ಮಾಜಿ ಕ್ರಿಕೆಟಿಗ ಮತ್ತು ಭಾರತೀಯ ಜನತಾ ಪಕ್ಷದ ಸಂಸದ ಗೌತಮ್ ಗಂಭೀರ್ ಕ್ರೀಡಾಂಗಣದಲ್ಲಿ ಕೊಹ್ಲಿ….ಕೊಹ್ಲಿ..ಎಂದು ಕೂಗಿದ ಕ್ರಿಕೆಟ್ ಅಭಿಮಾನಿಗಳ ಕಡೆಗೆ ಅಶ್ಲೀಲವಾಗಿ ತನ್ನ ಮಧ್ಯದ ಬೆರಳನ್ನು ತೋರಿಸುವ ವೀಡಿಯೊ ವೈರಲ್ ಆಗಿತ್ತು. ಸೆಪ್ಟೆಂಬರ್ 2 ರಂದು ಶ್ರೀಲಂಕಾದಲ್ಲಿ ನಡೆದ ಏಷ್ಯಾ ಕಪ್ 2023 ರ ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಈ ವೀಡಿಯೊವನ್ನು ಚಿತ್ರೀಕರಿಸಲಾಗಿತ್ತು. ಈ ವಿಡಿಯೋ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.
ತನ್ನ ನಡೆಯನ್ನು ಸಮರ್ಥಿಸಿಕೊಂಡಿರುವ ಗೌತಮ್ ಗಂಭೀರ್ “ಆ ಗುಂಪಿನಲ್ಲಿ ʼಭಾರತ ವಿರೋಧಿʼ ಘೋಷಣೆ ಕೂಗುತ್ತಿದ್ದರು ಎಂದು ಆರೋಪಿಸಿದ್ದರು.
“ಅಲ್ಲಿ ಎರಡು ಮೂರು ಜನ ಪಾಕಿಸ್ತಾನಿಗಳು ಭಾರತ ವಿರೋಧಿ ಕಾಮೆಂಟ್ಗಳನ್ನು ಮಾಡುತ್ತಿದ್ದರು. ಹಾಗಾಗಿ ಇದು ನನ್ನ ಸ್ವಾಭಾವಿಕ ಪ್ರತಿಕ್ರಿಯೆಯಾಗಿತ್ತು, ನನ್ನ ದೇಶದ ವಿರುದ್ಧ ಮಾತನಾಡಿದರೆ ನಾನು ಸಹಿಸುವುದಿಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಸಮರ್ಥನೆ ಪ್ರಚಾರ ಪಡೆಯುತ್ತಿದ್ದಂತೆ “ಭಾರತ್, ತೇರೆ ತುಕ್ಡೆ ಹೊಂಗೆ. ಇನ್ಶಾ ಅಲ್ಲಾಹ್, ಇನ್ಶಾಲ್ಲಾಹ್”ಎಂಬ ಇನ್ನೊಂದು ಇದೇ ರೀತಿಯ ವಿಡಿಯೋದಲ್ಲಿ ವೈರಲ್ ಆಗಲು ಆರಂಭವಾಯಿತು. ಇದೇ ನಿಜವಾದ ವಿಡಿಯೋ ಎಂದು ಪ್ರಚಾರ ಮಾಡಲಾಯಿತು.
https://twitter.com/narendramodi177/status/1698734294804648222
ಇಂಡಿಯಾ ಟುಡೇ ಮಾಡಿರುವ ಫ್ಯಾಕ್ಟ್ ಚೆಕ್ನಲ್ಲಿ ಇದೊಂದು ಡಾಕ್ಟರ್ಡ್, ಅಂದರೆ ತಿರುಚಿದ ವಿಡಿಯೋ ಎಂಬುದು ಕಂಡುಬಂದಿದೆ. ಈ ಘೋಷಣೆಯನ್ನು ಹಳೆಯ ವಿಡಿಯೋದಿಂದ ತೆಗೆದುಕೊಂಡು ಗೌತಮ್ ಗಂಭೀರ್ ಮಿಡಲ್ ಫಿಂಗರ್ ತೋರಿಸುವ ವಿಡಿಯೋ ಜೊತೆಗೆ ಜೋಡಿಸಲಾಗಿದೆ.
