್ವಜ ವನ್ನು ಹಾರಿಸುವ ಮೂಲಕ ಆಚರಿಸಬೇಕೆಂದು RSS ಮತ್ತು ಬಿಜೆಪಿ ಸರ್ಕಾರ ಕರೆಕೊಟ್ಟಿದೆ. ಪ್ರತೀ ಮನೆಯ ಮೇಲೂ ರಾಷ್ಟ್ರಧ್ವಜವನ್ನು ಹಾರಿಸುವುದರಿಂದ ಸಮಸ್ಯೆ ಏನು, ಇದು ಪ್ರತಿಯೊಬ್ಬ ಪ್ರಜೆಯಲ್ಲೂ ಮೂಡುವ ಪ್ರಶ್ನೆ. ಹೌದು ರಾಷ್ಟ್ರಧ್ವಜ ಹಾರಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಆದರೆ ಈ ನಿರ್ದಾರ ಈಗ ಯಾಕೆ? “2002 flag code of India” ನಿಯಮವನ್ನು ತಿದ್ದುಪಡಿ ಮಾಡಿದ್ದು ಏಕೆ? ಭಾರತದ ಪ್ರತೀ ಮನೆಯ ಮೇಲೂ ತ್ರಿವರ್ಣ ಧ್ವಜವನ್ನು ಹಾರಿಸುವುದರ ಹಿಂದಿನ ಮರ್ಮವೇನು ಎನ್ನುವುದನ್ನು ತಿಳಿದುಕೊಳ್ಳಬೇಕಲ್ಲವೇ!!!

ತ್ರಿವರ್ಣ ಧ್ವಜಕ್ಕೆ ತನ್ನದೇ ಆದ ಗೌರವವಿದೆ. ತ್ರಿವರ್ಣ ಧ್ವಜವನ್ನು ಹಾರಿಸಲು ಅದಕ್ಕೆ ಆದ ನಿಯಮಗಳಿವೆ. ಭಾರತ ಸ್ವತಂತ್ರ ದೇಶವಾದಾಗಿನಿಂದಲೂ ಖಾದಿ ಬಟ್ಟೆಯಿಂದ ತಯಾರಿಸಲಾದ ಧ್ವಜವನ್ನು ಭಾರತದಾದ್ಯಂತ ಹಾರಿಸಲಾಗುತ್ತಿತ್ತು. ಇನ್ನು ಖಾದಿಯ ಬಗ್ಗೆ ಹೇಳುವುದಾದರೆ ಸ್ವದೇಶಿ ಚಳುವಳಿಯಲ್ಲಿ ಖಾದಿಯು ಮುಖ್ಯ ಪಾತ್ರವನ್ನು ವಹಿಸಿತ್ತು. ಬ್ರಿಟೀಷರು ನಮ್ಮದೇ ಹತ್ತಿ/ರೇಷ್ಮೆ/ವೂನನ್ನು ಇಲ್ಲಿಂದ ರಫ್ತು ಮಾಡಿ ಅದರಿಂದ ಬಟ್ಟೆ ತಯಾರಿಸಿ ಭಾರತಕ್ಕೆ ಆಮದು ಮಾಡಿಕೊಂಡು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದರು. ಹಾಗೂ ಭಾರತದ ಎಲ್ಲಾ ಉತ್ಪನ್ನ ಮತ್ತು ವ್ಯವಹಾರಗಳ ಮೇಲೆ ಏಕಸ್ವಾಮ್ಯವನ್ನು ಸಾಧಿಸುವ ಗುರಿಹೊಂದಿದ್ದ ಬ್ರಿಟಿಷರಿಗೆ ಸ್ವದೇಶಿ ಚಳುವಳಿ ಬಹುದೊಡ್ಡ ಪೆಟ್ಟು ಕೊಟ್ಟಿತು. ಅಂದು ಗಾಂಧಿಯ ಕರೆಗೆ ಕಿವಿಗೊಟ್ಟ ಭಾರತದ ಜನತೆ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ ತಮ್ಮ ತಮ್ಮ ಬಟ್ಟೆಗಳನ್ನು ತಾವೇ ನೇಯ್ದುಕೊಳ್ಳಲು ಶುರು ಮಾಡಿದರು. ಹಾಗಾಗಿ ಖಾದಿಯೂ ಕೂಡ ಸ್ವಾತಂತ್ರ್ಯ ಸಂಗ್ರಾಮದ ಭಾಗವಾಗಿತ್ತು.

