Home ಬೆಂಗಳೂರು ಸರ್ಕಾರದಿಂದ ಶುಚಿ ಯೋಜನೆ 71 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್

ಸರ್ಕಾರದಿಂದ ಶುಚಿ ಯೋಜನೆ 71 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್

ಬೆಂಗಳೂರು : ಶೈಕ್ಷಣಿಕ ವರ್ಷ ಮುಗಿಯಲು ಕೇವಲ ನಾಲ್ಕು ತಿಂಗಳು ಉಳಿದಿರುವಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಈ ವರ್ಷ ಸರ್ಕಾರಿ ಶಾಲೆಗಳಿಗೆ ಶುಚಿ ಕಿಟ್‌ನ(shuchi scheme) ಭಾಗವಾಗಿ ಪೂರೈಸಬೇಕಿದ್ದ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು(sanitary napkin) ವಿತರಿಸಲು ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರಿ ಅನುದಾನಿತ ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ಹಾಸ್ಟೆಲ್‌ಗಳಲ್ಲಿ ನೋಂದಾಯಿಸಲಾದ ಎಲ್ಲಾ ಹದಿಹರೆಯದ ಹೆಣ್ಣುಮಕ್ಕಳಿಗೆ 2,35,74,084 ಪ್ಯಾಡ್‌ ಪ್ರತಿ ಯೂನಿಟ್‌ಗೆ ಅಂದಾಜು ರೂ.30.47/- ರಂತೆ ಒಟ್ಟು ರೂ.71.83ಕೋಟಿ ಮೊತ್ತದಲ್ಲಿ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ ಮೂಲಕ ಖರೀದಿಸಿ ವಿತರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. 9, 10 ನೇ ತರಗತಿ ಹಾಗೂ 1 & 2ನೇ ಪಿ.ಯು.ಸಿ ಹೆಣ್ಣು ಮಕ್ಕಳಿಗೆ 12 ಯೂನಿಟ್ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಖರೀದಿಸಿ, ಪೂರೈಸುವ ಬದಲು 6 ಯೂನಿಟ್ ಸ್ಯಾನಿಟರಿ ನ್ಯಾಪ್‌ಕಿನ್‌ ಗಳನ್ನು ಹಾಗೂ ಉಳಿದ 5 ತಿಂಗಳಿಗೆ 1 ಮುಟ್ಟಿನ ಕವ್‌ಗಳನ್ನು ವಿತರಿಸಲು ಉದ್ದೇಶಿಸಲಾಗಿದೆ.

ಪ್ರತಿ ವರ್ಷ, ಇಲಾಖೆಯು ಶಾಲೆಗಳು ಮತ್ತು ಪಿಯು ಕಾಲೇಜುಗಳಲ್ಲಿ 10 ರಿಂದ 18 ವರ್ಷ ವಯಸ್ಸಿನ 19 ಲಕ್ಷ ಹೆಣ್ಣುಮಕ್ಕಳಿಗೆ ಶುಚಿ ಕಿಟ್‌ಗಳನ್ನು (ಸ್ಯಾನಿಟರಿ ನ್ಯಾಪ್‌ಕಿನ್‌ಗಳು) ಒದಗಿಸುತ್ತದೆ. ವಿದ್ಯಾರ್ಥಿನಿಯರ ಆರೋಗ್ಯ ಮತ್ತು ನೈರ್ಮಲ್ಯವನ್ನು ಗಮನದಲ್ಲಿಟ್ಟುಕೊಂಡು 2024 ರಲ್ಲಿ ಈ ಯೋಜನೆಯನ್ನು ಮರುಪ್ರಾರಂಭಿಸಲಾಯಿತು. ಪ್ರತಿ ಕಿಟ್‌ನಲ್ಲಿ 10 ಸ್ಯಾನಿಟರಿ ನ್ಯಾಪ್‌ಕಿನ್‌ಗಳಿರುತ್ತವೆ. ಶಾಲೆಗಳಲ್ಲಿ ನ್ಯಾಪ್ ಕಿನ್ ಗಳನ್ನು ದಹನ ಮಾಡುವವರನ್ನು ಸಹ ನೇಮಿಸಲಾಗಿತ್ತು.

ಕರ್ನಾಟಕ ಆರೋಗ್ಯ ಇಲಾಖೆಯು ನೇರವಾಗಿ ಶಾಲೆಗಳಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲಿದೆ. ಪ್ರತಿ ಪ್ಯಾಕ್‌ನಲ್ಲಿ 10 ಸ್ಯಾನಿಟರಿ ನ್ಯಾಪ್‌ಕಿನ್‌ಗಳಿವೆ. ಅಲ್ಲದೆ, ವಿದ್ಯಾರ್ಥಿನಿಯರಿಗೆ ಒಂದು ವರ್ಷಕ್ಕೆ ಸಾಕಾಗುವಷ್ಟು ಪ್ಯಾಡ್‌ಗಳನ್ನು ನೀಡಲಾಗುವುದು. ರಾಜ್ಯದಲ್ಲಿ ಹೆಣ್ಣು ಮಕ್ಕಳ ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಶುಚಿ ಯೋಜನೆ ಮಹತ್ವದ್ದಾಗಿದೆ. ಸಿದ್ದರಾಮಯ್ಯ ಅವರ ಹಿಂದಿನ ಅಧಿಕಾರವಧಿಯಲ್ಲಿ ಪ್ರಾರಂಭಿಸಲಾದ ಈ ಕಾರ್ಯಕ್ರಮವನ್ನು ನಂತರ ಬಿಜೆಪಿ ಆಡಳಿತದಲ್ಲಿ ನಿಲ್ಲಿಸಲಾಗಿತ್ತು. ನಾವು ₹47 ಕೋಟಿ ವೆಚ್ಚದಲ್ಲಿ 19 ಲಕ್ಷ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸುತ್ತಿದ್ದೇವೆ” ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದರು.

You cannot copy content of this page

Exit mobile version