ಶ್ರೀಲಂಕಾದ ಕ್ರೀಡಾ ಪತ್ರಕರ್ತ ನಿಬ್ರಾಜ್ ರಂಜಾನ್ ಅವರು ಇಂತಹ ಯಾವುದೇ “ಭಾರತ ವಿರೋಧಿ” ಘೋಷಣೆಗಳು ಕೇಳಿಬಂದಿಲ್ಲ, “ಕೊಹ್ಲಿ, ಕೊಹ್ಲಿ” ಎಂದಷ್ಡೇ ಕೇಳುತ್ತಿತ್ತು ಎಂದು ಟ್ವೀಟ್ ಮಾಡಿದ್ದಾರೆ.
https://twitter.com/nibraz88cricket/status/1698930837603995769?s=20
ಶ್ರೀಲಂಕಾದ ಕ್ಯಾಂಡಿಯಲ್ಲಿರುವ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ಕ್ರಿಕೇಟ್ ಪಂದ್ಯಾಟ ನಡೆಯುತ್ತಿದ್ದಾಗ ಸುರಿದ ಮಳೆ ಅಡ್ಡಿಪಡಿಸಿದ ಸಂದರ್ಭದಲ್ಲಿ ಮೂಲ ವೀಡಿಯೊವನ್ನು ಚಿತ್ರೀಕರಿಸಲಾಗಿದೆ.
‘ಭಾರತ ವಿರೋಧಿ’ ವಿಡಿಯೋ ಡಾಕ್ಟರೇಟ್?
ಈ ತಿರುಚಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಟ್ವಿಟರ್ ಖಾತೆಯೊಂದು ಆಜ್ತಕ್ ಯೂಟ್ಯೂಬ್ ವರದಿಯ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡು, ಈ ಆಡಿಯೋವನ್ನು ಇಲ್ಲಿಂದ ತೆಗೆದುಕೊಳ್ಳಲಾಗಿದೆ ಎಂದು ಪ್ರತಿಕ್ರಿಯೆ ನೀಡಿದೆ.
https://twitter.com/kkjons/status/1698741539781148835

ಇದು ಫೆಬ್ರವರಿ 15, 2016 ರ ಆಜ್ತಕ್ ವರದಿಯಾಗಿದ್ದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಈ ವೀಡಿಯೊವನ್ನು ವೈರಲ್ ಮಾಡಿತ್ತು. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿಗಳು ಪ್ರತಿಭಟನೆಯ ಸಂದರ್ಭದಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ್ದರು ಎಂದು ಎಬಿವಿಪಿ ಆರೋಪಿಸಿತ್ತು.
ಆಜ್ತಕ್ ವೀಡಿಯೊದಲ್ಲಿ ( https://www.youtube.com/watch?v=8t7Zt8LY8z0&t=32s ) ಸುಮಾರು 32-ಸೆಕೆಂಡ್ಗಳ ಈ ವೈರಲ್ ವೀಡಿಯೊದಲ್ಲಿ ಬಳಸಲಾದ ಅದೇ ಘೋಷಣೆಯನ್ನು, ಅದೇ ಘೋಷಣೆಯನ್ನು ಗೌತಮ್ ಗಂಭೀರ್ ವಿಡಿಯೋದಲ್ಲಿಯೂ ಬಳಸಲಾಗಿದೆ. ಅಡೋಬ್ ಪ್ರೀಮಿಯರ್ ಪ್ರೊ ಬಳಸಿ ಎರಡೂ ಆಡಿಯೊ ಕ್ಲಿಪ್ಗಳ ತರಂಗ ಮಾದರಿಗಳನ್ನು ತುಲನೆ ಮಾಡುವಾಗ ಸೇಮ್ ಟು ಸೇಮ್ ಒಂದೇ ಎಂದು ಕಂಡು ಬಂದಿದೆ.
ನಿಜವಾಗಿ ಏನಾಗಿದೆ?
- ಕ್ರೀಡಾಂಗಣದಲ್ಲಿ ಕೊಹ್ಲಿ…ಕೊಹ್ಲಿ ಎಂದು ಕೂಗಿದ ಅಭಿಮಾನಿಗಳ ಕಡೆಗೆ ಗೌತಮ್ ಗಂಭೀರ್ ಮಿಡಲ್ ಫಿಂಗ್ ತೋರಿಸಿದ್ದಾರೆ.
- ಇದು ಟೀಕೆಗೆ ಗುರಿಯಾಗುತ್ತಿದ್ದಂತೆ ಗೌತಮ್ ಗಂಭೀರ್ ʼಭಾರತ ವಿರೋಧಿʼ ಘೋಷಣೆ ಕೂಗಿದ್ದಾರೆ ಎಂಬ ಸುಳ್ಳು ಹೇಳಿಕೆ ನೀಡಿದರು.
- ಬಿಜೆಪಿ ನಾಯಕನ ಈ ಸುಳ್ಳು ಹೇಳಿಕೆಯನ್ನು ಸಮರ್ಥಿಸಲು ತಿರುಚಲ್ಪಟ್ಟ ವಿಡಿಯೋವನ್ನು ಹರಿಯಬಿಡಲಾಗಿದೆ.
ಈಗ ಯಾವುದು ದೇಶ ವಿರೋಧಿ ನಡೆ ಎಂಬುದು ಪ್ರಶ್ನಾರ್ಹವಾಗಿದೆ!