ಇಡೀ ದೇಶಕ್ಕೆ ಸ್ವಾತಂತ್ರ್ಯ ದಿನಾಚರಣೆಯಂದು ಮತ್ತು ಧ್ವಜಾರೋಹಣ ಆಗುವ ಎಲ್ಲಾ ರಾಷ್ಟ್ರೀಯ ಹಬ್ಬಗಳಲ್ಲಿ ಬಳಸಲಾಗುವ ರಾಷ್ಟ್ರಧ್ವಜವನ್ನು “ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಸಂಯುಕ್ತ ಸಂಘ” ವು ತಯಾರಿಸುತ್ತದೆ. ಈ ಸಂಸ್ಥೆಯು ಕರ್ನಾಟಕ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮತ್ತು ಈ ಸಂಸ್ಥೆಯಲ್ಲಿ ಟೇಲರ್, ಹೆಲ್ಪರ್, ಮ್ಯಾನೇಜರ್ ಹಾಗೂ ಇತರೆ ಎಲ್ಲರನ್ನು ಸೇರಿಸಿ ಸುಮಾರು 1300 ನೌಕರರು ಇದನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಹಾಗೂ ಇಲ್ಲಿ ನೌಕರರಿಗೆ ಸಿಗುವ ಸಂಬಳ ತುಂಬಾ ಕಡಿಮೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇದ್ದಾರೆ. ಕಡಿಮೆ ಸಂಬಳ ಇದ್ದರೂ ರಾಷ್ಟ್ರಧ್ವಜವನ್ನು ನೇಯುವ/ಹೊಲೆಯುವ ಅವಕಾಶವನ್ನು ತಮ್ಮ ಸೌಭಾಗ್ಯವೆಂದು ತಿಳಿದು ಸೇವೆ ಸಲ್ಲಿಸುತ್ತಿದ್ದಾರೆ. ಪ್ರತೀ ವರ್ಷವು ಸುಮಾರು 5 ಕೋಟಿಯಷ್ಟು ವ್ಯಾಪಾರ ನಡೆಯುತ್ತದೆ. ಇಡೀ ದೇಶಕ್ಕೆ ತ್ರಿವರ್ಣ ಧ್ವಜ ಸರಬರಾಜು ಆಗೋದು ಕರ್ನಾಟಕದ ಹುಬ್ಬಳ್ಳಿಯ ಬಳಿಯಿರುವ ಹೇಂಗೆರಿ ಎನ್ನುವ ಗ್ರಾಮದಲ್ಲಿರುವ ಈ KKGSS ಸಂಸ್ಥೆಯಿಂದ. ಸರ್ಕಾರ ತಿದ್ದುಪಡಿ ಮಾಡಿದ ಹೊಸ ಕಾಯ್ದೆಯಿಂದ ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಸಂಯುಕ್ತ ಸಂಘಕ್ಕೆ ಸುಮಾರು ನಾಲ್ಕೈದು ಕೋಟಿಯ ನಷ್ಟವಷ್ಟೇ ಅಲ್ಲ ಆ ಸಂಸ್ಥೆಯನ್ನು ನಂಬಿ ಜೀವನ ನಡೆಸುತ್ತಿದ್ದ 1300 ಜನರ ಜೀವನ ಅಕ್ಷರಶಃ ಬೀದಿಗೆ ಬಂದು ನಿಲ್ಲಲಿದೆ. ಕಡಿಮೆ ಸಂಬಳವಾದರು ನಾವು ಮಾಡುತ್ತಿರುವುದು ಹೆಮ್ಮೆಯ ಕೆಲಸ ಎಂದು ಆ ಕೆಲಸದ ಮೇಲೆಯೇ ಅವಲಂಬಿತರಾಗಿ ಬೇರೆ ಯಾವ ಕೆಲಸವೂ ಗೊತ್ತಿಲ್ಲದ ಆ ನೇಕಾರರು ಮತ್ತು ನೌಕರರು ನಿರುದ್ಯೋಗಿಗಳಾಗಲಿದ್ದಾರೆ.
ಈಗಾಗಲೇ KKGSS ಸಂಸ್ಥೆಯು ಸರ್ಕಾರದ ಈ ನಡೆಯನ್ನು ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನ ಬಳಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಇವರ ಸತ್ಯಾಗ್ರಹ ಜನತೆಗೆ ತಿಳಿಯುವ ಮುಂಚೆಯೇ ಇದನ್ನು ಹತ್ತಿಕ್ಕುವ ಎಲ್ಲಾ ಪ್ರಯತ್ನವೂ ನಡೆಯಿತು, ಕೊನೆಗೆ ಮುಖ್ಯ ನ್ಯಾಯಾಲಯ ಕೂಡಲೇ ಈ ಸತ್ಯಾಗ್ರಹವನ್ನು ನಿಲ್ಲಿಸಬೇಕು ಎಂದು ಆದೇಶ ಹೊರಡಿಸಿತು, ಮತ್ತು ಅನೇಕರನ್ನು ರೂಲ್ಸ್ ವಯಲೇಶನ್ ಮಾಡಿದ್ದಾರೆಂದು ಅರೆಸ್ಟ್ ಕೂಡ ಮಾಡಲಾಗಿದೆ.

