Sunday, July 27, 2025

ಸತ್ಯ | ನ್ಯಾಯ |ಧರ್ಮ

ರೀಲ್ಸ್ ಮಾಡುವಾಗ ಕಾಲು ಜಾರಿ ಬಿದ್ದು ಯುವತಿ ಸಾವು

ಮುಂಬೈ: ಮುಂಬೈ ಮೂಲದ ಇನ್‌ಫ್ಲೂಯೆನ್ಸರ್ ಪ್ರಭಾವಿ ಅನ್ವಿ ಕಾಮ್ದಾರ್ (26) ಸ್ನೇಹಿತರೊಂದಿಗೆ ರಾಯಗಡದ ಕುಂಭೆ ಜಲಪಾತಕ್ಕೆ ತೆರಳಿದ್ದರು. ಅಲ್ಲಿ ರೀಲ್‌ಗಳನ್ನು ಮಾಡಲೆಂದು ಕಣಿವೆಯ ಅಂಚಿನಲ್ಲಿ ನಿಂತಿದ್ದ ಸಂದರ್ಭ 300 ಅಡಿ ಆಳದ ಕಣಿವೆಗೆ ಬಿದ್ದಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ 6 ಗಂಟೆಗಳ ಕಾಲ ಶ್ರಮಿಸಿ ಅನ್ವಿಯನ್ನು ರಕ್ಷಿಸಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ ಕೆಲವೇ ಹೊತ್ತಿನಲ್ಲಿ ಮೃತಪಟ್ಟಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಅನ್ವಿಗೆ 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.

ಮಾನ್‌ ಗಾಂವ ಪೊಲೀಸ್ ಠಾಣೆಯ ಅಧಿಕಾರಿಗಳ ಪ್ರಕಾರ, ಮುಂಬೈನ ಮುಲುಂಡ್ ಪ್ರದೇಶದ ನಿವಾಸಿ ಅನ್ವಿ ಕಾಮ್ದಾರ್ ಮಳೆಯ ನಡುವೆ ತನ್ನ ಸ್ನೇಹಿತರೊಂದಿಗೆ ವಿಹಾರಕ್ಕೆಂದು ಸುಂದರವಾದ ಜಲಪಾತಕ್ಕೆ ಬಂದಿದ್ದರು.

ಅನ್ವಿ ವೃತ್ತಿಯಿಂದ ಲೆಕ್ಕ ಪರಿಶೋಧಕಿಯಾಗಿ ಗುರುತಿಸಿಕೊಂಡಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page