Friday, April 26, 2024

ಸತ್ಯ | ನ್ಯಾಯ |ಧರ್ಮ

ವಿಷಕಾರಿ ಅನಿಲ ಸೋರಿಕೆ: 121 ಮಹಿಳೆಯರು ಅಸ್ವಸ್ಥ‌

ವಿಶಾಖಪಟ್ಟಣಂ: ಅನಕಪಲ್ಲಿ ಜಿಲ್ಲೆಯ ಬ್ರಾಂಡಿಕ್ಸ್ ಎಸ್‌.ಇ.ಜೆಡ್‌ ನಲ್ಲಿರುವ ಸೀಡ್ಸ್ ಕಂಪನಿಯನ್ನು ಮುಚ್ಚಲು ಆಂದ್ರ-ರಾಜ್ಯ ಸರ್ಕಾರ ಆದೇಶಿಸಿದ್ದು, ಮಂಗಳವಾರ ರಾತ್ರಿ ವಿಷಕಾರಿ ಅನಿಲ ಸೋರಿಕೆ ನಂತರ 121 ಮಹಿಳೆಯರು ಅಸ್ವಸ್ಥರಾಗಿದ್ದಾರೆ. ಈ ವಿಚಾರವಾಗಿ ಮುಂದಿನ ಆದೇಶದವರೆಗೆ ಕಂಪನಿಯನ್ನು ಮುಚ್ಚುವಂತೆ ಸೂಚಿಸಲಾಗಿದೆ.
ಅನಕಪಲ್ಲಿಯಲ್ಲಿರುವ ಎನ್‌.ಟಿ.ಆರ್‌ ಆಸ್ಪತ್ರೆಯಲ್ಲಿ ಮಹಿಳಾ ಕಾರ್ಮಿಕರು ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ಭೇಟಿ ನೀಡಿದ ಕೈಗಾರಿಕಾ ಸಚಿವ ಗುಡಿವಾಡ ಅಮರನಾಥ್‌, ಡಿಎಂಎಚ್‌ಒ ಹೇಮಂತ್‌ ಹಾಗೂ ಆಸ್ಪತ್ರೆ ಅಧೀಕ್ಷಕ ಶ್ರವಣಕುಮಾರ್‌ ಅವರನ್ನು ಭೇಟಿ ಮಾಡಿ ಕಾರ್ಮಿಕರ ಸ್ಥಿತಿಗತಿ ವಿಚಾರಿಸಿದರು. 
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೀಡ್ಸ್ ಕಂಪನಿಯಲ್ಲಿ ಮಂಗಳವಾರ ಸಂಜೆ 6.45 ರಿಂದ 7.30 ರವರೆಗೆ 121 ಮಹಿಳಾ ಕಾರ್ಮಿಕರಿಗೆ ವಾಂತಿ, ವಾಕರಿಕೆ ಕಾಣಿಸಿಕೊಂಡಿದೆ. 

ಎರಡು ತಿಂಗಳ ಹಿಂದೆ ಇದೇ ಘಟಕದಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಮತ್ತೆ ಕಾರ್ಮಿಕರಲ್ಲಿ ಇದೇ ರೋಗಲಕ್ಷಣಗಳು ವರದಿಯಾಗಿವೆ. ತಕ್ಷಣ ಅವರನ್ನು ಅನಕಪಲ್ಲಿಯ ಐದು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು. ನಂತರ ಸರ್ಕಾರವು ಕಾರಣವನ್ನು ಕಂಡುಹಿಡಿಯಲು ಜಂಟಿ ಸಮಿತಿಯನ್ನು ರಚಿಸಿತ್ತು. ಇದಕ್ಕೆ ಹವಾನಿಯಂತ್ರಣ ಅನಿಲ ಸೋರಿಕೆಯೇ ಕಾರಣ ಎಂದು ಶಂಕಿಸಲಾಗಿದೆ ಎಂದು ಹೇಳಿದರು. 
ಘಟನೆ ಕುರಿತು ಮಾತನಾಡಿದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ. ವೈದ್ಯರ ಪ್ರಕಾರ ಎಲ್ಲಾ 121 ಕಾರ್ಮಿಕರ ಸ್ಥಿತಿ ಈಗ ಸ್ಥಿರವಾಗಿದೆ. ಎರಡನೇ ಬಾರಿಗೆ ಇಂತಹ ಘಟನೆ ನಡೆದಿರುವುದು ದುರದೃಷ್ಟಕರ ಎಂದು ಹೇಳಿದರು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅವರು, ಸತ್ಯಾಂಶ ಹೊರಬೀಳುವವರೆಗೆ ಸ್ಥಾವರವನ್ನು ಮುಚ್ಚುವಂತೆ ಆದೇಶಿಸಿದರು.ಈ ಘಟನೆಗೆ ಕಂಪನಿಯೇ ಹೊಣೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
 

Related Articles

ಇತ್ತೀಚಿನ ಸುದ್ದಿಗಳು