ಖಾದಿಯಿಂದ ತಯಾರಿಸಲಾದ ರಾಷ್ಟ್ರಧ್ವಜವನ್ನು ಮಾತ್ರ ಹಾರಿಸಬೇಕು ಎನ್ನುವ ನಿಯಮವಿರುವ flag code ಕಾಯ್ದೆಯನ್ನು ತಿದ್ದುಪಡಿ ಮಾಡಿ ಈಗ Polyester ಬಟ್ಟೆಗಳಿಂದ ತಯಾರಿಸಲಾದ ತ್ರಿವರ್ಣ ಧ್ವಜವನ್ನು ಸಹ ಹಾರಿಸಬಹುದು ಎನ್ನುವ ಹೊಸ ತಿದ್ದುಪಡಿಯೊಂದನ್ನು ತುರ್ತಾಗಿ ಜಾರಿಗೊಳಿಸಲಾಗಿದೆ. ಖಾದಿ ಬಟ್ಟೆಗಿಂತ ಅತೀ ಕಡಿಮೆ ದರದಲ್ಲಿ ಲಭ್ಯವಿರುವ ಪಾಲಿಸ್ಟರ್ ನ ಮುಂದೆ ಖಾದಿ ತನ್ನ ಬೇಡಿಕೆಯನ್ನು ಕಳೆದುಕೊಂಡಿದೆ. ಪ್ರತೀ ಬಾರಿ 5 ಕೋಟಿಯಷ್ಟು ವ್ಯಾಪಾರ ಮಾಡುತ್ತಿದ್ದ KKGSS ಸಂಸ್ಥೆಗೆ ಈ ವರ್ಷ ಕೇವಲ ಒಂದು ಕೋಟಿಯಷ್ಟು ವ್ಯಾಪಾರ ಆಗಿರುವುದಿಲ್ಲ. ಪ್ರತೀ ಮನೆಯ ಮೇಲೂ ತ್ರಿವರ್ಣ ಧ್ವಜ ಹಾರಿಸಬೇಕೆಂದು ಕರೆಕೊಟ್ಟ ಮೇಲೆ KKGS ನ ವ್ಯಾಪಾರ ನೂರಲ್ಲ ಸಾವಿರಾರು ಪಟ್ಟು ಹೆಚ್ಚಾಗಬೇಕಿತ್ತು ಆದರೆ ವ್ಯಾಪಾರ ಹಿಂದಿನದ್ದಕ್ಕಿಂತ 90% ಕಡಿಮೆ ಆಗಿದ್ದು ಹೇಗೆ? ಈಗ ಆ ವ್ಯಾಪಾರ ಯಾರ ಪಾಲಾಯಿತು?

