Saturday, April 27, 2024

ಸತ್ಯ | ನ್ಯಾಯ |ಧರ್ಮ

ಜೂನ್ 4ರಿಂದ ‘ಗೂಗಲ್ ಪೇ’ ವಹಿವಾಟು ಬಂದ್!

ಅತ್ಯಂತ ಜನಪ್ರಿಯ ಆನ್‌ಲೈನ್ ಪೇಮೆಂಟ್ ಅಪ್ಲಿಕೇಶನ್‌ ‘Google Pay’ ಪ್ರಸ್ತುತ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಆದಾಗ್ಯೂ, ಜೂನ್ 4, 2024ರಿಂದ ಅಮೇರಿಕಾದಲ್ಲಿ Google Pay ಸೇವೆಗಳನ್ನು ನಿಲ್ಲಿಸಲು Google ತಯಾರಿ ನಡೆಸುತ್ತಿದೆ. ಅಮೆರಿಕದಲ್ಲಿ ಹೆಚ್ಚು ಮಂದಿ ಗೂಗಲ್ ಪೇ ಬದಲು ‘ಗೂಗಲ್ ವಾಲೆಟ್’ ಬಳಸುತ್ತಿರುವುದರಿಂದ ಕಂಪನಿ ಈ ನಿರ್ಧಾರ ಕೈಗೊಂಡಿದೆ.

ಪೇಮೆಂಟ್ ಕಾರ್ಡ್‌ಗಳನ್ನು Google Wallet ಮೂಲಕ ಸೇರಿಸಬಹುದು. ಇದನ್ನು ಮಾಡಿದ ನಂತರ, ಶಾಪಿಂಗ್ ಮಾಡುವಾಗ ಅಥವಾ ಆನ್‌ಲೈನ್ ಪಾವತಿಗಳನ್ನು ಮಾಡುವಾಗ, ಟ್ಯಾಪ್ ಎಂಡ್ ಪೇ ವಿಧಾನದಲ್ಲಿ ಸುಲಭವಾಗಿ ಪೇಮೆಂಟ್‌ ಮಾಡಬಹುದು.

ಆನ್‌ಲೈನ್ ಪಾವತಿಗೆ ಮಾತ್ರವಲ್ಲ, ಟ್ರಾನ್ಸಿಟ್ ಕಾರ್ಡ್‌ಗಳು, ಡ್ರೈವಿಂಗ್ ಲೈಸೆನ್ಸ್ ಮತ್ತು ಇತರ ಐಡಿ ಕಾರ್ಡ್‌ಗಳಂತಹ ದಾಖಲೆಗಳನ್ನು ಸಹ ಇದರಲ್ಲಿ ಸಂಗ್ರಹಿಸಬಹುದು. ಅಮೆರಿಕದಲ್ಲಿ ಗೂಗಲ್ ಪೇಗಿಂತ ಗೂಗಲ್ ವಾಲೆಟ್ ಹೆಚ್ಚು ಜನಪ್ರಿಯವಾಗಲು ಇದೇ ಕಾರಣ.

Google Payನಲ್ಲಿ ಇರುವ ಎಲ್ಲಾ ವೈಶಿಷ್ಟ್ಯಗಳು Google Walletನಲ್ಲಿ ಸಹ ಲಭ್ಯವಿವೆ. ಬಳಕೆದಾರರು ಜೂನ್ 4, 2024ರವರೆಗೆ Google Pay ಬಳಸಬಹುದು, ಇದರ ಮೂಲಕ ಗಡುವಿನ ನಂತರ ಅಮೇರಿಕನ್ ಬಳಕೆದಾರರು ಮೊತ್ತವನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅಮೇರಿಕಾದಲ್ಲಿರುವ Google Pay ಬಳಕೆದಾರರು ಇದನ್ನು ಗಮನಿಸಬೇಕು.

ಭಾರತ ಮತ್ತು ಸಿಂಗಾಪುರದಂತಹ ದೇಶಗಳಲ್ಲಿ Google Pay ಎಂದಿನಂತೆ ಸೇವೆಗಳನ್ನು ಒದಗಿಸುತ್ತದೆ. ಇದಲ್ಲದೆ, ಆ ದೇಶಗಳಲ್ಲಿನ ಬಳಕೆದಾರರಿಗೆ ಹೆಚ್ಚಿನ ಸೇವೆಗಳನ್ನು ಒದಗಿಸಲು ಕಂಪನಿಯು ಈ ಅಪ್ಲಿಕೇಶನನ್ನು ಮತ್ತಷ್ಟು ಅಭಿವೃದ್ಧಿಪಡಿಸಲಿದೆ ಎಂದು ವರದಿಯಾಗಿದೆ. ಹಾಗಾಗಿ ಭಾರತದಲ್ಲಿ ಗೂಗಲ್ ಪೇ ಬಳಕೆದಾರರು ಚಿಂತಿಸುವ ಅಗತ್ಯವಿಲ್ಲ.

Related Articles

ಇತ್ತೀಚಿನ ಸುದ್ದಿಗಳು