Saturday, June 15, 2024

ಸತ್ಯ | ನ್ಯಾಯ |ಧರ್ಮ

ʼನಾಚಿಗೇಡುʼ: ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಹೇಳಿಕೆಗೆ ಟಿಎಂಸಿ ತರಾಟೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬುಧವಾರ, ಡಿಸೆಂಬರ್ 6 ರಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅವರು ಮಾಡಿರುವ ಅವಹೇಳನಕಾರಿ ಹೇಳಿಕೆಯ ವಿರುದ್ಧ ತೃಣಮೂಲ ಕಾಂಗ್ರೆಸ್ ಸಚಿವರನ್ನು ತರಾಟೆಗೆ ತೆಗೆದುಕೊಂಡಿದೆ.

ಸಿಂಗ್ ಹೇಳಿದ್ದೇನು?

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಕೋಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬ್ಯಾನರ್ಜಿ ನೃತ್ಯದ ಬಗ್ಗೆ ಸಿಂಗ್ ಪ್ರತಿಕ್ರಿಯಿಸಿದ್ದ ಗಿರಿರಾಜ್‌ ಸಿಂಗ್, “ಜಶ್ನ್ ಮನ ರಹೀ ಹೈ, ತುಮ್ಕೆ ಲಗಾ ರಹೀ ಹೈ, ಯೇ ಉಚಿತ್ ನಹೀ ಹೈ. (ಅವಳು ಸಂಭ್ರಮಿಸುತ್ತಿದ್ದಾಳೆ, ಕುಣಿಯುತ್ತಿದ್ದಾಳೆ, ಇದು ಸರಿಯಲ್ಲ) ಎಂದು ಏಕವಚನದಲ್ಲಿ ಸಂಬೋಧಿಸಿದ್ದರು.

ಚಲನಚಿತ್ರೋತ್ಸವದ ಸಂದರ್ಭದಲ್ಲಿ ಬ್ಯಾನರ್ಜಿ ಮಾಡಿರುವ ನೃತ್ಯಕ್ಕೆ, “ತೋ ಫೆಸ್ಟಿವಲ್ ಮೇ ತುಮ್ಕೆ ಲಗಾನಾ ಕೌನ್ ಜರೂರಿ ಹೈ? (ಉತ್ಸವದಲ್ಲಿ ನೃತ್ಯ ಮಾಡುವ ಅಗತ್ಯವಿದೆಯೇ?)” ಎಂದು ಕೇಳಿದ್ದರು.

KIFF ನ 29 ನೇ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರೊಂದಿಗೆ ಬ್ಯಾನರ್ಜಿ ನೃತ್ಯ ಮಾಡಿರುವ ವಿಡಿಯೋ ವೈರಲ್‌ ಆಗಿತ್ತು. ಈ ಕಾರ್ಯಕ್ರಮದಲ್ಲಿ ಸೋನಾಕ್ಷಿ ಸಿನ್ಹಾ, ಮಹೇಶ್ ಭಟ್, ಅನಿಲ್ ಕಪೂರ್ ಮತ್ತು ಶತ್ರುಘ್ನ ಸಿನ್ಹಾ ಮುಂತಾದ ಹಲವಾರು ತಾರೆಯರು ಭಾಗವಹಿಸಿದ್ದರು.

‘ಸ್ತ್ರೀದ್ವೇಷ ಹೇಳಿಕೆ’: ಟಿಎಂಸಿಯಿಂದ ಸಚಿವರ ತರಾಟೆ

 ಮಹಿಳಾ ವಿರೋಧಿ ಹೇಳಿಕೆಯನ್ನು ನೀಡಿರುವ ಕೇಂದ್ರ ಸಚಿವರನ್ನು ತರಾಟೆಗೆ ತೆಗೆದುಕೊಂಡಿರುವ ಟಿಎಂಸಿ ತನ್ನ X ನಲ್ಲಿ ಸಿಂಗ್‌ ವಿರುದ್ಧ ವಾಗ್ದಾಳಿ ನಡೆಸಿದೆ. ಸಿಂಗ್‌ ಅವರ ಕಾಮೆಂಟ್‌ಗಳು ಮತ್ತು ಸನ್ನೆಗಳು “ಅಸಭ್ಯ” ಎಂದು ಆರೋಪಿಸಿದೆ.

“ಬಿಜೆಪಿ ನಾಯಕರಿಗೆ ತಮ್ಮ ಅಧಿಕಾರಕ್ಕೆ ಸವಾಲೆಸೆಯುವ ಅಧಿಕಾರದಲ್ಲಿರುವ ಮಹಿಳೆಯನ್ನು ಅರಗಿಸಿಕೊಳ್ಳುವುದು ನಂಬಲಾಗದಷ್ಟು ಕಷ್ಟಕರವಾಗಿದೆ ಎಂಬುದು ಸ್ಪಷ್ಟ. ಲಿಂಗ ತಾರತಮ್ಯ ಪೂರ್ವಾಗ್ರಹದಲ್ಲಿ ಬಿದ್ದಿರುವ ಅವರ ಪುರಾತನ ಮನಸ್ಥಿತಿಯನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತಿದ್ದಾರೆ” ಎಂದು ಟೀಕಿಸಲಾಗಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಂಗ್, ತಮ್ಮ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ, ಟಿಎಂಸಿ ಈ ವಿಷಯದ ಬಗ್ಗೆ “ಗೊಂದಲ ಸೃಷ್ಟಿಸಲು” ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

“ಭ್ರಷ್ಟಾಚಾರದಿಂದ ಬಳಲುತ್ತಿರುವ ಮತ್ತು ಬಡವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ರಾಜ್ಯದಲ್ಲಿ ಮಮತಾ ದೀದಿ, ನೀವು ‘ಜಶ್ನ್’ ಮಾಡುತ್ತಿದ್ದೀರಿ, ‘ಜಶ್ನ್’ ಎಂದು ಹೇಳುವುದು ‘ತುಮ್ಕಾ’ ಎಂದು ಹೇಳಿದಂತೆಯೇ?” ಸಿಂಗ್ ANI ಗೆ ತಿಳಿಸಿದ್ದಾರೆ.

“ಟಿಎಂಸಿಯ ಜನರು ಜನರಲ್ಲಿ ಗೊಂದಲ ಮೂಡಿಸಲು ಈ ವಿಷಯವನ್ನು ಎತ್ತುತ್ತಿದೆ. ಬಡತನ, ನಿರುದ್ಯೋಗ ಮತ್ತು ಭ್ರಷ್ಟಾಚಾರವಿದೆ ಎಂದು ಹೇಳುವುದು ನನ್ನ ಹಕ್ಕು. ಚಲನಚಿತ್ರೋತ್ಸವದಲ್ಲಿ ಸಿಎಂ ಹಾಜರಿದ್ದರು” ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

ಈ ಹೇಳಿಕೆಯನ್ನು ಖಂಡಿಸಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ,

Related Articles

ಇತ್ತೀಚಿನ ಸುದ್ದಿಗಳು