ಆಶ್ಚರ್ಯವೇನು ಬೇಡ, ಈ ದೇಶದಲ್ಲಿ ಅತೀ ಹೆಚ್ಚು Polyester (ಪಾಲಿಸ್ಟರ್) ಬಟ್ಟೆಯನ್ನು ತಯಾರು ಮಾಡುವವರು ಅಂಬಾನಿ ಒಡೆತನದ ರಿಲಿಯೆನ್ಸ್ ಟೆಕ್ಸ್ ಟೈಲ್ ಕಂಪನಿ. “2002 flag code of India” ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದು ಕೂಡ ಅಂಬಾನಿಯ ಬೊಕ್ಕಸ ತುಂಬಿಸುವುದಕ್ಕಾಗಿ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಜಿಯೋ ಬಂದು BSNL ನನ್ನ ನುಂಗಿ ಹಾಕಿದ ಹಾಗೆ, ಇಲ್ಲಿ ಕೂಡ ರಿಲಿಯೆನ್ಸ್ ಟೆಕ್ಸ್ ಟೈಲ್ ಗೆ ಲಾಭ ಮಾಡುವ ಸಲುವಾಗಿ ಹೊಸ ಕಾಯ್ದೆಯನ್ನು ತಿದ್ದುಪಡಿ ಗೊಳಿಸಿ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವನ್ನು ಮಕಾಡೆ ಮಲಗಿಸುವ ಕೆಲಸ ಆಗಿದೆ.
ಈಗ ಗೊತ್ತಾಯ್ತಾ ‘ಘರ್ ಘರ್ ಪೆ ತಿರಂಗಾ’ ದ ಹಿಂದಿರುವ ಉದ್ದೇಶ ಏನು ಅಂತ!..

ಇದೇ RSS ಸಂಘಟನೆ (ಬಿಜೆಪಿ RSS ಗೆ ಹೊರತಾದದ್ದಲ್ಲ)
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಸುಮಾರು 52 ವರ್ಷಗಳ ಕಾಲ ತಮ್ಮ RSS ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿಲ್ಲ. ಈಗಲೂ ಅವರಿಗೆ ಸಮಾನತೆ ಸ್ವಾತಂತ್ರ್ಯ ಮತ್ತು ಬ್ರಾತೃತ್ವದ ಪ್ರತೀಕವಾಗಿರುವ ತ್ರಿವರ್ಣ ಧ್ವಜಕ್ಕಿಂತ ಭಾಗವದ್ ಧ್ವಜದ ಮೇಲೆಯೇ ಪ್ರೀತಿ ಜಾಸ್ತಿ. ತಮ್ಮ ಸಂಘದ ಕಛೇರಿಯಲ್ಲೇ ತ್ರಿವರ್ಣ ಧ್ವಜವನ್ನು ಹಾರಿಸದೇ ಇರುವವರು ಪ್ರತೀ ಮನೆ ಮನೆಯ ಮೇಲು ತ್ರಿವರ್ಣ ಧ್ವಜ ಹಾರಿಸಬೇಕೆಂದು ಕರೆ ಕೊಡುತ್ತಾರೆ ಎಂದರೆ ಖಂಡಿತ ಅದರ ಹಿಂದೆ ತಮ್ಮ ಗುಜರಾತಿ ಉದ್ಯಮಿಗಳನ್ನು ಪೋಷಿಸುವ ಸ್ವ ಹಿತಾಸಕ್ತಿ ಇದೆಯೇ ಹೊರತು ದೇಶಪ್ರೇಮವಲ್ಲ ಎನ್ನುವ ಸತ್ಯವನ್ನು ನಾವುಗಳು ಈಗಲಾದರೂ ಅರ್ಥ ಮಾಡಿಕೊಳ್ಳಬೇಕು..

<strong>ರುದ್ರು ಪುನೀತ್ .ಆರ್.ಸಿ</strong>
ರುದ್ರು ಪುನೀತ್ .ಆರ್.ಸಿ

ಸಾಮಾಜಿಕ ಚಿಂತಕರು

Related Articles

ಇತ್ತೀಚಿನ ಸುದ್ದಿಗಳು