ಮುಂಬೈ: ಮುಂಬೈ ಮೂಲದ ಇನ್‌ಫ್ಲೂಯೆನ್ಸರ್ ಪ್ರಭಾವಿ ಅನ್ವಿ ಕಾಮ್ದಾರ್ (26) ಸ್ನೇಹಿತರೊಂದಿಗೆ ರಾಯಗಡದ ಕುಂಭೆ ಜಲಪಾತಕ್ಕೆ ತೆರಳಿದ್ದರು. ಅಲ್ಲಿ ರೀಲ್‌ಗಳನ್ನು ಮಾಡಲೆಂದು ಕಣಿವೆಯ ಅಂಚಿನಲ್ಲಿ ನಿಂತಿದ್ದ ಸಂದರ್ಭ 300 ಅಡಿ ಆಳದ ಕಣಿವೆಗೆ ಬಿದ್ದಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ 6 ಗಂಟೆಗಳ ಕಾಲ ಶ್ರಮಿಸಿ ಅನ್ವಿಯನ್ನು ರಕ್ಷಿಸಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ ಕೆಲವೇ ಹೊತ್ತಿನಲ್ಲಿ ಮೃತಪಟ್ಟಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಅನ್ವಿಗೆ 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.
ಮಾನ್ ಗಾಂವ ಪೊಲೀಸ್ ಠಾಣೆಯ ಅಧಿಕಾರಿಗಳ ಪ್ರಕಾರ, ಮುಂಬೈನ ಮುಲುಂಡ್ ಪ್ರದೇಶದ ನಿವಾಸಿ ಅನ್ವಿ ಕಾಮ್ದಾರ್ ಮಳೆಯ ನಡುವೆ ತನ್ನ ಸ್ನೇಹಿತರೊಂದಿಗೆ ವಿಹಾರಕ್ಕೆಂದು ಸುಂದರವಾದ ಜಲಪಾತಕ್ಕೆ ಬಂದಿದ್ದರು.
ಅನ್ವಿ ವೃತ್ತಿಯಿಂದ ಲೆಕ್ಕ ಪರಿಶೋಧಕಿಯಾಗಿ ಗುರುತಿಸಿಕೊಂಡಿದ್ದರು.