Home ಬೆಂಗಳೂರು ಸರ್ಕಾರದಿಂದ 11 ಮಂದಿ ತಹಶೀಲ್ದಾರರ ವರ್ಗಾವಣೆ ಆದೇಶ

ಸರ್ಕಾರದಿಂದ 11 ಮಂದಿ ತಹಶೀಲ್ದಾರರ ವರ್ಗಾವಣೆ ಆದೇಶ

0

ಬೆಂಗಳೂರು: ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ತಹಶೀಲ್ದಾರ್ ವೃಂದದ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಆದೇಶದಂತೆ,

  • ವಿಶ್ವಜೀತ್ ಮೆಹತಾ ಅವರನ್ನು ಜಿಲ್ಲಾಧಿಕಾರಿಗಳ ಕಚೇರಿ, ಬಳ್ಳಾರಿ ಜಿಲ್ಲೆಯಲ್ಲಿ ಕಚೇರಿ ಸಹಾಯಕರಾಗಿ (ಖಾಲಿ ಹುದ್ದೆಗೆ) ವರ್ಗಾಯಿಸಲಾಗಿದೆ.
  • ಸಿ.ಎಂ. ಮಲ್ಲಿಕಾರ್ಜುನ ಅವರನ್ನು ಜಿಲ್ಲಾಧಿಕಾರಿಗಳ ಕಚೇರಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚುನಾವಣಾ ತಹಶೀಲ್ದಾರ್ ಆಗಿ (ಖಾಲಿ ಹುದ್ದೆಗೆ) ನಿಯೋಜಿಸಲಾಗಿದೆ.
  • ಸಂಧ್ಯಾ ಜಿ.ಎನ್. ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ತಹಶೀಲ್ದಾರ್ ಗ್ರೇಡ್-2 ಆಗಿ (ಖಾಲಿ ಹುದ್ದೆಗೆ) ವರ್ಗಾಯಿಸಲಾಗಿದೆ.
  • ಮಹೇಂದ್ರ ಎ.ಎಚ್. ಅವರನ್ನು ಬೆಂಗಳೂರು ರಾಜ್ಯ ಚುನಾವಣಾ ಆಯೋಗದಲ್ಲಿ ಶಾಖಾಧಿಕಾರಿಯಾಗಿ (ಖಾಲಿ ಹುದ್ದೆಗೆ) ನಿಯೋಜಿಸಲಾಗಿದೆ.

ಈ ವರ್ಗಾವಣೆ ಆದೇಶವು ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಸರ್ಕಾರ ತಿಳಿಸಿದೆ.

You cannot copy content of this page

Exit mobile version